ಬ್ರೇಕಿಂಗ್ ನ್ಯೂಸ್
10-07-24 09:36 pm HK News Desk ಕ್ರೈಂ
ತಮಿಳುನಾಡು, ಜುಲೈ.10: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಒಂದು ಮಾತಿದೆ. ಆದ್ರೆ ಈ ಗಾದೆ ಮಾತೇನಾದ್ರೂ ಒಂದು ಸುಳ್ಳು ಹೇಳಿ, ಸಾವಿರ ಮದುವೆ ಆಗು ಅಂತ ಆಗೋಕೆ ಸಾಧ್ಯಾನಾ? ಆದರೆ ಅದು ಸಾವಿರ ಅಲ್ಲದೇ ಇದ್ರೂ ಬೇಜಾನ್ ಸುಳ್ಳು ಹೇಳಿ. ಇಲ್ಲಿ ಮಹಾರಾಣಿ ಒಬ್ಬಳು ಮಹಿಳೆ ಮದುವೆಯಾಗಿರೋದು ಬರೋಬ್ಬರಿ 50 ಬಾರಿ.
ಹೌದು ಈ ಶಾಕಿಂಗ್ ಘಟನೆ ನಮ್ಮ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಬಯಲಾಗಿದೆ. ತಿರುಪ್ಪೂರು ನಿವಾಸಿಯಾಗಿರೋ ಸಂಧ್ಯಾ, ಈ ಘನಕಾರ್ಯ ಮಾಡಿರೋ ಮಹಾತಾಯಿ. ಅಷ್ಟಕ್ಕೂ ಈ ಮಹಿಳೆ ಮೋಸ ಮಾಡಿ ಮದುವೆಯಾಗಿರೋದು ಯಾವುದೇ ಸಾಮಾನ್ಯ ವ್ಯಕ್ತಿಗಳನಲ್ಲ. ಅಸಲಿಗೆ ಈಕೆಯ ಲಿಸ್ಟ್ನಲ್ಲಿ ಅಂದ್ರೆ ಈ ಹಾಫ್ ಸೆಂಚುರಿ ಮ್ಯಾರೇಜ್ನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಅನೇಕ ಇನ್ಸ್‌ಪೆಕ್ಟರ್ಗಳೂ ಇದ್ದಾರಂತೆ.
ಅಷ್ಟಕ್ಕೂ ಈಕೆಯ ಮದುವೆ ಆಟ ಬಯಲಾಗಿದ್ದೇ ಈಕೆ ಕಟ್ಟಿಕೊಂಡಿರೋ ಓರ್ವ ಪತಿಯಿಂದಲೇ. ತಿರುವೂರ್ ಗ್ರಾಮದ ಓರ್ವ ಈಕೆಯನ್ನು ಮದುವೆಯಾಗಿದ್ದ. ಆದ್ರೆ ಮದುವೆಯಾದ ಮೂರೇ ತಿಂಗಳಿಗೆ ಈಕೆಯ ವರ್ತನೆ ಹಾಗೂ ನಡವಳಿಕೆಯಲ್ಲಿ ಚೇಂಜಸ್ ಕಾಣಿಸ್ತಂತೆ. ಹಾಗಾಗಿ ಈಕೆಯ ಬಗ್ಗೆ ಅನುಮಾನಗೊಂಡ ಪತಿರಾಯ ಅಂತೂ ಇಂತೂ ಈಕೆಯ ಬ್ಯಾಕ್ಗ್ರೌಂಡ್ ಪತ್ತೆ ಹಚ್ಚೋಕೆ ಮುಂದಾಗಿದ್ದಾನೆ. ಆಕೆಯ ಆಧಾರ್ ಕಾರ್ಡ್ ನೋಡಿ ಒಂದು ಕ್ಷಣಕ್ಕೆ ಆತನಿಗೂ ದಂಗಾಗಿದೆ. ಯಾಕಂದ್ರೆ ಈಕೆಯ ಆಧಾರ್ ಕಾರ್ಡ್ನಲ್ಲಿ ಪತಿಯ ಹೆಸರಿನ ಜಾಗದಲ್ಲಿ ಬೇರೆ ವ್ಯಕ್ತಿಯ ಹೆಸರಿರೋದು ಪತ್ತೆಯಾಗಿದೆ. ಇಷ್ಟಾದ ಮೇಲೆ ಯಾವ ಗಂಡ ತಾನೆ ಸುಮ್ಮನೆ ಇರೋಕೆ ಸಾಧ್ಯ ಅಲ್ವಾ?? ಆಗಲೇ ಈ ವ್ಯಕ್ತಿ ಪೊಲೀಸರ ಮೊರೆ ಹೋಗಿ ಕಂಪ್ಲೇಂಟ್ ಕೊಟ್ಟಿದ್ದಾನೆ.
ಆಗಲೇ ಗೊತ್ತಾಗಿದ್ದು ಈಕೆಯ ಮದುವೆಯ ಕಹಾನಿ. ಆರಂಭದಲ್ಲಿ ಈಕೆ 50 ಮದುವೆ ಆಗಿದ್ದಾಳೆ ಅಂತ ಆತನಿಗೂ ಗೊತ್ತಿರಲಿಲ್ಲವಂತೆ. ಆದ್ರೆ ಚೈನ್ನಲ್ಲಿ ಒಂದು ಲಿಂಕ್ ಎಳೆದ್ರೆ ಯಾವ ರೀತಿ ಹಿಂದಿಂದೆ ಒಂದೊಂದೇ ಲಿಂಕ್ ಬರುತ್ತೋ.. ಅದೇ ಥರಾ.. ಈಕೆಯ ಮ್ಯಾರೇಜ್ ಕಹಾನಿ ಕೂಡ ಬಯಲಾಗಿದೆ.. ಒಂದು ಹತ್ತಾಗಿ, ಹತ್ತು ಐವತ್ತಾಗಿದೆ.
ಈ ಗ್ರೇಟ್ ತಮಿಳುನಾಡು ಮ್ಯಾರೇಜ್ ಸ್ಟೋರಿ ಬಯಲಾದ ಮೇಲೆ ಪೊಲೀಸರು ಈಕೆಯನ್ನು ಕರೆಸಿ. ಯಾಕಮ್ಮಾ ಹಿಂಗ್ ಮಾಡ್ದೆ ಅಂತ ಕೇಳಿದ್ರೆ ಈಕೆ ಕೊಟ್ಟ ಉತ್ತರವೇ ಹಣ ಮತ್ತು ಆಭರಣಕ್ಕಾಗಿ ಸರ್ ಅಂತ. ಆನ್ಲೈನ್ನಲ್ಲಿ ಭೇಟಿ ಮಾಡೋದು, ಸಲುಗೆ ಬೆಳೆಸಿಕೊಳ್ಳೋದು, ಆಮೇಲೆ ಮದುವೆ ನಾಟಕ ಆಡಿ ಕೈಕೊಟ್ಟು, ಬೇರೆ ಬಕ್ರಾನ ಹುಡುಕೋದು ಇದೆಲ್ಲವನ್ನೂ ಆಕೆ ಬಾಯ್ಬಿಟ್ಟಿದ್ದಾಳೆ.
ನೋಡಿ ಮದುವೆ ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತೆ.. ಆದ್ರೆ ಈ ಸಂಧ್ಯಾಗೆ ಮಾತ್ರ ಇದೊಂಥರಾ ಹವ್ಯಾಸ ಇದ್ದಂಗೆ. ಇಂತವರಿಂದಾನೋ ಏನೋ.. ಅದೆಷ್ಟೋ ಹುಡುಗರಿಗೆ ಮನೇಲಿ ಬಲವಂತ ಮಾಡ್ತಾ ಇದ್ರೂ ಮದುವೆ ಬಗ್ಗೆ ನಂಬಿಕೆ ಇಲ್ಲ.. ಮದುವೆ ಮಾಡಿಕೊಳ್ಳೋ ಧೈರ್ಯಾನೂ ಇಲ್ಲ ಅನ್ಸುತ್ತೆ.
There is a saying that tell a thousand lies and marry once. But is it possible to tell a lie and get a thousand marriages? But even if it is not a thousand, tell a lie. This woman was married 50 times.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm