Mangalore crime, Fake godrej good knight coil: ಗೋದ್ರೆಜ್ ಕಂಪನಿಯ ಗುಡ್ ನೈಟ್ ಉತ್ಪನ್ನ ನಕಲಿ ಮಾರಾಟ ; ಮಂಗಳೂರಿನಲ್ಲಿ ಪತ್ತೆಹಚ್ಚಿದ ಕಂಪನಿ ಪ್ರತಿನಿಧಿಗಳು, ಆರೋಪಿ ಬಂಧನ

09-08-24 04:57 pm       Mangalore Correspondent   ಕ್ರೈಂ

ಸೊಳ್ಳೆ ನಿರೋಧಕವಾಗಿ ಬಳಕೆಯಾಗುವ ಗೋದ್ರೆಜ್ ಕಂಪನಿಯ ಗುಡ್ ನೈಟ್ ಗೋಲ್ಡ್ ಫ್ಲಾಶ್ ಲಿಕ್ವಿಡನ್ನು ಮಂಗಳೂರಿನ ಬಂದರಿನ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಮಂಗಳೂರು, ಆಗಸ್ಟ್.9: ಸೊಳ್ಳೆ ನಿರೋಧಕವಾಗಿ ಬಳಕೆಯಾಗುವ ಗೋದ್ರೆಜ್ ಕಂಪನಿಯ ಗುಡ್ ನೈಟ್ ಗೋಲ್ಡ್ ಫ್ಲಾಶ್ ಲಿಕ್ವಿಡನ್ನು ಮಂಗಳೂರಿನ ಬಂದರಿನ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಗೋದ್ರೆಜ್ ಕಂಪನಿಯ ಪ್ರತಿನಿಧಿಗಳು ಗ್ರಾಹಕರ ಸೋಗಿನಲ್ಲಿ ಬಂದರಿನ ಬೀಬಿ ಅಲಾಬಿ ರಸ್ತೆಯಲ್ಲಿರುವ ಜೈ ವಿಹಾತ್ ಎಂಟರ್ ಪ್ರೈಸಸ್ ಹೆಸರಿನ ಶಾಪ್ ಗೆ ಹೋಗಿದ್ದರು. ಈ ವೇಳೆ, ಅಲ್ಲಿ ಗೋದ್ರೆಜ್ ಕಂಪನಿಯ ಉತ್ಪನ್ನವಾದ ಗುಡ್ ನೈಟ್ ಗೋಲ್ಡ್ ಫ್ಲಾಶ್ ಲಿಕ್ವಿಡನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಗೋದ್ರೆಜ್ ಕಂಪನಿಯ ಪ್ರತಿನಿಧಿ ಕಾರ್ತಿಕ್ ಎಂಬವರು ಮಂಗಳೂರಿನ ಬಂದರು ಠಾಣೆಗೆ ದೂರು ನೀಡಿದ್ದಾರೆ. 

ಪೊಲೀಸರು ಎಸಿಪಿ ಪ್ರತಾಪ್ ಸಿಂಗ್ ಥೋರಟ್, ಸರ್ಕಲ್ ಇನ್ಸ್ ಪೆಕ್ಟರ್ ಅಮ್ಜದ್ ಆಲಿ, ಬಂದರು ಠಾಣೆಯ ಎಸ್ಐ ಮಂಜುಳಾ ನೇತೃತ್ವದಲ್ಲಿ ಅಂಗಡಿಗೆ ದಾಳಿ ನಡೆಸಿದ್ದು, ಅಕ್ರಮವಾಗಿ ಗೋದ್ರೆಜ್ ಉತ್ಪನ್ನವನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಅಂಗಡಿಯ ಮಾಲಕ ದಲ್ರಾಮ್ (33) ಎಂಬಾತನನ್ನು ಬಂಧಿಸಿದ್ದು, ಕಾಪಿ ರೈಟ್ ಏಕ್ಟ್ 63 ಮತ್ತು 51ಬಿ ಪ್ರಕಾರ ಕೇಸು ದಾಖಲಿಸಿದ್ದಾರೆ.

ಸೊಳ್ಳೆ ನಿರೋಧಕ ಲಿಕ್ವಿಡನ್ನು ಅಕ್ರಮವಾಗಿ ಉತ್ಪಾದಿಸಿ, ಗೋದ್ರೆಜ್ ಕಂಪನಿಯ ಗುಡ್ ನೈಟ್ ಹೆಸರಲ್ಲಿ ಮಾರಾಟ ಮಾಡುತ್ತಿದ್ದರು. ಇದನ್ನು ಯಾರು ತಯಾರಿಸುತ್ತಿದ್ದರು, ಎಲ್ಲಿಂದ ಪೂರೈಕೆ ಆಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರಿನಲ್ಲಿ ಆಗಸ್ಟ್ 1ರಿಂದ 5ರ ನಡುವೆ ಅಕ್ರಮ ಉತ್ಪನ್ನ ಪತ್ತೆಯಾಗಿದೆ ಎಂದು ಕಂಪನಿ ಪ್ರತಿನಿಧಿ ತಿಳಿಸಿದ್ದಾರೆ. ಗೋದ್ರೆಜ್ ಕಂಪನಿಯ ಉತ್ಪನ್ನಗಳ ನಕಲಿ ಮಾರಾಟ ತಡೆಯುವ ಉದ್ದೇಶದಿಂದ ತಂಡವೊಂದನ್ನು ರಚಿಸಲಾಗಿದ್ದು, ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Mangalore Fake godrej good knight coil racket busted in bunder, shop owner arrested by police. Owner of Jay Virat Enterprises was selling wholesale Fake godrej good knight coils after which officers of Godrej registered complaint against the shop owner and raided it.