ಬ್ರೇಕಿಂಗ್ ನ್ಯೂಸ್
26-07-24 03:42 pm Bangalore Correspondent ಕ್ರೈಂ
ಬೆಂಗಳೂರು, ಜುಲೈ.26: ನಗರದ ಕೋರಮಂಗಲದ ಪಿಜಿಯಲ್ಲಿ ಇತ್ತೀಚೆಗೆ ನಡೆದ ಮಧ್ಯಪ್ರದೇಶ ಮೂಲದ ಯುವತಿಯ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಕೃತಿ ಕುಮಾರಿ ಎಂಬ ಯುವತಿಯನ್ನು ಆಕೆಯ ಸ್ನೇಹಿತನೇ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆ ಮಾಡಿರುವ ಸಿಸಿಟಿವಿ ದೃಶ್ಯ ದೊರೆತಿದೆ.
ಜುಲೈ 23ರಂದು ರಾತ್ರಿ ಪಿಜಿಗೆ ನುಗ್ಗಿದ ಅಭಿಷೇಕ್, ತನ್ನ ಗೆಳತಿ ತಂಗಿದ್ದ ಕೊಠಡಿಯ ಬಾಗಿಲು ತಟ್ಟಿದ್ದಾನೆ. ಬಾಗಿಲು ತೆರೆಯುತ್ತಿದ್ದಂತೆ ಆಕೆಯ ಮೇಲೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಯುವತಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರೂ ಆರೋಪಿ ಹೊಟ್ಟೆ, ಕುತ್ತಿಗೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ.


ಭೋಪಾಲ್ ಮೂಲದ ಅಭಿಷೇಕ್ ಮತ್ತು ಕೃತಿ ಕುಮಾರಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಯುವತಿ ನೆಲೆಸಿದ್ದ ಪಿಜಿಗೆ ಅಭಿಷೇಕ್ ಬಂದು ಹೋಗುತ್ತಿದ್ದ. ಇತ್ತೀಚೆಗೆ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ತಾನು ಕೆಲಸ ಮಾಡುತ್ತಿದ್ದ ಕಂಪನಿ ತೊರೆದಿದ್ದ ಅಭಿಷೇಕ್ ನಿರುದ್ಯೋಗಿಯಾಗಿದ್ದ. ಭೋಪಾಲ್ಗೆ ತೆರಳಿ ಕೆಲಸ ಮಾಡುತ್ತಿರುವುದಾಗಿ ಯುವತಿಗೆ ಸುಳ್ಳು ಹೇಳುತ್ತಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಆಕೆ, ನೀನು ಕೆಲಸಕ್ಕೆ ಹೋಗು ಎಂದು ಹೇಳುತ್ತಿದ್ದಳು. ಹೀಗಿದ್ದರೂ ಕೆಲಸಕ್ಕೆ ಹೋಗದೆ ಸುತ್ತಾಡುತ್ತಿದ್ದ. ಇದನ್ನರಿತ ಕೃತಿ, ಆತನನ್ನು ದೂರ ಮಾಡುತ್ತಿದ್ದಳು. ಹೀಗಾಗಿ, ಆಗಾಗ್ಗೆ ಪಿಜಿ ಸಮೀಪ ಬಂದು ಅಭಿಷೇಕ್ ಗಲಾಟೆ ಮಾಡುತ್ತಿದ್ದ. ಮನನೊಂದ ಕೃತಿ ಪಿಜಿಯನ್ನೂ ಬದಲಿಸಿದ್ದಳು. ಇದರಿಂದ ಕಂಗೆಟ್ಟ ಆರೋಪಿ ಹಲವು ಬಾರಿ ಫೋನ್ ಮಾಡಿದ್ದಾನೆ. ಯುವತಿ ಉತ್ತರಿಸುತ್ತಿರಲಿಲ್ಲ. ಕೊನೆಗೆ, ಹೇಗೋ ಯುವತಿ ನೆಲೆಸಿದ್ದ ಪಿಜಿಯ ವಿಳಾಸ ಕಂಡುಹಿಡಿದು ಚಾಕುವಿನಿಂದ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರೂಮ್ ಕಾರಿಡಾರ್ ನಲ್ಲಿ ಘಟನೆ ನಡೆದಿದ್ದು ಇವರ ಕೂಗಾಟ ಕೇಳುತ್ತಿದ್ದಂತೆ ಅಕ್ಕಪಕ್ಕದ ರೂಮ್ ನಲ್ಲಿದ್ದ ಯುವತಿಯರು ಹೊರ ಬರ್ತಾರೆ. ಆದರೆ ಅದಾಗಲೇ ಕೃತಿ ಕುತ್ತಿಗೆಯಿಂದ ರಕ್ತ ಸೋರುತ್ತಿದ್ದರಿಂದ ಭಯಗೊಂಡ ಯುವತಿಯರು ಕೃತಿ ಬಳಿ ಹೋಗಲು ಭಯಪಟ್ಟಿದ್ದರು. ಕೂಡಲೇ ಪಿಜಿಯ ಸೆಕ್ಯೂರಿಟಿಗೆ ಮಾಹಿತಿ ನೀಡಿದ್ದರು.
ಸದ್ಯ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್ ಗಾಗಿ ಹುಡುಕಾಟ ನಡೆಸಿದ್ದು, ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿಕೊಂಡು ಆರೋಪಿ ಭೋಪಾಲ್ ಗೆ ಪರಾರಿಯಾಗಿರುವ ಮಾಹಿತಿ ಇದೆ. ಆರೋಪಿಯ ಬಂಧನಕ್ಕೆ ಪೊಲೀಸರು ಮೂರು ತಂಡಗಳನ್ನು ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ.
#CCTV footage surfaces ⚠️ #BengaluruShocker
— Sneha Mordani (@snehamordani) July 26, 2024
The assailant broke in and slit her throat late Tuesday night between 11:10 and 11:30 PM.
The attacker entered the PG armed with a knife. Kriti was killed instantly near her room on the third floor.
Koramangala police believe the… https://t.co/qH8s3BSDPd pic.twitter.com/7EuwmEEk0Y
PG murder in Bangalore, deadly murder recorded in CCTV, murder by her own lover, cops trace accused. A 24-year-old private firm employee was stabbed to death at her paying guest accommodation in VGR Layout, Koramangala, on Wednesday (July 23). The deceased, Kruthi Kumari, was a native of Bihar and worked in a private firm in sales and marketing.
02-01-26 06:09 pm
HK News Desk
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 02:02 pm
Mangalore Correspondent
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm