ಬ್ರೇಕಿಂಗ್ ನ್ಯೂಸ್
13-08-24 10:45 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್.13: ಉಳ್ಳಾಲ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಕಡಪ್ಪರ ಸಮೀರ್ ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ನಡುರಸ್ತೆಯಲ್ಲೇ ಕೊಂದು ಹಾಕಿದೆ. ಮೇಲ್ನೋಟಕ್ಕೆ ಟಾರ್ಗೆಟ್ ಇಲ್ಯಾಸ್ ಕೊಲೆಗೆ ಪ್ರತೀಕಾರ ಎನ್ನುವ ಮಾತನ್ನು ಪೊಲೀಸರು ಹೇಳುತ್ತಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ಸಂಬಂಧಿಸಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ ಎನ್ನುವ ಸುದ್ದಿಯೂ ಇದೆ. ಆದರೆ, ಇಷ್ಟಕ್ಕೇ ಕೊಲೆಯಾಗಿಲ್ಲ, ಇದರ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದೆಯೆನ್ನುವ ಮಾತು ಕೇಳಿಬರುತ್ತಿದೆ.
ಕೊಲೆಯ ಬಗ್ಗೆ ಸಮೀರ್ ಪತ್ನಿ ನೀಡಿರುವ ದೂರಿನಲ್ಲಿ ಪರಿಚಿತರೊಬ್ಬರು ಕರೆ ಮಾಡಿದ ಕಾರಣಕ್ಕೆ ಕಲ್ಲಾಪು ಬಳಿ ಕಾರು ನಿಲ್ಲಿಸಲಾಗಿತ್ತು ಎನ್ನುವ ಮಾಹಿತಿ ಇದೆ. ಸಮೀರ್ ತನ್ನ ಪತ್ನಿ ಮತ್ತು ತಾಯಿ ಜೊತೆಗೆ ಎಕ್ಕೂರು ಗೋರಿಗುಡ್ಡೆಯಲ್ಲಿರುವ ತಮ್ಮನ ಮನೆಗೆಂದು ಕಾರಿನಲ್ಲಿ ಬರುತ್ತಿದ್ದ. ರಾತ್ರಿ ಹತ್ತು ಗಂಟೆ ವೇಳೆಗೆ ತೊಕ್ಕೊಟ್ಟಿನಲ್ಲಿ ಸಾಗುತ್ತಿದ್ದಾಗಲೇ ಆಪ್ತನೊಬ್ಬ ಕರೆ ಮಾಡಿದ್ದು, ಕಲ್ಲಾಪು ಬಳಿ ನಿಲ್ಲಿಸು, ನಾನು ಅಲ್ಲಿಗೆ ಬರುತ್ತಿದ್ದೇನೆ ಎಂದು ಹೇಳಿದ್ದ. ಇದಕ್ಕಾಗಿ ತನ್ನ ಕಾರನ್ನು ಕಲ್ಲಾಪು ಹೆದ್ದಾರಿ ಬದಿ ನಿಲ್ಲಿಸಿ ಸಮೀರ್ ಹಿಂಭಾಗದಲ್ಲಿ ಒಂದು ಕಾರು ಬಂದಿದ್ದನ್ನು ನೋಡಿ ಹಿಂದಕ್ಕೆ ತೆರಳಿದ್ದ. ಆದರೆ, ಆ ಕಾರಿನಿಂದ ಇಳಿದಿದ್ದ ನಾಲ್ವರು ಬ್ಯಾರಿ ಭಾಷೆಯಲ್ಲಿ ಬೈಯುತ್ತ ತಲವಾರು ಹಿಡಿದು ಅಟ್ಟಿಸಿಕೊಂಡು ಬಂದಿದ್ದಾರೆ.
ಇದನ್ನು ನಿರೀಕ್ಷೆ ಮಾಡಿರದ ಸಮೀರ್ ರಸ್ತೆ ಬಿಟ್ಟು ರೈಲ್ವೇ ಹಳಿಯತ್ತ ಓಡಿದ್ದು, ಅಷ್ಟರಲ್ಲಿ ತಲವಾರು ಏಟು ಕುತ್ತಿಗೆಯನ್ನು ಸವರಿ ಹೋಗಿತ್ತು. ದುಷ್ಕರ್ಮಿಗಳು ಯದ್ವಾತದ್ವಾ ಕಡಿದಿದ್ದರಿಂದ ಸ್ಥಳದಲ್ಲೇ ಸಮೀರ್ ಸಾವಿಗೀಡಾಗಿದ್ದ. ಸಮೀರ್ ಪತ್ನಿ ನೀಡಿರುವ ದೂರಿನಲ್ಲಿ ದುಷ್ಕರ್ಮಿಗಳನ್ನು ಮೊಹಮ್ಮದ್ ನೌಶಾದ್ ಮತ್ತಿತರರು ಎಂದು ನಮೂದಿಸಿದ್ದಾರೆ. ನೌಶಾದ್ ಎಂಬಾತ ಈ ಹಿಂದೆ ಸಮೀರನಿಂದ ಕೊಲೆಯಾಗಿದ್ದ ಟಾರ್ಗೆಟ್ ಇಲ್ಯಾಸ್ ಪತ್ನಿಯ ಸೋದರ ಎನ್ನಲಾಗುತ್ತಿದ್ದು, ಇಲ್ಯಾಸ್ ಹತ್ಯೆ ಪ್ರತೀಕಾರಕ್ಕೇ ಕೊಲೆ ಮಾಡಲಾಗಿದೆ ಎನ್ನುವುದಕ್ಕೆ ಪುಷ್ಟಿ ನೀಡುವಂತಿದೆ.
ಆದರೆ, ಟಾರ್ಗೆಟ್ ಇಲ್ಯಾಸ್ 2018ರಲ್ಲಿ ಹತ್ಯೆಯಾಗಿದ್ದು, ಪ್ರಕರಣದಲ್ಲಿ ಆರೋಪಿಗಳು ನ್ಯಾಯದ ಕುಣಿಕೆಯಿಂದ ಪಾರಾಗಿದ್ದಾರೆ. ಅದರಲ್ಲಿ ನಂಬರ್ ವನ್ ಆರೋಪಿಯಾಗಿರುವುದು ದಾವೂದ್. ಸಮೀರನ ಪಾತ್ರ ಆನಂತರದಲ್ಲಿದೆ. ದಾವೂದ್, ಸಮೀರ್ ಉಳ್ಳಾಲದಲ್ಲೇ ಓಡಾಡಿಕೊಂಡಿದ್ದರೂ ಆರು ವರ್ಷಗಳಲ್ಲಿ ಇವರ ಮೇಲೆ ಯಾವುದೇ ಹಲ್ಲೆ ಆಗಿಲ್ಲ. ಟಾರ್ಗೆಟ್ ಇಲ್ಯಾಸ್ ತಂಡದವರಾಗಲೀ, ಕ್ರಿಮಿನಲ್ ಹಿನ್ನೆಲೆಯ ಸಂಬಂಧಿಕರಾಗಲೀ ಹಲ್ಲೆ ನಡೆಸುವುದಕ್ಕೂ ಮುಂದಾಗಿಲ್ಲ. ಹಾಗಿದ್ದರೆ, ಈಗ ಹಠಾತ್ತಾಗಿ ಇಲ್ಯಾಸ್ ಕೊಲೆಗೆ ಪ್ರತೀಕಾರ ತೀರಿಸುತ್ತಾರೆ ಅಂದ್ರೆ, ಜನರು ನಂಬುವುದಕ್ಕೆ ತಯಾರಿಲ್ಲ.
ಕೊನೆಯ ಕರೆ ಮಾಡಿದ್ದು ಯಾರು ?
ಇಷ್ಟಕ್ಕೂ ಸಮೀರನಿಗೆ ಕೊನೆಯ ಬಾರಿ ಕರೆ ಮಾಡಿದ್ದು ಯಾರು ಎನ್ನುವ ಸುಳಿವಿನ ಬೆನ್ನತ್ತಿ ಹೋದರೆ, ಕೊಲೆಯ ಹಿಂದಿನ ಕಾರಣ ಪತ್ತೆಯಾಗಬಹುದು. ಸಮೀರ್ ಕೊಲೆ, ಕೊಲೆಯತ್ನ, ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಮೈಯಿಡೀ ಅಲರ್ಟಾಗಿರುತ್ತಿದ್ದ ಮನುಷ್ಯ ಎಂದು ಆತನ ಸಹವರ್ತಿಗಳು ಹೇಳುತ್ತಾರೆ. ಮೊನ್ನೆ ತನ್ನ ಅತ್ಯಾಪ್ತನೇ ಹಿಂದಿನಿಂದ ಬರುತ್ತಿದ್ದೇನೆಂದು ಹೇಳಿದ್ದರಿಂದ ಸಮೀರ್ ತನ್ನ ಕಾರು ನಿಲ್ಲಿಸಿದ್ದ. ಆದರೆ, ಹಿಂದಿನಿಂದ ಬರುತ್ತಿದ್ದೇನೆ ಎಂದವನೇ ಜವರಾಯನ ರೂಪದಲ್ಲಿ ಬರ್ತಿದ್ದ ಅನ್ನುವುದನ್ನು ಸಮೀರ್ ಊಹಿಸಿರಲಿಲ್ಲ. ಯಾಕಂದ್ರೆ, ಆತ ಸಮೀರನ ನಿಕಟವರ್ತಿಯೇ ಆಗಿದ್ನಂತೆ.
ಇದರ ನಡುವೆಯೇ ಕಾಸರಗೋಡು ಜಿಲ್ಲೆಯ ಗೋಲ್ಡ್ ಸ್ಮಗ್ಲಿಂಗ್ ನಂಟನ್ನೂ ಸಮೀರ್ ಹೊಂದಿದ್ದ ಎನ್ನಲಾಗುತ್ತಿದ್ದು ಅದೇ ಕಾರಣಕ್ಕೆ ಕೊಲೆಯಾಗಿದೆ ಎನ್ನುವ ಮಾಹಿತಿಗಳನ್ನು ಕೆಲವರು ಹೇಳುತ್ತಿದ್ದಾರೆ. ಆರು ತಿಂಗಳ ಹಿಂದೆ ಗೋಲ್ಡ್ ವಹಿವಾಟಿನಲ್ಲಿ ಮೂಗು ತೂರಿಸಿದ್ದ ಸಮೀರನಿಗೆ ಅಲರ್ಟ್ ಮಾಡಿದ್ದರೂ ಕ್ಯಾರೆಂದಿರಲಿಲ್ಲ. ಆ ಕಾರಣಕ್ಕೆ ಕೊಲೆ ಆಗಿದ್ಯಾ, ಈಗ ಒಂದೇ ದಿನಕ್ಕೆ ಪೊಲೀಸರಿಗೆ ಸೆರೆಸಿಕ್ಕಿರುವ ಬಂಧಿತರು ಯಾರಿಂದ ಸುಪಾರಿ ಪಡೆದಿದ್ದಾರೆ ಎನ್ನುವುದನ್ನು ಪೊಲೀಸರು ತನಿಖೆ ಮಾಡೋದಿಲ್ಲ. ಟಾರ್ಗೆಟ್ ಇಲ್ಯಾಸ್ ಕೊಲೆಯ ಬಳಿಕ ಸಮೀರನಿಗೆ ಖಾಸಾ ದೋಸ್ತ್ ಆಗಿ ಬದಲಾಗಿದ್ದ ದಾವೂದ್ ಈಗ ಎಷ್ಟರ ಮಟ್ಟಿಗೆ ಜೊತೆಗಿದ್ದ ಎನ್ನುವುದು ಗೊತ್ತಿಲ್ಲ. ಆದರೆ, ಕೊನೆಯ ಬಾರಿಗೆ ಕರೆ ಮಾಡಿದ್ದ ಆಪ್ತಮಿತ್ರ ಯಾರು ಎನ್ನುವುದು ಉಳ್ಳಾಲ ಪೊಲೀಸರಿಗೆ ಗೊತ್ತು. ಹೀಗಾಗಿ, ಆತನನ್ನು ಪಾರು ಮಾಡಿಸಲು ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಅನುಮಾನದ ಮಾತುಗಳು ಢಾಳಾಗಿ ಕೇಳಿಬರುತ್ತಿವೆ. ಪೊಲೀಸ್ ಕಮಿಷನರ್ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಮಾತ್ರ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತು.
Mangalore Rowdy sameer murder, who is the reason behind killing, detailed crime report by Headline Karnataka. As per the preliminary investigation, the victim was followed by four to five assailants wielding dangerous weapons such as talwars near a local complex. It is believed that the accused had a pre-existing rivalry with the victim and had meticulously planned the attack.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
22-06-25 07:48 pm
HK News Desk
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm