ಬ್ರೇಕಿಂಗ್ ನ್ಯೂಸ್
07-05-24 09:48 pm Bangalore Correspondent ಕ್ರೈಂ
ಬೆಂಗಳೂರು, ಮೇ.7: ಖಾಸಗಿ ಕಂಪನಿಯಲ್ಲಿ ಡೈರೆಕ್ಟರ್ ಹುದ್ದೆಯಲ್ಲಿರುವ ಬೆಂಗಳೂರಿನ ಜಯನಗರ ನಿವಾಸಿ 52 ವರ್ಷದ ವ್ಯಕ್ತಿಯೊಬ್ಬರು ಷೇರು ಮಾರ್ಕೆಟಲ್ಲಿ ಹಣ ಹೂಡಿಕೆ ಮಾಡಿ, ಡಬಲ್ ಲಾಭ ಆಗುತ್ತೆ ಎಂಬ ವಂಚಕರ ಮಾತು ಕೇಳಿ ಬರೋಬ್ಬರಿ 5.2 ಕೋಟಿ ರೂಪಾಯಿ ಹಣವನ್ನು ಕಳಕೊಂಡಿದ್ದಾರೆ.
ಹಣ ಕಳಕೊಂಡ ವ್ಯಕ್ತಿ ಎಪ್ರಿಲ್ 8ರಂದು ಬೆಂಗಳೂರು ಸಿಇಎನ್ ಠಾಣೆಗೆ ದೂರು ನೀಡಿ, ತನಗಾದ ವಂಚನೆಯನ್ನು ಹೇಳಿಕೊಂಡಿದ್ದಾರೆ. ಮಾರ್ಚ್ 11ರಂದು ಇವರಿಗೆ ವಾಟ್ಸಪ್ ಮೆಸೇಜ್ ಒಂದು ಬಂದಿತ್ತು. ಸ್ಟಾಕ್ ಮಾರ್ಕೆಟ್ ಹೂಡಿಕೆ ಬಗ್ಗೆ ಇದ್ದ ಮೆಸೇಜ್ ನಲ್ಲಿ bys.app.com ಎನ್ನುವ ವೆಬ್ ಸೈಟ್ ಲಿಂಕ್ ಕೂಡ ಇತ್ತು. ಅದಕ್ಕೆ ಕ್ಲಿಕ್ ಮಾಡಿದ ಕೂಡಲೇ ಇವರ ನಂಬರ್ Y-5 Ever Core Financial Leader ಎಂಬ ಹೆಸರಿನಲ್ಲಿದ್ದ ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿತ್ತು. ಅದರಲ್ಲಿ ಅಂದಾಜು 160 ಮಂದಿ ಸದಸ್ಯರಿದ್ದರು.
ಇದೇ ವೇಳೆ, ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ನೀವು ಅದರಲ್ಲಿ ಕೊಟ್ಟಿರುವ ಲಿಂಕ್ ಒತ್ತಿ ಸ್ಟಾಕ್ ಮಾರ್ಕೆಟ್ ಏಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದರು. ಏಪ್ ಡೌನ್ಲೋಡ್ ಮಾಡಿಕೊಂಡಿದ್ದ ವ್ಯಕ್ತಿ, ಬಳಿಕ ಅವರು ಹೇಳಿದಂತೆ ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರು. ಕೆಲವೇ ವಾರಗಳಲ್ಲಿ 5.2 ಕೋಟಿಯಷ್ಟು ರೂಪಾಯಿ ಹಣವನ್ನು ತನ್ನ ವಿವಿಧ ಐದು ಬ್ಯಾಂಕ್ ಖಾತೆಗಳಿಂದ ಹೂಡಿಕೆ ಮಾಡಿದ್ದರು. ಮತ್ತಷ್ಟು ಹಣವನ್ನು ಅದರಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರು. ಮಾರ್ಕೆಟ್ ಅಪ್ ಆಗಿರುವುದನ್ನು ತಿಳಿದ ಈ ವ್ಯಕ್ತಿ ಎಪ್ರಿಲ್ 2ರಂದು ಒಂದಷ್ಟು ಹಣವನ್ನು ಮರಳಿ ಹಿಂಪಡೆಯಲು ಯತ್ನಿಸಿದ್ದು, ಆದರೆ ಹಣ ಹಿಂಪಡೆಯುವುದು ಸಾಧ್ಯವಾಗಲಿಲ್ಲ. ಬೇರೆಯವರಲ್ಲಿ ಈ ಬಗ್ಗೆ ಕೇಳಿದಾಗ, ಅದೇನೋ ಮೋಸದ ಆಟ ಎನ್ನುವ ವಿಚಾರ ಗೊತ್ತಾಗಿದೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಮೋಸ ಹೋಗಿದ್ದೇನೆಂದು ತಿಳಿದು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕೋಟ್ಯಂತರ ರೂಪಾಯಿ ಹಣ ಕಳಕೊಂಡಿದ್ದರಿಂದ ಇಡಿ ಮತ್ತು ಐಟಿ ಅಧಿಕಾರಿಗಳು ಇದರ ಬಗ್ಗೆ ತನಿಖೆಗೆ ಮುಂದಾಗುವ ಸಾಧ್ಯತೆಯಿದೆ. ಅಲ್ಲದೆ, ಮೋಸಗಾರರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ಹಣವನ್ನು ಮುಟ್ಟುಗೋಲು ಹಾಕಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಸ್ಟಾಕ್ ಮಾರ್ಕೆಟ್ ಹೂಡಿಕೆ ಎಂಬ ಹೆಸರಲ್ಲಿ ವಾಟ್ಸಪ್ ನಲ್ಲಿ ಮೆಸೇಜ್ ಕಳುಹಿಸುವುದು, ಕರೆ ಮಾಡಿ ಒತ್ತಾಯ ಪಡಿಸುವ ಕೃತ್ಯಗಳು ಹೆಚ್ಚಿದ್ದು, ವಿದ್ಯಾವಂತರೇ ಈ ಮೋಸದ ಜಾಲಕ್ಕೆ ಬಲಿ ಬೀಳುತ್ತಿದ್ದಾರೆ.
In a recent case of cyber fraud, a 52-year-old Bengaluru businessman, identified as Sharath (name changed), residing in Jayanagar, Bengaluru fell victim to a scam involving the stock market, resulting in a loss of Rs 5.2 crore, according to a report.
18-07-25 04:48 pm
HK News Desk
Mangalore South ACP Vijayakranti: ಮಂಗಳೂರು ದಕ್...
18-07-25 03:38 pm
Minister Dinesh Gundu Rao, Dharmasthala: ಧರ್ಮ...
17-07-25 07:45 pm
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 03:19 pm
Mangalore Correspondent
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm