ಬ್ರೇಕಿಂಗ್ ನ್ಯೂಸ್
17-05-24 05:38 pm HK News Desk ಕ್ರೈಂ
ನವದೆಹಲಿ, ಮೇ.17: ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್ ಅವರ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಹಲ್ಲೆ ನಡೆಸಲಾಗಿದೆ. ಕೇಜ್ರಿವಾಲ್ ಆಪ್ತ ಮತ್ತು ಪರ್ಸನಲ್ ಅಸಿಸ್ಟೆಂಟ್ ಆಗಿರುವ ಬಿಭವ್ ಕುಮಾರ್ ಎಂಬಾತ ತನ್ನ ಮೇಲೆ 7-8 ಬಾರಿ ತಿವಿದು ಹಲ್ಲೆ ನಡೆಸಿದ್ದಾನೆಂದು ಸ್ವಾತಿ ಮಾಲಿವಾಲ್ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯೂ ಆಗಿರುವ ಸ್ವಾತಿ ಮಾಲಿವಾಲ್ ಮೇ 13ರಂದು ಬೆಳಗ್ಗೆ 9 ಗಂಟೆಗೆ ದೆಹಲಿಯ ಸಿಎಂ ನಿವಾಸಕ್ಕೆ ತೆರಳಿದ್ದರು. ಡ್ರಾಯಿಂಗ್ ರೂಮಿನಲ್ಲಿ ಕುಳಿತುಕೊಂಡಿದ್ದಾಗ, ಬಿಭವ್ ಕುಮಾರ್ ಅಲ್ಲಿಗೆ ಬಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ನೀವು ಹೇಸಿಗೆಯಿಲ್ಲದ ಮಹಿಳೆಯರು. ನಮ್ಮ ಮಾತನ್ನು ಯಾಕೆ ಕೇಳುತ್ತಿಲ್ಲ ಅಂತ ನೋಡುತ್ತೀನಿ, ನಿಮಗೆಲ್ಲ ಪಾಠ ಕಲಿಸುತ್ತೀನಿ ಎಂದು ರೇಗಾಡಿದ್ದಾನೆ.


ನೇರವಾಗಿ ಬಂದು ಎದೆ, ಹೊಟ್ಟೆಯ ಭಾಗಕ್ಕೆ ಏಳೆಂಟು ಬಾರಿ ಗುದ್ದಿದ್ದಾನೆ. ತಿಂಗಳ ಪೀರಿಯಡ್ ನಲ್ಲಿ ಇದ್ದುದರಿಂದ ಹೊಟ್ಟೆ ನೋವಿನಿಂದ ಚೀರಾಡಿ ನೆಲಕ್ಕೆ ಬಿದ್ದೆ. ಆದರೂ ಆತ ಕೇಳದೆ ಕಾಲಿನಲ್ಲಿ ಒದ್ದಿದ್ದಾನೆ. ನನ್ನ ಶರ್ಟ್ ಹರಿದಿತ್ತು. ನೆಲಕ್ಕೆ ಬಿದ್ದು ಕಾಪಾಡಿ ಕಾಪಾಡಿ ಎಂದು ಬೊಬ್ಬೆ ಹೊಡೆದರೂ ಯಾರೂ ನನ್ನತ್ತ ಬರಲಿಲ್ಲ. ಅಲ್ಲಿ ಬೇರೆ ಯಾರೂ ಇರಲಿಲ್ಲ. ಕೆಲ ಹೊತ್ತಿನಲ್ಲಿ ಬಿಭವ್ ಕುಮಾರ್ ಹೊರಗೆ ಹೋಗಿದ್ದು, ಸೆಕ್ಯುರಿಟಿ ಗಾರ್ಡ್ ಜೊತೆಗೆ ಮತ್ತೆ ಒಳಗೆ ಬಂದಿದ್ದಾನೆ. ನನ್ನನ್ನು ಹೊರಗೆ ಹೋಗಲು ಹೇಳಿದ್ದಾನೆ. ನನಗೆ ಅನಿರೀಕ್ಷಿತವಾಗಿ ಆದ ಘಟನೆಯಿಂದ ಶಾಕ್ ಆಗಿತ್ತು. ಅಲ್ಲಿಂದ ಹೊರಬಂದು ಆಟೋದಲ್ಲಿ ನೇರವಾಗಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ತೆರಳಿದ್ದೆ ಎಂದು ದೂರಿನಲ್ಲಿ ತನಗಾದ ಹಲ್ಲೆಯನ್ನು ಸ್ವಾತಿ ವಿವರಿಸಿದ್ದಾರೆ.
ಅಂದು ನಡೆಯುವುದಕ್ಕೂ ಆಗದೆ ಠಾಣೆಯಲ್ಲಿ ಹೆಚ್ಚು ಕಾಲ ನಿಲ್ಲದೆ ಆಸ್ಪತ್ರೆಗೆ ಹೋಗಿದ್ದೆ. ಲಿಖಿತ ಹೇಳಿಕೆಯನ್ನು ಅಂದು ನೀಡಲು ಆಗಿರಲಿಲ್ಲ. ಲಕ್ಷಾಂತರ ಮಹಿಳೆಯರಿಗೆ ಸಹಾಯ ಮಾಡಿದ್ದೇನೆ. ನನಗೇ ಹೀಗಾಗುತ್ತೆ ಎಂದುಕೊಂಡಿರಲಿಲ್ಲ. ಬಹುಕಾಲದಿಂದ ನನಗೆ ಗೊತ್ತಿರುವ ವ್ಯಕ್ತಿಯೇ ನನಗೆ ಈ ರೀತಿ ಹಲ್ಲೆ ಮಾಡಿದ್ದಾನೆ ಎಂದು ಸ್ವಾತಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಶುಕ್ರವಾರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಮೂರು ಗಂಟೆ ಕಾಲ ವೈದ್ಯರು ತಪಾಸಣೆ ನಡೆಸಿದ್ದಾರೆ.
ಇದೇ ವೇಳೆ, ಆರೋಪಿ ಬಿಭವ್ ಕುಮಾರ್ ತಲೆಮರೆಸಿಕೊಂಡಿದ್ದು, ಅಮೃತಸರದಲ್ಲಿದ್ದಾನೆ ಎಂದು ಹೇಳಲಾಗಿತ್ತು. ಇದಲ್ಲದೆ, ಆಪ್ ಪಕ್ಷದಿಂದ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಪಕ್ಷದ ನಾಯಕರು ತಿಳಿಸಿದ್ದಾರೆ. ಆದರೆ, ಇದೇ ವೇಳೆ, ಲಕ್ನೋ ಏರ್ಪೋರ್ಟಿನಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಸ್ಥಳೀಯ ಮುಖಂಡರು ಸ್ವಾಗತಿಸುತ್ತಿದ್ದಾಗ ಅಲ್ಲಿ ಬಿಭವ್ ಕುಮಾರ್ ಜೊತೆಗಿದ್ದುದು ಕ್ರಮದ ವಿಚಾರ ಸಂಶಯಕ್ಕೆ ಕಾರಣವಾಗಿದೆ.
The FIR filed in connection with the alleged assault of AAP Rajya Sabha MP Swati Maliwal reveals disturbing details of abuse and the sequence of events that took place at Delhi Chief Minister Arvind Kejriwal's residence on May 13. As per the FIR, Maliwal alleged how Kejriwal's personal assistant and aide Bibhav Kumar slapped her 7–8 times and repeatedly kicked her in her stomach and pelvis as she pleaded for him to stop and mentioned that she was on her periods.
12-03-26 02:48 pm
HK News Staffer
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 500 ರಿಂದ 600 ವರ್ಷ ಹಳ...
11-03-26 12:57 pm
ಶಿಕ್ಷಕರಿಗೆ ಬೀದಿ ನಾಯಿ ನಿಯಂತ್ರಣ ಜವಾಬ್ದಾರಿ ಕೊಟ್ಟ...
11-03-26 11:48 am
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
12-03-26 02:44 pm
HK News Staffer
Cyber Fraud Awareness, Mangalore: ಸೈಬರ್ ವಂಚನೆ...
12-03-26 08:33 am
Gas News, Mangalore: ಗಲ್ಫ್ ಯುದ್ಧಕ್ಕೆ ಗ್ಯಾಸ್ ಟ...
11-03-26 09:15 pm
ಬಾಡಿಗೆ ಮನೆಯಲ್ಲಿ ಡ್ರಗ್ಸ್ ಮಾರಾಟ ; ಬಂಟ್ವಾಳದ ನೇರಳ...
11-03-26 07:22 pm
ಗ್ಯಾಸ್ ಬಿಕ್ಕಟ್ಟು ; ಕುಕ್ಕೆ ಸುಬ್ರಹ್ಮಣ್ಯಕ್ಕೆ ತಟ್...
11-03-26 06:26 pm
12-03-26 12:12 pm
HK News Staffer
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm