ಬ್ರೇಕಿಂಗ್ ನ್ಯೂಸ್
12-07-24 08:51 pm HK News Desk ಕ್ರೈಂ
ಹೈದರಾಬಾದ್, ಜುಲೈ.12: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆಡಳಿತ ನಡೆಸುತ್ತಿರುವ ತೆಲುಗು ದೇಶಂ ಪಾರ್ಟಿ ಶಾಸಕ ರಘುರಾಮ್ ಕೃಷ್ಣರಾಜು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಗುಂಟೂರು ಜಿಲ್ಲೆಯ ನಗರಪಾಲಂ ಠಾಣೆಗೆ ಹಳೆಯ ವಿಚಾರದಲ್ಲಿ ಶಾಸಕ ರಘುರಾಮ್ ಕೃಷ್ಣರಾಜು ದೂರು ನೀಡಿದ್ದಾರೆ. 2021 ಮೇ 14ರಂದು ತನ್ನನ್ನು ಸಿಐಡಿ ಅಧಿಕಾರಿಗಳು ಹೈದರಾಬಾದ್ ನಲ್ಲಿ ಬಂಧಿಸಿ ಕೋರ್ಟಿಗೆ ಹಾಜರುಪಡಿಸದೆ ಗುಂಟೂರು ಜಿಲ್ಲೆಗೆ ಒಯ್ದಿದ್ದರು. ಅಲ್ಲದೆ, ಸಿಎಂ ಜಗನ್ ರೆಡ್ಡಿ ಮುಂದೆಯೇ ತನ್ನ ಮೇಲೆ ಇಬ್ಬರು ಅಧಿಕಾರಿಗಳು ಹಲ್ಲೆ ನಡೆಸಿದ್ದರು. ಹಲ್ಲೆಗೆ ಆಗಿನ ಸಿಎಂ ಜಗನ್ ರೆಡ್ಡಿ ಪಿತೂರಿಯೇ ಕಾರಣವಾಗಿತ್ತು ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ನನ್ನ ಮೇಲೆ ಸಿಐಡಿ ಅಧಿಕಾರಿಗಳು ಸುಳ್ಳು ದೂರು ದಾಖಲಿಸಿದ್ದರು. ನನ್ನನ್ನು ಬಲವಂತವಾಗಿ ಪೊಲೀಸ್ ಜೀಪಿನಲ್ಲಿ ತುಂಬಿಸಿ ಹೈದರಾಬಾದಿನಿಂದ ಗುಂಟೂರು ಜಿಲ್ಲೆಗೆ ಒಯ್ದಿದ್ದರು. ಕಾನೂನಿಗೆ ವಿರುದ್ಧವಾಗಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಐಪಿಎಸ್ ಅಧಿಕಾರಿಗಳಾದ ಪಿವಿ ಸುನಿಲ್ ಕುಮಾರ್ ಮತ್ತು ಪಿಆಸ್ ಆರ್ ಸೀತಾರಾಮಾಂಜನೇಯಲು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಈಗ ನಿವೃತ್ತರಾಗಿರುವ ಪೊಲೀಸ್ ಅಧಿಕಾರಿ ವಿಜಯ್ ಪೌಲ್ ಮತ್ತು ಗುಂಟೂರು ಜಿಲ್ಲೆಯ ಸರಕಾರಿ ಜಿಲ್ಲಾಸ್ಪತ್ರೆಯ ಮೆಡಿಕಲ್ ಸುಪರಿಡೆಂಟ್ ಆಗಿರುವ ಜಿ. ಪ್ರಭಾವತ್ ಮೇಲೂ ಆರೋಪ ಮಾಡಿದ್ದಾರೆ.
ಒಂದು ತಿಂಗಳ ಹಿಂದೆಯೇ ಶಾಸಕ ರಘುರಾಮ್ ರಾಜು ಅವರು ಮೈಲ್ ಮೂಲಕ ದೂರು ನೀಡಿದ್ದರು. ಕಾನೂನು ಸಲಹೆ ಪಡೆದು ಪ್ರಕರಣ ದಾಖಲಿಸಿದ್ದಾಗಿ ಠಾಣಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಶಾಸಕ ರಘುರಾಮ್ ರಾಜು ತನ್ನ ಮೇಲೆ ಕಸ್ಟಡಿ ಹಲ್ಲೆಯೂ ನಡೆದಿತ್ತು. ಸಿಎಂ ಜಗನ್ ರೆಡ್ಡಿ ಬಗ್ಗೆ ಟೀಕೆ ಮಾಡಿದ್ದಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ನನಗೆ ಹಾರ್ಟ್ ಸರ್ಜರಿ ಆಗಿದೆಯೆಂದು ಹೇಳಿದರೂ ಅಧಿಕಾರಿಗಳು ಕೇಳಿರಲಿಲ್ಲ. ಮೆಡಿಕಲ್ ಚೆಕಪ್ ಮಾಡದೆಯೇ ನನ್ನನ್ನು ಬಂಧಿಸಿಟ್ಟು ಕಿರುಕುಳ ನೀಡಿದ್ದರು. ಗುಂಟೂರು ಜಿಲ್ಲೆಯ ಸಿಐಡಿ ಕಚೇರಿಯಲ್ಲಿ ರಾತ್ರಿ 9.30ರ ನಂತರ ಕೂಡಿಹಾಕಿದ್ದರು ಎಂದು ದೂರಿನಲ್ಲಿ ಶಾಸಕ ಆರೋಪ ಮಾಡಿದ್ದಾರೆ.
ಪೊಲೀಸರ ಹಲ್ಲೆಯಿಂದಾಗಿ ಗುಂಟೂರು ಜಿಲ್ಲಾಧಿಕಾರಿಯ ಸೂಚನೆಯಂತೆ ನನ್ನನ್ನು ಸರಕಾರಿ ಜಿಲ್ಲಾಸ್ಪತ್ರೆಗೆ ಹಾಕಲಾಗಿತ್ತು. ಆದರೆ, ಅಲ್ಲಿನ ವೈದ್ಯೆ ಪ್ರಭಾವತಿ ಅವರು ಪೊಲೀಸ್ ಅಧಿಕಾರಿ ಸುನಿಲ್ ಕುಮಾರ್ ಒತ್ತಡದಿಂದಾಗಿ ನನ್ನ ಮೇಲೆ ಹಲ್ಲೆ ಆಗಿಲ್ಲ ಎಂದು ರಿಪೋರ್ಟ್ ನೀಡಿದ್ದರು. ಆನಂತರ, ಸಿಕಂದರಾಬಾದ್ ಆರ್ಮಿ ಹಾಸ್ಪಿಟಲ್ ಗೆ ನನ್ನನ್ನು ಸ್ಥಳಾಂತರ ಮಾಡಲಾಗಿತ್ತು. ಅಲ್ಲಿಂದ ಸುಪ್ರೀಂ ಕೋರ್ಟ್ ಆದೇಶದಂತೆ ಜಾಮೀನು ನೀಡಲಾಗಿತ್ತು ಎಂದು ಶಾಸಕ ರಘುರಾಮ್ ತಿಳಿಸಿದ್ದಾರೆ.
An ‘attempt to murder’ case was filed against former Andhra Pradesh Chief Minister Jagan Mohan Reddy and two India Police Service (IPS) officers by K Raghurama Krishna Raju, an MLA of the ruling Telugu Desam Party (TDP).
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm