Ivan dsouza house stone: ಐವಾನ್ ಡಿಸೋಜ ವಿರುದ್ಧ ಹೆಚ್ಚಿದ ಆಕ್ರೋಶ ; ಮಂಗಳೂರಿನ ಮನೆಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಪಾಂಡೇಶ್ವರ ಪೊಲೀಸರ ತನಿಖೆ 

22-08-24 09:24 am       Mangaluru correspondent   ಕ್ರೈಂ

ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ‌ ನೀಡಿರುವ ಬಗ್ಗೆ ಬಿಜೆಪಿಗರ ಆಕ್ರೋಶಕ್ಕೆ ತುತ್ತಾಗಿರುವಾಗಲೇ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.

ಮಂಗಳೂರು, ಆಗಸ್ಟ್ 22: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ‌ ನೀಡಿರುವ ಬಗ್ಗೆ ಬಿಜೆಪಿಗರ ಆಕ್ರೋಶಕ್ಕೆ ತುತ್ತಾಗಿರುವಾಗಲೇ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಮಂಗಳೂರು ನಗರದ ವೆಲೆನ್ಸಿಯಾದಲ್ಲಿರುವ ಐವಾನ್ ಡಿಸೋಜ ಅವರ ಮನೆಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಕಲ್ಲು ತೂರಾಟದಿಂದ ಯಾವುದೇ ಹಾನಿಯಾಗಿಲ್ಲ.‌  ಮನೆಯ ಕಿಟಕಿಯ ಫ್ರೇಮ್ ಗೆ ಕಲ್ಲು ಬಿದ್ದಿದ್ದರಿಂದ ತೊಂದರೆ ಆಗಿಲ್ಲ. ಸ್ಥಳಕ್ಕೆ ಪಾಂಡೇಶ್ವರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆಸುಪಾಸಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.‌ 

ಐವಾನ್ ಡಿಸೋಜ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಬಿಜೆಪಿ ಇಂದು ಆಗಸ್ಟ್ 22ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಮಂಗಳೂರಿನ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿದೆ. ಇದೇ ಸಂದರ್ಭದಲ್ಲಿ ಡಿಸೋಜ ಮನೆಗೆ ಕಲ್ಲು ಬಿದ್ದಿದ್ದು ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

A group of miscreants pelted stones at the residence of MLC Ivan D’Souza in Valencia, Mangaluru, on the night of August 21. The incident is believed to be a consequence of D’Souza’s controversial statement against the Governor