Haveri crime, murder, car burnt: ಪ್ರೀತಿಸಿದ ತಪ್ಪಿಗೆ ಅಮಾನುಷ ಹತ್ಯೆ ; ಮದುವೆ ಮಾಡ್ತೀವಿ ಎಂದು ಯುವಕನ ಕರೆಸಿ ಕಾರಿನಲ್ಲೇ ಸುಟ್ಟು ಹಾಕಿದ್ದ ಹುಡ್ಗಿ ಕುಟುಂಬಸ್ಥರು, ಕೊಲೆ ಸುಳಿವು ಕೊಟ್ಟ ಬೆಲ್ಟ್, ಉಂಗುರ ! ಪಾತಕಿಗಳು ಸಿಕ್ಕಿಬಿದ್ದಿದ್ದೇ ರೋಚಕ

13-07-24 05:50 pm       HK News Desk   ಕ್ರೈಂ

ಇಷ್ಟಪಡುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿ ಶೆಡ್‌ಗೆ ಕರೆಸಿಕೊಂಡು ಹತ್ಯೆ ಮಾಡಿ ಕಾರು ಸಮೇತ ಮೃತದೇಹ ಸುಟ್ಟಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಹಾನಗಲ್ ಠಾಣೆ ಪೊಲೀಸರು, ಏಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಹಾವೇರಿ, ಜುಲೈ.13: ಇಷ್ಟಪಡುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿ ಶೆಡ್‌ಗೆ ಕರೆಸಿಕೊಂಡು ಹತ್ಯೆ ಮಾಡಿ ಕಾರು ಸಮೇತ ಮೃತದೇಹ ಸುಟ್ಟಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಹಾನಗಲ್ ಠಾಣೆ ಪೊಲೀಸರು, ಏಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಶಿವಮೊಗ್ಗದ ಶಿರಾಳಕೊಪ್ಪ ಠಾಣೆ ವ್ಯಾಪ್ತಿಯ ತೊಗರ್ಸಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೀರೇಶ (27) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು, ಹಲವರ ಹೇಳಿಕೆ ಹಾಗೂ ಇತರೆ ಪುರಾವೆಗಳನ್ನು ದೋಷಾರೋಪ ಪಟ್ಟಿ ಜೊತೆ ಲಗತ್ತಿಸಿದ್ದಾರೆ.

Section 302 IPC| Circumstances From Which Intention To Cause Death Can Be  Gathered: Supreme Court

ವೀರೇಶ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಶಿರಾಳಕೊಪ್ಪ ಪೊಲೀಸರು, ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಹಾನಗಲ್ ಠಾಣೆಗೆ ವರ್ಗಾಯಿಸಿದ್ದರು. ನಂತರ, ಅಕ್ಕಿಆಲೂರಿನ ಯುವತಿಯ ಇಬ್ಬರು ಸಹೋದರರು, ತಂದೆ- ಚಿಕ್ಕಪ್ಪ ಹಾಗೂ ಮೂವರು ಕಾರ್ಮಿಕರನ್ನು ಬಂಧಿಸಲಾಗಿತ್ತು' ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗದ ಗಾಡಿಕೊಪ್ಪದ ವೀರೇಶ, ಚಾಲಕ ವೃತ್ತಿಯಲ್ಲಿದ್ದರು. ಶಿವಮೊಗ್ಗದಲ್ಲಿ ಓದುತ್ತಿದ್ದ ದೂರದ ಸಂಬಂಧಿಯೂ ಆಗಿದ್ದ ಅಕ್ಕಿಆಲೂರಿನ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ, ವೀರೇಶನ ನಡತೆ ಸರಿ ಇಲ್ಲ ಎಂದು ಯುವತಿ ಅಣ್ಣಂದಿರು, ಪೋಷಕರು ವಿರೋಧ ವ್ಯಕ್ತಪಡಿಸಿದ್ದರು' ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.

ಯುವತಿಯನ್ನು ಮದುವೆಯಾಗಲು ತೀರ್ಮಾನಿಸಿದ್ದ ವೀರೇಶ, ಅವರ ಮನೆಗೂ ಹೋಗಿ ಕೇಳಿ ಬಂದಿದ್ದ. ಆದರೆ, ಮದುವೆಗೆ ಮನೆಯವರು ಒಪ್ಪಿರಲಿಲ್ಲ. ಸಿಟ್ಟಾದ ವೀರೇಶ, ಯುವತಿ ಜೊತೆಗಿನ ಚಿತ್ರಗಳನ್ನು ಸಂಬಂಧಿಕರೊಬ್ಬರಿಗೆ ಕಳುಹಿಸಿದ್ದ. ವಿಷಯ ತಿಳಿದ ಯುವತಿಯ ಸಹೋದರರು, ಮದುವೆ ಮಾಡಿಸುವ ನೆಪದಲ್ಲಿ ವೀರೇಶನನ್ನು ಕರೆಸಿಕೊಂಡು ತಾಕೀತು ಮಾಡಲು ಸಂಚು ರೂಪಿಸಿದ್ದರು' ಎಂಬ ಮಾಹಿತಿಯೂ ಪಟ್ಟಿಯಲ್ಲಿ ಇದೆ.

ಹಾವೇರಿ: ಪ್ರೇಮ ಪ್ರಕರಣ– ಯುವಕನನ್ನು ಶೆಡ್‌ನಲ್ಲಿ ಕೊಂದು ಕಾರಿನಲ್ಲಿ ಸುಟ್ಟರು!

ಶೆಡ್‌ನಲ್ಲಿ ಜಮಾವಣೆ ; 

ಮಾರ್ಚ್ 15ರಂದು ಬೆಳಿಗ್ಗೆ ವೀರೇಶಗೆ ಕರೆ ಮಾಡಿದ್ದ ಯುವತಿಯ ಅಣ್ಣಂದಿರು, ತಂಗಿ ಜೊತೆಗಿನ ಫೋಟೊವನ್ನು ಎಲ್ಲರಿಗೂ ಕಳುಹಿಸುತ್ತಿದ್ದಿಯಾ. ಇದರಿಂದ ನಮ್ಮ ಮರ್ಯಾದೆ ಹೋಗುತ್ತಿದೆ. ನೀನು ನಮ್ಮೂರಿಗೆ ಬಾ. ನಿನ್ನ ಜೊತೆ ತಂಗಿಯ ಮದುವೆ ಮಾಡಿಸುತ್ತೇವಿ. ಕರೆದುಕೊಂಡು ಹೋಗು' ಎಂದಿದ್ದರು. ಅದರಿಂದ ಖುಷಿಯಾಗಿದ್ದ ವೀರೇಶ, ಸ್ನೇಹಿತನ ಇನ್ನೋವಾ ಕಾರು (ಕೆಎ 51 ಎಂಡಿ 3369) ತೆಗೆದುಕೊಂಡು ತಮ್ಮ ಊರಿನಿಂದ ಅಕ್ಕಿಆಲೂರಿನತ್ತ ಹೊರಟಿದ್ದ.

ವ್ಯಾಪಾರಸ್ಥರಾಗಿದ್ದ ಅಣ್ಣಂದಿರು, ಗೋವಿನ ಜೋಳದ ಮೂಟೆಗಳನ್ನು ಇಳಿಸಬೇಕೆಂದು ಹೇಳಿ ಮೂವರು ಕಾರ್ಮಿಕರನ್ನು ಶೆಡ್‌ಗೆ ಕರೆಸಿಕೊಂಡಿದ್ದರು. ಆದರೆ, ಮೂಟೆಗಳು ಬಂದಿರಲಿಲ್ಲ. ಅನುಮಾನಗೊಂಡು ಕಾರ್ಮಿಕರು ಕೇಳಿದಾಗ, ಸದ್ಯದಲ್ಲೇ ಬರುವುದಾಗಿ ಹೇಳಿ ಸುಮ್ಮನಾಗಿಸಿದ್ದರು.

ಅಕ್ಕಿಆಲೂರಿಗೆ ಬರುತ್ತಿದ್ದ ವೀರೇಶನಿಗೆ ಆರೋಪಿಗಳು ಕರೆ ಮಾಡಿದ್ದರು. ಮಾರ್ಗಮಧ್ಯೆ ಇರುವುದಾಗಿ ವೀರೇಶ ಹೇಳಿದ್ದ. ಆಗ ಆರೋಪಿಯೊಬ್ಬ ಕಾರ್ಮಿಕನ ಜೊತೆ ಬೈಕ್‌ನಲ್ಲಿ ನಾಲ್ಕರ ಕ್ರಾಸ್‌ಗೆ ಹೋಗಿದ್ದ. ಅಲ್ಲಿಯೇ ವೀರೇಶ ಅವರ ಕಾರು ನಿಲ್ಲಿಸಿ, ಅದರಲ್ಲೇ ಹತ್ತಿದ್ದ. ಬಳಿಕ, ಇಬ್ಬರೂ ಕಾರಿನಲ್ಲಿ ಶೆಡ್‌ಗೆ ಬಂದಿದ್ದರು. ಯುವತಿ ವಿಚಾರ ಪ್ರಸ್ತಾಪಿಸಿದ್ದ ಆರೋಪಿಗಳು, ಹಲ್ಲೆ ಮಾಡಿದ್ದರು. ಮಚ್ಚಿನಿಂದ ಹೊಡೆದಿದ್ದರು. ತೀವ್ರ ಗಾಯಗೊಂಡು, ವೀರೇಶ ಮೃತಪಟ್ಟಿದ್ದರು. ಶೆಡ್‌ಗೆ ಬಂದಿದ್ದ ಯುವತಿಯ ತಂದೆ-ಚಿಕ್ಕಪ್ಪ, ರಕ್ತದ ಕಲೆಗಳನ್ನ ತೊಳೆದಿದ್ದರು.

Is Buying Petrol in a bottle banned in Kerala ? If so, how to refuel my  empty bike ? : r/Kerala

ಐದು ಲೀಟರ್ ಪೆಟ್ರೋಲ್ ಖರೀದಿ ; 

ಶೆಡ್‌ ಹಾಗೂ ಸುತ್ತಮುತ್ತ ಮೃತದೇಹ ಎಸೆದರೆ, ಪೊಲೀಸರು ತಮ್ಮನ್ನು ಬಂಧಿಸಬಹುದೆಂದು ಆರೋಪಿಗಳು ಅಂದುಕೊಂಡಿದ್ದರು. ಹೀಗಾಗಿ, ವೀರೇಶ ತಂದಿದ್ದ ಇನ್ನೋವಾ ಕಾರಿನಲ್ಲೇ ಮೃತದೇಹ ಇಟ್ಟುಕೊಂಡು ಆರೋಪಿಗಳು ಶಿರಾಳಕೊಪ್ಪದತ್ತ ಹೊರಟಿದ್ದರು. ಮಾರ್ಗಮಧ್ಯೆ ಬಂಕ್‌ವೊಂದರಲ್ಲಿ 5 ಲೀಟರ್ ಪೆಟ್ರೋಲ್ ಖರೀದಿಸಿದ್ದರು. ಮಾರ್ಚ್ 16ರಂದು ನಸುಕಿನಲ್ಲಿ ತೊಗರ್ಸಿ ಗ್ರಾಮ ಬಳಿಯ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬೆಂಕಿ ಹಚ್ಚಿ ಮೃತದೇಹ ಸುಟ್ಟಿದ್ದಾರೆ.

Stay on bail should only be granted in rare cases: Supreme Court - The Hindu

ಜಾಮೀನು ಮಂಜೂರು ಹೆಚ್ಚುವರಿ ಪಟ್ಟಿ ; 

ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಅದರ ಸಮೇತ ನ್ಯಾಯಾಲಯಕ್ಕೆ ಸದ್ಯದಲ್ಲೇ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸ್ರು ತಿಳಿಸಿದ್ದಾರೆ.

ಇನ್ನು ಭಾಗಶಃ ಸುಟ್ಟ ಮೃತದೇಹದಲ್ಲಿದ್ದ ಬೆಲ್ಟ್-ಉಂಗುರದಿಂದ ವೀರೇಶ ಗುರುತು ಪತ್ತೆಯಾಗಿತ್ತು. ಸಣ್ಣ ಸುಳಿವು ಆಧರಿಸಿ 7 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

Love case, girls family murder boy, set body on fire in car at Haveri. The deceased has been identified as Veeresh. He was called to a shed stating that they will get him married and later killed him kept his body inside his car and burnt it.