ಬ್ರೇಕಿಂಗ್ ನ್ಯೂಸ್
14-08-24 04:43 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್.14: ರೌಡಿಶೀಟರ್ ಕಡಪ್ಪರ ಸಮೀರ್ ಕೊಲೆ ಪ್ರಕರಣ ಸಂಬಂಧಿಸಿ ಉಳ್ಳಾಲ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವುದನ್ನು ಪೊಲೀಸ್ ಕಮಿಷನರ್ ಖಚಿತಪಡಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ ಎನ್ನುವುದು ಮಂಗಳವಾರ ಬೆಳಗ್ಗೆಯೇ ತಿಳಿದುಬಂದಿತ್ತು. ಆದರೆ, ಪೊಲೀಸರು ಅದನ್ನು ಖಚಿತಪಡಿಸಿರಲಿಲ್ಲ.
ಉಳ್ಳಾಲದ ಕಿನ್ಯಾ ನಿವಾಸಿ ನಿಯಾಸ್, ಸುರತ್ಕಲ್ ಕಾಟಿಪಳ್ಳದ ಮಹಮ್ಮದ್ ನೌಶಾದ್, ಮಂಗಳೂರು ಬಜಾಲ್ ನಿವಾಸಿ ತನ್ವೀರ್, ಉಡುಪಿ ಕಾಪು ನಿವಾಸಿ ಮಹಮ್ಮದ್ ಇಕ್ಬಾಲ್ ಬಂಧಿತರು. ದರೋಡೆಗೆ ಸಂಚು ಪ್ರಕರಣದಲ್ಲಿ ಬಂಧಿತನಾಗಿ ಮಂಗಳೂರು ಜೈಲಿನಲ್ಲಿದ್ದ ಕಡಪ್ಪರ ಸಮೀರ್ ವಾರದ ಹಿಂದಷ್ಟೇ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಮೊನ್ನೆ ಆಗಸ್ಟ್ 11ರ ಭಾನುವಾರ ರಾತ್ರಿ ತನ್ನ ಪತ್ನಿ ಮತ್ತು ತಾಯಿ ಜೊತೆಗೆ ಕಾರಿನಲ್ಲಿ ತಮ್ಮನ ಗೋರಿಗುಡ್ಡೆಯ ಮನೆಗೆ ತೆರಳುತ್ತಿದ್ದಾಗ ಆಪ್ತನೊಬ್ಬನ ಕರೆ ಬಂತೆಂದು ಕಲ್ಲಾಪಿನಲ್ಲಿ ನಿಲ್ಲಿಸಿದ್ದ. ಅಷ್ಟರಲ್ಲಿ ಹಿಂದಿನಿಂದ ಬಂದಿದ್ದ ಕಾರಿನಿಂದ ಇಳಿದ ನಾಲ್ವರು ಹಂತಕರು ತಲವಾರಿನಲ್ಲಿ ದಾಳಿ ನಡೆಸಿ, ಸಮೀರನನ್ನು ಹತ್ಯೆ ಮಾಡಿದ್ದರು.

ಮೇಲ್ನೋಟಕ್ಕೆ 2018ರಲ್ಲಿ ಕೊಲೆಯಾಗಿದ್ದ ಉಳ್ಳಾಲದ ನಟೋರಿಯಸ್ ರೌಡಿ ಟಾರ್ಗೆಟ್ ಇಲ್ಯಾಸ್ ಕೊಲೆಗೆ ಪ್ರತೀಕಾರ ಎಂದು ಹೇಳಲಾಗುತ್ತಿದ್ದರೂ, ಯಾವ ಕಾರಣಕ್ಕೆ ಆಗಿದೆಯೆನ್ನುವುದನ್ನು ಪೊಲೀಸರು ತಿಳಿಸಿಲ್ಲ. ಟಾರ್ಗೆಟ್ ಇಲ್ಯಾಸ್ ಕೊಲೆಗೆ ಪ್ರತೀಕಾರ ತೀರಿಸಲು ಆರು ವರ್ಷ ಯಾಕೆ ಕಾಯಬೇಕಾಯ್ತು ಅನ್ನುವ ಪ್ರಶ್ನೆ ಎದುರಾಗಿದೆ. ಆದರೆ, ಪತ್ನಿ ನೀಡಿರುವ ದೂರಿನಲ್ಲಿ ಕೊನೆಯ ಬಾರಿಗೆ ಆಪ್ತನೊಬ್ಬ ಕರೆ ಮಾಡಿ, ಕಲ್ಲಾಪಿನಲ್ಲಿ ಕಾರು ನಿಲ್ಲಿಸಲು ಹೇಳಿದ್ದ ಎನ್ನುವ ಅಂಶ ಇದೆ. ಕರೆ ಮಾಡಿದ ಆಪ್ತ ಯಾರು ಎನ್ನುವುದು ಪೊಲೀಸರಿಗೆ ತಿಳಿದಿದ್ದರೂ, ಕೊಲೆ ಪ್ರಕರಣದಲ್ಲಿ ಆತನ ಪಾತ್ರ ಏನು ಅನ್ನುವುದು ದೃಢವಾಗಿಲ್ಲ. ಪೊಲೀಸರು ಈಗ ನಾಲ್ವರನ್ನು ಬಂಧಿಸಿ, ಕೊಲೆ ಹಿಂದಿನ ಕಾರಣ ಪತ್ತೆ ಮಾಡುತ್ತಿದ್ದಾರೆ.
ರೌಡಿ ಸಮೀರ್ ಜೈಲಿನಲ್ಲಿದ್ದಾಗ ಜುಲೈ 1ರಂದು ಸಹ ಕೈದಿಗಳೇ ಹಲ್ಲೆ ನಡೆಸಿದ್ದರು. ಟೋಪಿ ವಾಲಾ ಮತ್ತು ತಲ್ಲತ್ ಗ್ಯಾಂಗ್ ಸದಸ್ಯರು ಈ ಹಲ್ಲೆ ನಡೆಸಿದ್ದರು ಎನ್ನೋದು ತಿಳಿದುಬಂದಿದ್ದ ಮಾಹಿತಿ. ಸಮೀರ್ ಈ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ನಡೆಸುತ್ತಿದ್ದ ಬ್ರೋಕರುಗಳನ್ನು ಹಿಡಿದಿಟ್ಟು ಕಾಸು ಮಾಡಿಕೊಂಡಿದ್ದ ಎನ್ನುವ ಆರೋಪಗಳಿದ್ದು, ಅದೇ ಕಾರಣಕ್ಕೆ ಕೊಲೆಯಾಗಿದೆ ಎನ್ನುವುದು ಕೆಲವರಿಂದ ತಿಳಿದುಬಂದ ಮಾಹಿತಿ. ಈ ಬಗ್ಗೆ ಪೊಲೀಸರು ಇನ್ನೂ ದೃಢಪಡಿಸಿಲ್ಲ. ಬಂಧಿತರಲ್ಲಿ ಮೊಹಮ್ಮದ್ ನೌಶಾದ್, ಟಾರ್ಗೆಟ್ ಇಲ್ಯಾಸ್ ಪತ್ನಿಯ ಸೋದರನಾಗಿದ್ದು, ಮೊದಲ ಬಾರಿಗೆ ಅಪರಾಧ ಚಟುವಟಿಕೆಯಲ್ಲಿ ಕಾಣಿಸಿಕೊಂಡಿದ್ದಾನೆ. ಸಮೀರ್ ಬಗ್ಗೆ ದ್ವೇಷ ಇದ್ದವರು ಇಲ್ಯಾಸ್ ಕೊಲೆಯ ಪೂರ್ವ ದ್ವೇಷದಲ್ಲಿದ್ದವರನ್ನು ಛೂಬಿಟ್ಟು ಬೇಳೆ ಬೇಯಿಸಿಕೊಂಡಿದ್ದಾರೆ ಎನ್ನುವ ಶಂಕೆ ಪ್ರಬಲವಾಗಿದೆ.
Mangalore Target Ilyas VS Ullal Sameer Murder case, police arrest four accused, hold gold case information to media. The investigation has revealed that the killing was an act of retaliation for the earlier murder of Ilyas, with Sameer's death being orchestrated by Mohammad Naushad, the brother-in-law of Ilyas.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
24-01-26 02:13 pm
HK News Staffer
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm