ಬ್ರೇಕಿಂಗ್ ನ್ಯೂಸ್
19-08-24 10:35 pm Mangalore Correspondent ಕ್ರೈಂ
ಉಳ್ಳಾಲ, ಆ.19: ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧದ ನಡುವೆಯೂ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾತ್ರ ನಿತ್ಯ, ನಿರಂತರವಾಗಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಲೇ ಇದೆ. ಉಚ್ಚಿಲದ ಅಜ್ಜಿನಡ್ಕ ಗುಡ್ಡೆ ಎಂಬಲ್ಲಿನ ಸಮತಟ್ಟಾದ ಗುಡ್ಡ ಪ್ರದೇಶದಲ್ಲಿ ಟನ್ ಗಟ್ಟಲೆ ಮರಳನ್ನು ದಾಸ್ತಾನು ಇರಿಸಲಾಗಿದ್ದು ನಸುಕಿನ ಜಾವ ಇಲ್ಲಿಂದ ಮರಳು ಸರಬರಾಜು ನಡೆಯುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಉಳ್ಳಾಲ ಪೊಲೀಸರು ತಮಗೇನೂ ತಿಳಿಯದ ರೀತಿ ಮರಳು ಮಾಫಿಯಾಕ್ಕೆ ಬೆದರಿ ಮಂಡಿ ಊರಿ ಸುಮ್ಮನಾಗಿದ್ದಾರೆ.
ಉಳ್ಳಾಲ ಠಾಣೆ ವ್ಯಾಪ್ತಿಯ ಉಚ್ಚಿಲ-ಬಟ್ಟಪ್ಪಾಡಿ, ತಲಪಾಡಿ, ಕೋಟೆಪುರ ಸಮುದ್ರ,ನದಿ ತೀರದಿಂದ ನಿತ್ಯವೂ ಅಕ್ರಮವಾಗಿ ಮರಳು ಎತ್ತಲಾಗುತ್ತಿದೆ. ಮುಂಜಾನೆ ನಸುಕಿನ ಜಾವ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಹೆದ್ದಾರಿಯ ವಿರುದ್ಧ ಧಿಕ್ಕಿನಲ್ಲಿ ಮರಳುಗಾರಿಕೆಯ ಲಾರಿಗಳು ಬುಸುಗುಟ್ಟಿ ಧಾವಿಸುತ್ತಿದ್ದರೂ ಇವರ ವಿರುದ್ಧ ಉಳ್ಳಾಲ ಪೊಲೀಸರಾಗಲಿ, ಸಂಚಾರಿ ಪೊಲೀಸರಾಗಲೀ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮರಳು ಮಾಫಿಯಾಕ್ಕೆ ಪೊಲೀಸರೇ ಬೆದರಿ ಬಾಲ ಮುದುಡಿ ಕುಳಿತರೇ ಎಂಬಂತಿದೆ ಪರಿಸ್ಥಿತಿ.
ಉಚ್ಚಿಲ ಸಮೀಪದ ಅಜ್ಜಿನಡ್ಕದ ಗುಡ್ಡೆ ಕೊಪ್ಪಲ್ ಎಂಬ ಸಮತಟ್ಟಾದ ಗುಡ್ಡ ಪ್ರದೇಶದಲ್ಲಿ ಮೆಟ್ರಿಕ್ ಟನ್ ಗಳಷ್ಟು ಮರಳನ್ನ ಅಕ್ರಮವಾಗಿ ದಾಸ್ತಾನು ಇರಿಸಲಾಗಿದೆ. ದಿನ ನಿತ್ಯವೂ ರಾತ್ರಿ ವೇಳೆ ಇಲ್ಲಿಗೆ ಮರಳು ಬರುತ್ತಿದ್ದು ಅಕ್ರಮವಾಗಿ ದಾಸ್ತಾನು ಇರಿಸಲಾಗುತ್ತಿದೆ. ಜಾಸ್ತಿ ಬೆಲೆ ಕೊಡುವ ಗಿರಾಕಿಗಳಿಗೆ ಇಲ್ಲಿಂದ ಮರಳನ್ನ ಲಾರಿಗಳಲ್ಲಿ ಸಾಗಾಟ ನಡೆಸಲಾಗುತ್ತಿದೆ. ಅಜ್ಜಿನಡ್ಕದ ಮುಖ್ಯ ರಸ್ತೆ ಬದಿಯಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಉಳ್ಳಾಲ ಪೊಲೀಸರ ಕಣ್ಣಿಗೆ ಮಾತ್ರ ಇದು ಕಂಡೇ ಇಲ್ಲ. ಬಡ ವರ್ಗದವರಿಗೆ ಕಟ್ಟಡ ನಿರ್ಮಾಣ ಮಾಡಲು ಮರಳೇ ಸಿಗದ ಸಮಯದಲ್ಲಿ ಉಳ್ಳವರಿಗೆ ಈ ರೀತಿ ಅಕ್ರಮವಾಗಿ ದಾಸ್ತಾನು ಇರಿಸಿದ ಮರಳು ಪೂರೈಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಕ್ರಮ ಮರಳುಗಾರಿಕೆಯ ವಿರುದ್ಧ ಕ್ರಮಕ್ಕೇನೋ ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ ಕ್ರಮ ಕೈಗೊಳ್ಳುವವರು ಯಾರು ಎನ್ನೋದು ಯಕ್ಷಪ್ರಶ್ನೆ.
Mangalore Illegal sand sale at Ajjinadka in ulllal, police take no action. Ajjinadka near uchila is filled with illegal sand and customers throng to purchase sand
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm