News Anchor Divya Vasantha arrest, crime: ಬ್ಲ್ಯಾಕ್‌ ಮೇಲ್ ಪ್ರಕರಣ ; ತಲೆಮರೆಸಿಕೊಂಡಿದ್ದ ಆ್ಯಂಕರ್ ದಿವ್ಯಾ ವಸಂತ ಕೇರಳದಲ್ಲಿ ಪೊಲೀಸರ ಬಲೆಗೆ, ಎರಡು ಎಫ್ಐಆರ್ ದಾಖಲು 

11-07-24 04:24 pm       Bangalore Correspondent   ಕ್ರೈಂ

ಬ್ಲ್ಯಾಕ್‌ ಮೇಲ್ ಪ್ರಕರಣದಲ್ಲಿ ಸಿಕ್ಕಿಬಿದ್ದು ತಲೆಮರೆಸಿಕೊಂಡಿದ್ದ ಟಿವಿ ಆಂಕರ್ ದಿವ್ಯಾ ವಸಂತಾಳನ್ನು ಬೆಂಗಳೂರಿನ ಜೀವನ್ ಭೀಮಾ ನಗರ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 

ಬೆಂಗಳೂರು, ಜುಲೈ 11: ಬ್ಲ್ಯಾಕ್‌ ಮೇಲ್ ಪ್ರಕರಣದಲ್ಲಿ ಸಿಕ್ಕಿಬಿದ್ದು ತಲೆಮರೆಸಿಕೊಂಡಿದ್ದ ಟಿವಿ ಆಂಕರ್ ದಿವ್ಯಾ ವಸಂತಾಳನ್ನು ಬೆಂಗಳೂರಿನ ಜೀವನ್ ಭೀಮಾ ನಗರ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 

ದಿವ್ಯಾ ವಸಂತ ಮತ್ತು ಗ್ಯಾಂಗ್ ಇಂದಿರಾನಗರದ ಸ್ಪಾ ಮಾಲೀಕನಿಗೆ ಬೆದರಿಸಿ ಹಣ ಸುಲಿಗೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈಕೆ ತನ್ನ ಸೋದರನ ಬಂಧನ ನಂತರ ತಲೆಮರೆಸಿಕೊಂಡಿದ್ದು ಕೇರಳದಲ್ಲಿರುವ ಮಾಹಿತಿ ಇತ್ತು. 

ಒಂದು ವಾರದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ದಿವ್ಯಾ ತಮಿಳುನಾಡು ಮೂಲಕ ಕೇರಳಕ್ಕೆ ತೆರಳಿದ್ದು ಪತ್ತೆಯಾಗಿತ್ತು. ಸದ್ಯ ಕೇರಳದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿರುವ ಜೀವನ್ ಭೀಮಾನಗರ ಪೊಲೀಸರು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇಂದಿರಾನಗರದ 'ಸ್ಪಾ' ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರು. ಹಣ ಸುಲಿಗೆಗೆ ಯತ್ನಿಸಿದ ಪ್ರಕರಣದಲ್ಲಿ ರಾಜ್ ನ್ಯೂಸ್‌ ಸಿಇಓ ಎನ್ನಲಾದ ರಾಜಾನುಕುಂಟೆ ವೆಂಕಟೇಶ್, ದಿವ್ಯಾಳ ತಮ್ಮ ಸಂದೇಶ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 

ತಮ್ಮ ಸುಲಿಗೆ ಕೃತ್ಯಗಳಿಗಾಗಿ ವಾಟ್ಸ್ ಆಪ್‌ನಲ್ಲಿ 'ಸ್ಪೈ ರಿಸರ್ಚ್ ಟೀಂ' ಹೆಸರಿನ ಗ್ರೂಪ್ ಅನ್ನು ವೆಂಕಟೇಶ್‌ ಹಾಗೂ ದಿವ್ಯಾ ಮಾಡಿಕೊಂಡಿದ್ದರು. ಗ್ರೂಪ್‌ನಲ್ಲಿ ತಮ್ಮ ಪ್ಲಾನ್ ಬಗ್ಗೆ ಚರ್ಚಿಸುತ್ತಿದ್ದರು. ಇದೇ ವೇಳೆ, ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಇದೇ ತಂಡವು ಇಂದಿರಾ ನಗರದ ಮೈಕಲ್ ಪಾಳ್ಯ ಸಮೀಪದ ಸಹರಾ ಇಂಟರ್ ನ್ಯಾಷನಲ್ ಸ್ಪಾದ ವ್ಯವಸ್ಥಾಪಕ ಮಹೇಶ್ ಶೆಟ್ಟಿಗೆ ಬೆದರಿಸಿ 1 ಲಕ್ಷ ರು. ಸುಲಿಗೆ ಮಾಡಿದ್ದು, ಈ ಬಗ್ಗೆ ರಾಜ್ ನ್ಯೂಸ್‌ ಸಿಇಓ ವೆಂಕಟೇಶ್ ಹಾಗೂ ಇತರರ ವಿರುದ್ಧ ಇಂದಿರಾನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Bengaluru police have made a significant breakthrough in the ongoing investigation of an extortion case involving the Tree Spa and beauty owner in Indiranagar. Kannada anchor Divya Vasantha, along with several accomplices, has been apprehended in connection with the alleged threats and extortion attempts targeting the manager of the spa near Michal Palya.