ಬ್ರೇಕಿಂಗ್ ನ್ಯೂಸ್
24-08-24 04:24 pm HK News Desk ಕ್ರೈಂ
ಹಾಸನ, ಆಗಸ್ಟ್.24: ಇನ್ಸೂರೆನ್ಸ್ ಹಣ ಹೊಡೆಯುವುದಕ್ಕಾಗಿ ಗಂಡ- ಹೆಂಡತಿ ಸೇರಿ ಖತರ್ನಾಕ್ ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾರೆ. ತನ್ನನ್ನೇ ಹೋಲುವ ವ್ಯಕ್ತಿಯ ಪರಿಚಯ ಮಾಡಿಕೊಂಡು ನಂತರ ಆಕ್ಸಿಡೆಂಟ್ ಮಾಡಿಸಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗದ ಮುನಿಸ್ವಾಮಿಗೌಡ ಮತ್ತು ಆತನ ಪತ್ನಿ ಶಿಲ್ಪಾರಾಣಿ ಕೃತ್ಯ ಎಸಗಿದವರು. ಗಂಡ ಸತ್ತಿದ್ದಾನೆಂದು ಹೇಳಿ ಇನ್ಸೂರೆನ್ಸ್ ಕಂಪನಿಯಿಂದ ಕೋಟಿ ಹಣ ಪಡೆಯಲು ಪತ್ನಿಯೇ ಮುನಿಸ್ವಾಮಿ ಗೌಡ ರೀತಿಯ ಅಮಾಯಕ ವ್ಯಕ್ತಿಯನ್ನು ಕೊಲ್ಲಿಸಿ ದುಡ್ಡು ಹೊಡೆಯಲು ಪ್ಲಾನ್ ಮಾಡಿದ್ದಳು. ಮುನಿಸ್ವಾಮಿಗೌಡ ತನ್ನ ಹೋಲುವ ವ್ಯಕ್ತಿಯೊಬ್ಬನನ್ನು ಶಿಡ್ಲಘಟ್ಟಕ್ಕೆ ಹೋಗೋಣ ಎಂದು ಕರೆದೊಯ್ದಿದ್ದು ದಾರಿ ಮಧ್ಯೆ ಕಾರು ಪಂಕ್ಚರ್ ಆಗಿದೆ, ಟೈರ್ ಬದಲಿಸು ಅಂತ ಅಮಾಯಕನಿಗೆ ಹೇಳಿದ್ದ. ರಸ್ತೆ ಪಕ್ಕ ಕಾರು ನಿಲ್ಲಿಸಿಕೊಂಡು ಟೈರ್ ಬದಲಿಸುವಾಗ ಅಮಾಯಕನ ಮೇಲೆ ಲಾರಿ ಹರಿದಿತ್ತು. ವ್ಯಕ್ತಿಯನ್ನು ಲಾರಿ ಹರಿಸಿ ಕೊಲ್ಲಲು ಚಾಲಕನ ಮೊದಲೇ ಬುಕ್ ಮಾಡಿಕೊಂಡಿದ್ದ ಮುನಿಸ್ವಾಮಿ, ಅದರಲ್ಲಿ ಸಕ್ಸಸ್ ಆಗಿದ್ದ. ಅಮಾಯಕ ಸತ್ತ ನಂತರ ತನ್ನ ಕಾರನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದ. ಬಳಿಕ ಜಿಲ್ಲಾಸ್ಪತ್ರೆಗೆ ಮೃತ ವ್ಯಕ್ತಿಯ ಬಾಡಿ ಶಿಫ್ಟ್ ಮಾಡಲಾಗಿತ್ತು.
ಇತ್ತ ಮುನಿಸ್ವಾಮಿ ಗೌಡನ ಪತ್ನಿ ಶಿಲ್ಪಾರಾಣಿ ನನ್ನ ಪತಿ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಮತ್ತು ಸಂಬಂಧಿಕರಲ್ಲಿ ಹೇಳಿಕೊಂಡಿದ್ದಳು. ಅಪಘಾತದಲ್ಲಿ ಸತ್ತ ವ್ಯಕ್ತಿಯ ಶವ ಪಡೆದು ಸ್ವತಃ ಪತ್ನಿಯೇ ಕೋಲಾರದ ಚಿಕ್ಕಕೋಲಿಗದಲ್ಲಿ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಳು. ಆಕೆ ಮತ್ತು ಆತನ ಸಂಬಂಧಿಕರು ಅಂತ್ಯ ಸಂಸ್ಕಾರದಲ್ಲಿಯೂ ಭಾಗವಹಿಸಿದ್ದರು. ಆಗಸ್ಟ್ 12ರ ರಾತ್ರಿ ಅಪಘಾತದ ರೀತಿ ಕೊಲೆ ಆಗಿದ್ದರೂ, ಎಲ್ಲವೂ ಸದ್ದಿಲ್ಲದೆ ಆಗಿಹೋಗಿತ್ತು.
ಮೂರ್ನಾಲ್ಕು ದಿನದ ನಂತರ, ಈ ಕುಟುಂಬದ ಸಂಬಂಧಿಕರೂ ಆದ ಪೊಲೀಸ್ ಇನ್ಸ್ ಪೆಕ್ಟರ್ ಶಿಡ್ಲಘಟ್ಟದ ಶ್ರೀನಿವಾಸ್ ಬೆಂಗಳೂರಿನಲ್ಲಿ ಮುನಿಸ್ವಾಮಿಯನ್ನು ಪ್ರತ್ಯಕ್ಷವಾಗಿ ನೋಡಿದ್ದು ಅಚ್ಚರಿಗೊಂಡಿದ್ದಾರೆ. ಎಲಾ, ಸತ್ತವನು ಎದ್ದು ಬಂದನಾ ಅಂತ ಶಾಕ್ ಆಗಿದ್ದರು. ಅಲ್ಲಿಯೇ ಆತನನ್ನು ಕರೆದು ವಿಚಾರಿಸಿದಾಗ, ನಿಜ ವಿಚಾರ ಬಾಯಿ ಬಿಟ್ಟಿದ್ದಾನೆ. ವಿಪರೀತ ಸಾಲದ ಕಾರಣಕ್ಕೆ ಇನ್ಸೂರೆನ್ಸ್ ಕ್ಲೈಮ್ ಮಾಡಲು ನಾನೇ ಸತ್ತು ಹೋಗಿರುವ ರೀತಿ ನಾಟಕ ಮಾಡಿದ್ದಾಗಿ ಆರೋಪಿ ತಿಳಿಸಿದ್ದಾನೆ.
ಅಷ್ಟರಲ್ಲಿ ಇನ್ಸ್ ಪೆಕ್ಟರ್ ಶ್ರೀನಿವಾಸ್ ಪೊಲೀಸ್ ಮೈಂಡ್ ಜಾಗೃತಗೊಂಡಿದ್ದು ಕೂಡಲೇ ಗಂಡಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಮುನಿಸ್ವಾಮಿ ಮತ್ತು ಆತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಿನಿಮಾ ರೀತಿ ಕೊಂದು ನಾಟಕ ಮಾಡಿ ಕೋಟಿ ಕೋಟಿ ಇನ್ಸೂರೆನ್ಸ್ ಹಣಕ್ಕೆ ಪ್ಲಾನ್ ಮಾಡಿದ್ದ ದಂಪತಿ ಕಂಬಿ ಹಿಂದೆ ಹೋಗುವಂತಾಗಿದೆ.
Hassan couple arrested over murder for of innocent man for insurance.The murder by couple killing a innocent man for insurence has been exposed by Police inspector.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm