Drector, Gajendra Gaja arrest, Crime; ಹಳೆ ಮರ್ಡರ್ ಕೇಸ್ ನಲ್ಲಿ 20 ವರ್ಷದಿಂದ ತಲೆಮರಸಿಕೊಂಡಿದ್ದ ಸ್ಯಾಂಡಲ್​ವುಡ್ ನಿರ್ದೇಶಕ ಸಿಸಿಬಿ ಬಲೆಗೆ 

17-07-24 04:30 pm       Bengaluru Correspondent   ಕ್ರೈಂ

ಕೊಲೆ ಕೇಸ್ ನಲ್ಲಿ 20 ವರ್ಷ ಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಕನ್ನಡ ಸಿನಿಮಾದ ನಿರ್ದೇಶಕ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಸಿಸಿಬಿ ಪೊಲೀಸರು ಗಜೇಂದ್ರ ಅಲಿಯಾಸ್ ಗಜ ನನ್ನ ಬಂಧಿಸಿದ್ದಾರೆ.

ಬೆಂಗಳೂರು, ಜುಲೈ 17: ಕೊಲೆ ಕೇಸ್ ನಲ್ಲಿ 20 ವರ್ಷ ಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಕನ್ನಡ ಸಿನಿಮಾದ ನಿರ್ದೇಶಕ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಸಿಸಿಬಿ ಪೊಲೀಸರು ಗಜೇಂದ್ರ ಅಲಿಯಾಸ್ ಗಜ ನನ್ನ ಬಂಧಿಸಿದ್ದಾರೆ.

ಆರೋಪಿ ಗಜೇಂದ್ರ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಾಲಿವುಡ್ ಇಂಡಸ್ಟ್ರಿಯಲ್ಲೂ ಒಂದೆರಡು ಸಿನಿಮಾ ಮಾಡಿದ್ದಾನೆ.

ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ಗಜೇಂದ್ರ !

2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಈ ಕೊಲೆ ಕೇಸ್ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ನಿರ್ದೇಶಕ ಗಜೇಂದ್ರ ಕೂಡ ಎಂಟನೇ ಆರೋಪಿ ಆಗಿದ್ದ. ಕೊಲೆ ಕೇಸ್ನಲ್ಲಿ ಬಂಧಿತನಾಗಿದ್ದ ಗಜೇಂದ್ರಗೆ ಕೋರ್ಟ್ 1 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಒಂದು ವರ್ಷ ಜೈಲುವಾಸ ಅನುಭವಿಸಿದ ಗಜೇಂದ್ರ ಬಳಿಕ ಜಾಮೀನು ಪಡೆದು ಹೊರಬಂದಿದ್ದ.

20 ವರ್ಷದಿಂದ ತಲೆಮರೆಸಿಕೊಂಡಿದ್ದ ಗಜ ; 

ಜಾಮೀನು ಪಡೆದ ಬಳಿಕ ಹಲವು ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 20 ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿಲ್ಲ. ಅರಸಯ್ಯನ ಶಿಷ್ಯ ಗಜೇಂದ್ರ ಅಲಿಯಾಸ್ ಗಜ, ಈ ಹಿಂದೆ ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ. ಅಷ್ಟೇ ಅಲ್ಲದೇ ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಹೇಳಿಕೊಂಡಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಇದೀಗ ಗಜೇಂದ್ರನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.

Kannada film director Gajendra Gaja absconded for 20 years in a murder case arrested by CCB police