ಬ್ರೇಕಿಂಗ್ ನ್ಯೂಸ್
21-08-24 05:41 pm HK News Desk ಕ್ರೈಂ
ಅಮೆರಿಕ, ಆ 21: ಮಹಿಳೆಯರು, ಯುವತಿಯರು ಹಾಗೂ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ನಗ್ನ ಚಿತ್ರಗಳ ಫೋಟೋ ತೆಗೆದು ಸ್ಟೋರ್ ಮಾಡಿಕೊಂಡಿದ್ದ ಭಾರತೀಯ ಮೂಲದ ವೈದ್ಯನೊಬ್ಬನನ್ನು ಅಮೆರಿಕ ದೇಶದ ಮಿಚಿಗನ್ ರಾಜ್ಯದ ಡೆಟ್ರಾಯಿಟ್ ನಗರದಲ್ಲಿ ಬಂಧಿಸಲಾಗಿದೆ. ಈತನ ಮೊಬೈಲ್‌ನಲ್ಲಿ ಸಾವಿರಾರು ಮಹಿಳೆಯರು ಹಾಗೂ ಮಕ್ಕಳ ನಗ್ನ ಚಿತ್ರಗಳು ಹಾಗೂ ವಿಡಿಯೋಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.
ಈ ವಿಕೃತ ಕಾಮಿ ವೈದ್ಯ ಮಹಿಳೆಯರು ಹಾಗೂ ಮಕ್ಕಳು ಇರುವ ಕಡೆಗಳಲ್ಲೇ ಓಡಾಡುತ್ತಿದ್ದ. ಸ್ವಿಮ್ಮಿಂಗ್ ಶಾಲೆಗಳು, ಆಸ್ಪತ್ರೆಯ ಬೆಡ್‌ಗಳು ಸೇರಿದಂತೆ ಹಲವೆಡೆ ಮಹಿಳೆಯರು ಹಾಗೂ ಮಕ್ಕಳು ಬಟ್ಟೆ ಬದಲಿಸುವ ವೇಳೆ ಬೆತ್ತಲೆಯಾಗಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಈತ ಚಿತ್ರೀಕರಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈ ವಿಕೃತ ಕೃತ್ಯ ಎಸಗಿದ ವೈದ್ಯನ ಹೆಸರು ಡಾ. ಓಮೈರ್ ಏಜಾಜ್.. ಈತನ ವಯಸ್ಸು 40 ವರ್ಷ. ಡೆಟ್ರಾಯಿಟ್ ನಗರದ ಉತ್ತರ ಭಾಗದಲ್ಲಿ ಇರುವ ರೋಚೆಸ್ಟರ್ ಹಿಲ್ಸ್‌ನಲ್ಲಿ ಇರುವ ಈತನ ಮನೆಯಿಂದಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಂತರಿಕ ಔಷಧ ವಿಭಾಗದ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ ಓಮೈರ್ ಏಜಾಜ್ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಆರೋಪಗಳನ್ನ ಹೊರಿಸಲಾಗಿದೆ. ಈತನ ವಿರುದ್ಧ ಸಾಕ್ಷ್ಯಾಧಾರಗಳನ್ನು ತೋರಿಸಿ ವಿಚಾರಣೆ ನಡೆಸಿದ ವೇಳೆ ಆರೋಪಿ ತನ್ನ ಮೇಲಿನ ಆರೋಪ ಒಪ್ಪಿಕೊಂಡಿದ್ಧಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ವೈದ್ಯನನ್ನು ಓಕ್ಲ್ಯಾಂಡ್ ಕೌಂಟಿ ಕಾರಾಗೃಹದಲ್ಲಿ ಇರಿಸಲಾಗಿದ್ದು, 2 ಮಿಲಿಯನ್ ಅಮೆರಿಕನ್ ಡಾಲರ್ ಬಾಂಡ್ ವಿಧಿಸಲಾಗಿದೆ.
2 ವರ್ಷದ ಮಗುವನ್ನೂ ಬಿಡದ ಕೀಚಕ!
ಆರೋಪಿ ವೈದ್ಯನ ಮೊಬೈಲ್ ಫೋನ್‌ನಲ್ಲಿ ಎರಡು ವರ್ಷದ ಹೆಣ್ಣು ಮಗುವಿನ ಬೆತ್ತಲೆ ಚಿತ್ರ, ನಾಲ್ಕು ವರ್ಷ ವಯಸ್ಸಿನ ಬಾಲಕಿಯರ ಬೆತ್ತಲೆ ಚಿತ್ರ, ಇಬ್ಬರು ಮಹಿಳೆಯರು ತಮ್ಮ ಮಕ್ಕಳ ಜೊತೆ ಸ್ವಿಮ್ಮಿಂಗ್ ಶಾಲೆಯಲ್ಲಿ ನಗ್ನವಾಗಿದ್ದ ಚಿತ್ರ ಸೇರಿದಂತೆ ಹಲವು ಫೋಟೋಗಳು ಪೊಲೀಸರನ್ನೇ ದಂಗುಬಡಿಸಿದೆ. ಈಜುಕೊಳಕ್ಕೆ ಬರುತ್ತಿದ್ದ ಮಹಿಳೆಯರು ಹಾಗೂ ಮಕ್ಕಳು ಬಟ್ಟೆ ಬದಲಿಸುವ ವೇಳೆ ಈತ ಸಮೀಪದಲ್ಲೇ ಇದ್ದ ಚಾರ್ಜಿಂಗ್ ಸ್ಟಾಲ್ ಬಳಿಯಲ್ಲಿ ನಿಂತು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ವಿಕೃತ ಕೃತ್ಯ ಬಯಲು ಮಾಡಿದ್ದು ವೈದ್ಯನ ಹೆಂಡತಿ!
ತನ್ನ ಗಂಡನ ಮೊಬೈಲ್‌ನಲ್ಲಿ ಅಸಹ್ಯಕರವಾದ ಫೋಟೋ, ವಿಡಿಯೋಗಳು ಇವೆ ಎಂದು ಖುದ್ದು ಆರೋಪಿ ವೈದ್ಯನ ಹೆಂಡತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ! ಆಕೆ ನೀಡಿದ ಮಾಹಿತಿ ಅನ್ವಯ ಪೊಲೀಸರು ತನಿಖೆ ನಡೆಸಿ ಆತನ ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ ಈ ಆಘಾತಕಾರಿ ಸಂಗತಿ ಬಯಲಾಗಿದೆ. ಆರೋಪಿ ಮನೆ, ಆಸ್ಪತ್ರೆ ಸೇರಿ ಹಲವೆಡೆಯಿಂದ ಪೊಲೀಸರು 6 ಕಂಪ್ಯೂಟರ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು ಹಾಗೂ 15 ಬಾಹ್ಯ ಸಂಗ್ರಹ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.
A 40-year-old Indian doctor was held in a US jail on a USD 2 million bond after being charged with multiple sex crimes for allegedly recording hundreds of nude images and videos of children and women over several years, according to media reports.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm