ಬ್ರೇಕಿಂಗ್ ನ್ಯೂಸ್
03-05-24 10:24 am HK News Desk ಕ್ರೈಂ
ಮುಂಬೈ, ಮೇ.04: 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿರುವ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ.
ಸದ್ಯ ಈ ಘಟನೆ ಸಿನಿಮೀಯ ತಿರುವು ಪಡೆದುಕೊಂಡಿದೆ. ತನ್ನ ಒಂದು ಮಗುವನ್ನು ತನಗೆ ತಿಳಿಯದಂತೆಯೇ ಮಾರಾಟ ಮಾಡಲಾಗಿದೆ ಎಂದು ದೂರಿರುವ ಆಕೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪೋಷಕರು, ಶಿಕ್ಷಕರು, ವಕೀಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಬಾಲಕಿ ಇಬ್ಬರು ವಿಭಿನ್ನ ಪುರುಷರ ಜತೆ ದೇಹ ಸಂಬಂಧ ಬೆಳೆಸಿದ್ದಳು. ಹೀಗಾಗಿ ಎರಡು ಬಾರಿ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ನವಜಾತ ಶಿಶುವನ್ನು ತನ್ನ ಪೋಷಕರು, ಶಾಲಾ ಪ್ರಾಂಶುಪಾಲರು, ಇಬ್ಬರು ಮಹಿಳಾ ವೈದ್ಯರು, ಸಾಮಾಜಿಕ ಕಾರ್ಯಕರ್ತೆ, ವಕೀಲರು ಮತ್ತು ಇತರರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿಯ ಪೋಷಕರು ಸೇರಿದಂತೆ ಕನಿಷ್ಠ 16 ಮಂದಿಯ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ.
2021ರಲ್ಲಿ 23 ವರ್ಷದ ಅನ್ಯ ಕೋಮಿನ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಾಲಕಿ ಮೊದಲ ಬಾರಿ ಗರ್ಭಿಣಿಯಾಗಿದ್ದಳು. ಆಕೆ ಗರ್ಭ ಧರಿಸಿರುವ ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಬಳಿಕ ಪೋಷಕರು ಶಾಲೆಯ ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಗೆ ವಿಚಾರ ತಿಳಿಸಿ ಅವರ ಸಹಾಯ ಕೋರಿದರು.
7ನೇ ತರಗತಿಯ ಬಳಿಕ ಶಾಲೆಯಿಂದ ಹೊರಗುಳಿದ ಬಾಲಕಿಯ ನಿಯಮಿತ ತಪಾಸಣೆ ಮತ್ತು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ʼʼಇದಕ್ಕೂ ಮೊದಲು ಪೋಷಕರು ತನ್ನನ್ನು ಮುಂಬೈಯ ಯಾವುದೋ ಒಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ವಕೀಲರ ಸಮ್ಮುಖದಲ್ಲಿ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿದ್ದರುʼʼ ಎಂದು ಬಾಲಕಿ ತಿಳಿಸಿದ್ದಾಳೆ. 2021ರ ಸೆಪ್ಟೆಂಬರ್ 24ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮರುದಿನ ಆ ಮಗುವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹಸ್ತಾಂತರಿಸಲಾಯಿತು. ಹೆರಿಗೆಯ ಬಗ್ಗೆ ಯಾರಲ್ಲೂ ಮಾತನಾಡದಂತೆ ಆಕೆಗೆ ಪೋಷಕರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಹೆರಿಗೆಯ ಆರು ತಿಂಗಳ ನಂತರ ಅಪ್ರಾಪ್ತೆ ಮಗುವಿನ ತಂದೆಯನ್ನು ಸಂಪರ್ಕಿಸಿದಳು. ಈ ವೇಳೆ ಆತ ಆಕೆಯನ್ನು ವರಿಸಲು ಸಿದ್ಧನಾಗಿರುವುದಾಗಿ ಹೇಳಿದ್ದ. ಆದರೆ ಪೋಷಕರು ಇದಕ್ಕೆ ಸಮ್ಮತಿ ನೀಡಲಿಲ್ಲ. ʼʼತನ್ನ ಪೋಷಕರು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ ಪೋಷಕರು ಮತ್ತು ಚಿಕ್ಕಪ್ಪ ತಲಾ 1.5 ಲಕ್ಷ ರೂ. ಪಡೆದರೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಇತರ ಕೆಲವರು ಉಳಿದ 1 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದಾರೆʼʼ ಎಂದು ಅಪ್ರಾಪ್ತೆ ದೂರಿದ್ದಾಳೆ. ಈ ಬಗ್ಗೆ ಅವಳು ಪೋಷಕರನ್ನು ಪ್ರಶ್ನಿಸಿದಾಗ ಅಜ್ಜಿಯ ಮನೆಗೆ ಕಳುಹಿಸಿದ್ದರು. ಅಲ್ಲಿ ಅವಳ ಕುಟುಂಬವು 23 ವರ್ಷದ ವ್ಯಕ್ತಿಯೊಂದಿಗೆ ಮದುವೆಯನ್ನು ನಿಶ್ಚಯಿಸಿತ್ತು ಎಂದು ಹೇಳಿದ್ದಾಳೆ.
ಈ ವೇಳೆ ಅಪ್ರಾಪ್ತೆ ಮತ್ತೆ ತನ್ನ ವಿವಾಹ ನಿಶ್ಚಿತವಾದ ಯುವಕನೊಂದಿಗೆ ದೇಹ ಸಂಪರ್ಕ ಬೆಳೆಸಿದಳು. ಬಳಿಕ ಮತ್ತೊಮ್ಮೆ ಗರ್ಭ ಧರಿಸಿದಳು. ಈ ವೇಳೆ ಆತನಿಗೆ ಅಪ್ರಾಪ್ತೆಯ ಮೊದಲ ಮಗುವಿನ ಬಗ್ಗೆ ತಿಳಿದು ಬಂದಿತ್ತು. ಹೀಗಾಗಿ ವಿವಾಹವಾಗಲು ನಿರಾಕರಿಸಿದ್ದಾನೆ.
ಈ ಎರಡನೇ ಮಗುವನ್ನೂ ಮಾರಾಟ ಮಾಡುವಂತೆ ಪೋಷಕರು ಒತ್ತಡ ಹೇರುತ್ತಿರುವುದರಿಂದ ಆಕೆ ಇದೀಗ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾಳೆ. ಮಾರಾಟವಾದ ಹೆಣ್ಣು ಮಗು ಎಲ್ಲಿದೆ ಎಂಬುದನ್ನು ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
A 17-year-old girl from Maharashtra’s Palghar district reportedly became friendly with a 23-year-old man from another religion and engaged in a sexual relationship. The teenager’s life began taking a tragic turn when her parents got to know about her pregnancy. She was impregnated again and her newborns were sold off.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm