ಬ್ರೇಕಿಂಗ್ ನ್ಯೂಸ್
28-07-24 10:24 pm HK News Desk ಕ್ರೈಂ
ರೇವಾ, ಜುಲೈ 28: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ 9 ವರ್ಷದ ಬಾಲಕಿ ಮೇಲೆ 13 ವರ್ಷದ ಆಕೆಯ ಸಹೋದರನೇ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಎದೆನಡುಗಿಸುವ ಘೋರ ಘಟನೆ ನಡೆದಿದೆ. ತನ್ನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ್ದ ಬಾಲಕ, ಅದರಿಂದ ಪ್ರಚೋದನೆಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 24ರಂದು ಈ ಘಟನೆ ನಡೆದಿದ್ದು, ತನಿಖೆ ನಡೆಸಿದ ಪೊಲೀಸರು ಇನ್ನಷ್ಟು ಆಘಾತಕಾರಿ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ. ಈ ಕ್ರೌರ್ಯವನ್ನು ಮುಚ್ಚಿಹಾಕಲು ಬಾಲಕನಿಗೆ ಆತನ ತಾಯಿ ಹಾಗೂ ಇಬ್ಬರು ಅಕ್ಕಂದಿರೇ ಸಹಾಯ ಮಾಡಿರುವುದು ಸಹ ಬೆಳಕಿಗೆ ಬಂದಿದೆ.
"ಏಪ್ರಿಲ್ 24ರಂದು ಜಾವಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ 9 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆಸಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಆಕೆ ನಿದ್ರಿಸುತ್ತಿದ್ದಳು. ಆಕೆಯ ಮನೆ ಅಂಗಳದಲ್ಲಿ ಸಂತ್ರಸ್ತೆಯ ಶವ ಪತ್ತೆಯಾಗಿತ್ತು" ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ವಿವರಿಸಿದ್ದಾರೆ.
ತೀವ್ರ ವಿಚಾರಣೆಯ ಬಳಿಕ 13 ವರ್ಷದ ಬಾಲಕ, ಆತನ ತಾಯಿ ಹಾಗೂ 17 ಮತ್ತು 18 ವರ್ಷದ ಇಬ್ಬರು ಸಹೋದರಿಯರನ್ನು ಬಂಧಿಸಲಾಗಿದೆ. ಪ್ರಕರಣ ಮುಚ್ಚಿ ಹಾಕಲು ತಾವು ಸಹಾಯ ಮಾಡಿದ್ದಾಗಿ ಈ ಎಲ್ಲರೂ ಒಪ್ಪಿಕೊಂಡಿದ್ದಾರೆ.
ತಂಗಿ ಮೇಲೆ ಅತ್ಯಾಚಾರ ಘಟನೆ ನಡೆದ ರಾತ್ರಿ ಅಪ್ರಾಪ್ತ ವಯಸ್ಸಿನ ಸಹೋದರಿ ಜತೆಗೆ 13 ವರ್ಷದ ಬಾಲಕ ಮಲಗಿದ್ದ. ತನ್ನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಅಪ್ಪನ ಬಳಿ ದೂರು ಹೇಳುವುದಾಗಿ ಆಕೆ ಬೆದರಿಸಿದಾಗ, ಆಕೆಯ ಕತ್ತು ಹಿಸುಕಿದ್ದಾನೆ.
ನಂತರ ಆತ ತಾಯಿ ಬಳಿ ಹೋಗಿ ಆಕೆಯನ್ನು ನಿದ್ದೆಯಿಂದ ಎಬ್ಬಿಸಿ, ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ. ತಾಯಿ ಬಂದು ಪರಿಶೀಲಿಸಿದಾಗ ಮಗಳು ಜೀವಂತ ಇರುವುದು ಕಂಡುಬಂದಿತ್ತು. ಆಗ ಅಮ್ಮನ ಎದುರೇ ಬಾಲಕ ತನ್ನ ತಂಗಿಯನ್ನು ಮತ್ತೆ ಕತ್ತು ಹಿಸುಕಿ ಕೊಲೆ ಮಾಡಿದ್ದ. ಆ ವೇಳೆಗೆ ಇಬ್ಬರೂ ಅಕ್ಕಂದಿರು ಎಚ್ಚರಗೊಂಡಿದ್ದರು. ತನಿಖೆಯ ದಾರಿ ತಪ್ಪಿಸಲು ಅವರು ಬಾಲಕಿ ಮಲಗಿದ್ದ ಹಾಸಿಗೆಯ ಸ್ಥಳವನ್ನು ಬದಲಿಸಿದ್ದಾರೆ.
ಆರೋಪಿ ಬಾಲಕ ಮತ್ತು ಆತನ ಕುಟುಂಬದವರನ್ನು ಬಂಧಿಸಲಾಗಿದ್ದು, ಈ ಸಂಬಂಧ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
ದಾರಿ ತಪ್ಪಿಸುವ ಪ್ರಯತ್ನ :
ತನಿಖೆಯ ದಿಕ್ಕು ತಪ್ಪಿಸಲು ಅವರು, ಬಾಲಕಿಗೆ ಯಾವುದೋ ವಿಷಕಾರಿ ಕೀಟ ಕಚ್ಚಿದೆ ಎಂದು ಸುದ್ದಿ ಹಬ್ಬಿಸಿದ್ದರು. ಆಕೆಯ ದೇಹವನ್ನು ಖಾಸಗಿ ವೈದ್ಯರೊಬ್ಬರ ಬಳಿಗೂ ಅವರು ಕೊಂಡೊಯ್ದಿದ್ದರು. ಆದರೆ ಅವರು ತಪಾಸಣೆಗೆ ನಿರಾಕರಿಸಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು, ಅತ್ಯಾಚಾರ ಹಾಗೂ ಕೊಲೆ ಆಕೆಯ ಸಾವಿಗೆ ಕಾರಣ ಎಂದು ಘೋಷಿಸಿದ್ದರು.
ಮನೆಯೊಳಗೆ ಯಾರೂ ಬಲವಂತವಾಗಿ ಪ್ರವೇಶಿಸಿರುವ ಸುಳಿವು ಪೊಲೀಸರಿಗೆ ಕಂಡಿರಲಿಲ್ಲ. ತಮಗೂ ಯಾವುದೇ ಸದ್ದು ಕೇಳಿಸಿರಲಿಲ್ಲ ಎಂದು ಕುಟುಂಬದವರು ಹೇಳಿದ್ದರು.
"ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ, ಸುಮಾರು 50 ಜನರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ, ಕುಟುಂಬದ ಸದಸ್ಯರು ತಮ್ಮ ಹೇಳಿಕೆಯನ್ನು ಪದೇ ಪದೇ ಬದಲಿಸುತ್ತಿರುವುದನ್ನು ಪೊಲೀಸರು ಗಮನಿಸಿದ್ದರು. ಅನುಮಾನಗೊಂಡ ಅವರು, ಕುಟುಂಬದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆಗ ಅವರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ" ಎಂದು ಸಿಂಗ್ ತಿಳಿಸಿದ್ದಾರೆ.
After over three months, Police in Rewa have detained a 13-year-old boy for the rape and murder of his nine-year-old sister. The boy's mother and two elder sisters have also been detained for their alleged involvement in the cover-up of the crime that occurred on April 24.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm