ಬ್ರೇಕಿಂಗ್ ನ್ಯೂಸ್
15-03-26 04:57 pm HK News Desk ದೇಶ - ವಿದೇಶ
ಟೆಹ್ರಾನ್, ಮಾರ್ಚ್ 15: ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿರುವಾಗಲೇ ಅಮೆರಿಕ ವಿರುದ್ಧ ತೊಡೆ ತಟ್ಟಲು ಯೆಮನ್ ಮೂಲದ ಹೌತಿ ಬಂಡುಕೋರ ಉಗ್ರರು ಸಜ್ಜಾಗಿದ್ದಾರೆ. ಇವರು ರಂಗಕ್ಕಿಳಿದರೆ ಹರ್ಮುಜ್ ಬಳಿಕ ಏಶ್ಯಾ - ಯುರೋಪ್ ಸಂಪರ್ಕದ ಮತ್ತೊಂದು ಜಲಸಂಧಿ ಬಂದ್ ಆಗುವ ಸಾಧ್ಯತೆಯಿದೆ.
ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹೌತಿಗಳು ಯುದ್ಧಕ್ಕೆ ಕೈಜೋಡಿಸಿದರೆ ಹಾರ್ಮುಜ್ ಬಳಿಕ ಮತ್ತೊಂದು ನಿರ್ಣಾಯಕ ಜಲಸಂಧಿ ಬಾಬ್ ಎಲ್- ಮಂಡೇಬ್ ಬಂದ್ ಆಗಲಿದೆ. ಹರ್ಮುಜ್ ಬಳಿಕ ಈ ಜಲಸಂಧಿಯೂ ಬಂದ್ ಆದರೆ, ಜಾಗತಿಕ ವ್ಯಾಪಾರದ ಮೇಲೆ ಮತ್ತಷ್ಟು ಹೊಡೆತ ಬೀಳಲಿದೆ. ಇಲ್ಲಿಯ ವರೆಗೂ ಇರಾನ್ ವಿರುದ್ಧದ ಯುದ್ಧಕ್ಕೆ ಏನನ್ನೂ ಪ್ರತಿಕ್ರಿಯಿಸದ ಹೌತಿಗಳು ಈಗ ಮಾತನಾಡಿದ್ದು ಯಾವುದೇ ಕ್ಷಣದಲ್ಲಿ ಪ್ರತಿಕ್ರಿಯಿಸಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಹೌತಿಗಳು ಈ ಪ್ರದೇಶದಲ್ಲಿ ಇರಾನ್‌ನ ಮೂರು-ಹಂತದ ತಂತ್ರದ ಭಾಗವಾಗಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಇದೇ ವೇಳೆ ಹೌತಿಗಳು ಜೊತೆಗೆ ಇತರ ಬಂಡುಕೋರ ಗುಂಪುಗಳೂ ಆಲರ್ಟ್ ಆಗಿದ್ದಾರೆ. ಇರಾನ್ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಸೇರಬಹುದು. ಇದರಿಂದ ಬಾಬ್ ಎಲ್- ಮಂಡೇಬ್ ಜಲಸಂಧಿ ಬಂದ್ ಆಗಬಹುದು ಎಂದು ಇರಾನ್ ಫಾಕ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಇರಾನ್ ಹಾರ್ಮುಜ್ ಜಲಸಂಧಿ ಬಂದ್ ಮಾಡುವ ಮೂಲಕ ಸರಕು ಸಾಗಣೆ ಹಡಗುಗಳ ಮಾರ್ಗವನ್ನು ತಡೆಯುತ್ತಿರುವ ವರದಿಗಳ ನಡುವೆ ಇದೀಗ ಅದರಂತೆ ನಿರ್ಣಾಯಕವಾದ ಮತ್ತೊಂದು ಜಲಸಂಧಿ ಬಾಬ್ ಎಲ್-ಮಂಡೇಬ್ ಬಂದ್ ಮಾಡಲು ಮುಂದಾಗಿದೆ.
ಬಾಬ್ ಎಲ್-ಮಂಡೇಬ್ ಕೆಂಪು ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಮತ್ತು ಅಟ್ಲಾಂಟಿಕ್ ಸಾಗರಕ್ಕೆ ಪರಿಣಾಮಕಾರಿಯಾಗಿ ಸಂಪರ್ಕಿಸುತ್ತದೆ. ಈ ಮಾರ್ಗವು ಏಷ್ಯಾ-ಯುರೋಪ್ ವ್ಯಾಪಾರಕ್ಕೆ ಪ್ರಮುಖವಾಗಿದೆ. ಬಾಬ್ ಎಲ್-ಮಂಡೇಬ್ ಮಾರ್ಗವನ್ನು ನಿರ್ಬಂಧಿಸಲು ಹೌತಿಗಳು ಮುಂದಾದರೆ ಯುದ್ಧ ಮತ್ತಷ್ಟು ವಿನಾಶಕಾರಿಯಾಗಲಿದೆ. ಜಾಗತಿಕ ವ್ಯಾಪಾರವು ಭಾರಿ ಆಘಾತವನ್ನು ಎದುರಿಸಬೇಕಾಗುತ್ತದೆ. ಇಲ್ಲಿಂದ ಪ್ರಪಂಚದ ಸರಿಸುಮಾರು ಶೇ.30 ರಷ್ಟು ತೈಲವನ್ನು ಒಯ್ಯುತ್ತವೆ ಮತ್ತು ಸೂಯೆಜ್ ಕಾಲುವೆಯ ಮೂಲಕ ಏಷ್ಯಾ-ಯುರೋಪ್ ಕಡಲ ವ್ಯಾಪಾರದ ಪ್ರಮುಖ ಪಾಲನ್ನು ನಿರ್ವಹಿಸುತ್ತವೆ. ಸೌದಿ ಅರೇಬಿಯಾ ಈ ಜಲಸಂಧಿ ಮೂಲಕ ಕೆಂಪು ಸಮುದ್ರದ ಪ್ರವೇಶ ದ್ವಾರದಲ್ಲಿ ಪರ್ಯಾಯ ತೈಲ ವಿತರಣಾ ಮಾರ್ಗವನ್ನು ಪ್ರಾರಂಭಿಸಿದೆ ಎಂಬ ಅಂಶವನ್ನು ಗಮನದಲ್ಲಿಟ್ಟು, ಬಾಲ್ ಎಲ್-ಮಂಡೇಬ್ ಸಂಭಾವ್ಯ ಬಂದ್ ಆಗುವುದು ಮಹತ್ವ ಪಡೆದುಕೊಂಡಿದೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm