ಬ್ರೇಕಿಂಗ್ ನ್ಯೂಸ್
26-08-24 11:05 pm Udupi Correspondent ಕ್ರೈಂ
ಉಡುಪಿ, ಆಗಸ್ಟ್ 26: ಕಾರ್ಕಳ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗೆ ಡ್ರಗ್ಸ್ ಪೂರೈಕೆ ಮಾಡಿದ್ದ ಅಭಯ್ ಎನ್ನುವ ಪೆಡ್ಲರ್ ನನ್ನು ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಘಟನೆ ಸಂಬಂಧಿಸಿ ಅಲ್ತಾಫ್ ಮತ್ತು ಸವೇರಾ ರಿಚರ್ಡ್ ಎಂಬವರನ್ನು ಈಗಾಗಲೇ ಬಂಧಿಸಲಾಗಿತ್ತು.
ಮಾಹಿತಿ ಪ್ರಕಾರ, ಅಲ್ತಾಫ್ ಕಲ್ಲು ಕೋರೆಯಲ್ಲಿ ಲಾರಿ ಡ್ರೈವರ್ ಆಗಿದ್ದ. ಅದೇ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮನೆಗೆ ತೆರಳಿದ್ದಾಗ ಆ ವ್ಯಕ್ತಿಯ ಮಗಳ ಪರಿಚಯ ಆಗಿತ್ತು. ಆನಂತರ, ಇನ್ ಸ್ಟಾ ಗ್ರಾಮಿನಲ್ಲಿ ಇವರು ಸಂಪರ್ಕಕ್ಕೆ ಬಂದು ಮೂರು ತಿಂಗಳು ಕಳೆದಿತ್ತು. ಮೊನ್ನೆ ಆಗಸ್ಟ್ 18ರಂದು ಅಲ್ತಾಫ್, ಮೊದಲೇ ಕಾರು ಬುಕ್ ಮಾಡಿದ್ದಲ್ಲದೆ, ಪರಿಚಯದ ಹುಡುಗಿಯನ್ನು ಸುತ್ತಾಟಕ್ಕೆ ಬರಹೇಳಿದ್ದ. ಕಾರ್ಕಳ ಪೇಟೆಗೆ ಹೋಗುವುದೆಂದು ಹೇಳಿ ಕಾರಿನಲ್ಲಿ ಹತ್ತಿಸಿಕೊಂಡಿದ್ದ.
ಆದರೆ, ಕಾರಿನಲ್ಲಿ ಮೊದಲೇ ಡ್ರಗ್ಸ್, ಫ್ಯಾಂಟಾ ಬಾಟಲಿ, ಬಿಯರ್ ಬಾಟಲಿಗಳನ್ನು ರೆಡಿ ಮಾಡಿಕೊಂಡಿದ್ದ. ಯುವತಿಗೆ ಫ್ಯಾಂಟಾದಲ್ಲಿ ಡ್ರಗ್ಸ್ ಬೆರಸಿ ಕೊಟ್ಟಿರುವ ಶಂಕೆಯಿದೆ. ಅಮಲಿನಿಂದ ಅರೆ ಪ್ರಜ್ಞೆಯ ಸ್ಥಿತಿಗೆ ಹೋದ ಯುವತಿಯನ್ನು ಸವೇರಾ ರಿಚರ್ಡ್ ಸೂಚನೆಯಂತೆ ಆತನ ಮನೆ ಹತ್ತಿರದ ಕಾಡಿಗೆ ಕರೆದೊಯ್ದಿದ್ದಾರೆ. ಅಲ್ಲಿ ಇಡೀ ದಿನ ಗ್ಯಾಂಗ್ ರೇಪ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಂಜೆ ಹೊತ್ತಿಗೆ, ಅಮಲಿನಲ್ಲೇ ಇದ್ದ ಯುವತಿಯನ್ನು ಆಕೆಯ ಮನೆಯ ಬಳಿಗೆ ಕರೆತಂದು ಬಿಟ್ಟು ಹೋಗಿದ್ದಾರೆ.
ಯುವತಿ ತೀವ್ರ ಬಳಲಿಕೆ, ನೋವಿನಿಂದಿದ್ದರೂ ಮನೆಯವರಲ್ಲಿ ಅಲ್ತಾಫ್ ಹೆಸರು ಹೇಳಿದ್ದಾಳೆ. ಕೂಡಲೇ ಆಕೆಯನ್ನು ಮನೆಮಂದಿ ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರು ಗ್ಯಾಂಗ್ ರೇಪ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಕಳ ಪೊಲೀಸರಿಗೂ ಮಾಹಿತಿ ಹೋಗಿದ್ದು ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ತಾಫ್ ಮತ್ತು ಕೃತ್ಯಕ್ಕೆ ಬಳಸಿದ್ದ ಶಿವಮೊಗ್ಗ ಮೂಲದ ಕಾರನ್ನು ಅದೇ ದಿವಸ ವಶಕ್ಕೆ ಪಡೆಯಲಾಗಿತ್ತು. ಡ್ರಗ್ಸ್ ಪೂರೈಸಿದ್ದ ಅಭಯ್ ಮತ್ತು ಜೊತೆಗೆ ತನ್ನೊಂದಿಗೆ ಸಾಥ್ ನೀಡಿದ್ದ ರಿಚರ್ಡ್ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಕಾರಿನಲ್ಲಿ ಪುಡಿಯ ಮಾದರಿಯಲ್ಲಿದ್ದ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಿಚರ್ಡ್ ಸವೇರಾ ಈ ಹಿಂದೆಯೂ ಇದೇ ರೀತಿ ಅತ್ಯಾಚಾರ, ಇನ್ನಿತರ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದು, ಊರವರೇ ಹಲವು ಬಾರಿ ಧರ್ಮದೇಟು ನೀಡಿದ್ದೂ ಇದೆಯಂತೆ. ಮನೆಯವರೇ ಆತನ ಉಪಟಳ ತಾಳಲಾರದೇ ಪೊಲೀಸರಿಗೆ ದೂರು ನೀಡಿದ್ದಾರಂತೆ. ಅಲ್ತಾಫ್ ಒಟ್ಟು ಪ್ರಕರಣದ ರೂವಾರಿಯಾಗಿದ್ದು, ರಿಚರ್ಡ್ ನನ್ನು ಜೊತೆಗೆ ಕರೆದೊಯ್ದಿದ್ದಾನೆ. ಮೇಲ್ನೋಟಕ್ಕೆ ಗ್ಯಾಂಗ್ ರೇಪ್ ಆಗಿದ್ದರೂ, ಎಷ್ಟು ಮಂದಿ ಕೃತ್ಯ ನಡೆಸಿದ್ದಾರೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇನ್ನೂ ಹಲವರು ಇದ್ದಾರೆಯೇ ಎನ್ನುವ ಮಾಹಿತಿಯೂ ಇಲ್ಲ. ಇದೇ ವೇಳೆ, ಬಂಧಿತ ಆರೋಪಿಗಳನ್ನು ಮೆಡಿಕಲ್ ಟೆಸ್ಟ್ ಮಾಡಿದ್ದು ಡ್ರಗ್ಸ್ ನೆಗೆಟಿವ್ ಬಂದಿದ್ದರೆ, ಯುವತಿ ಮಾತ್ರ ಪಾಸಿಟಿವ್ ಬಂದಿದ್ದಾಳೆ. ಇವರಿದ್ದ ಕಾರಿನಲ್ಲಿ ಎರಡು ಖಾಲಿಯಾದ ಬಿಯರ್ ಬಾಟಲಿ, ಅರ್ಧ ಕುಡಿದ ಫ್ಯಾಂಟಾ ಬಾಟಲಿ, ಎರಡು ಎಳನೀರು, ಒಂದು ಝಂಡು ಬಾಮ್ ಪತ್ತೆಯಾಗಿದೆ. ಹೀಗಾಗಿ ಫ್ಯಾಂಟಾದಲ್ಲಿಯೇ ಡ್ರಗ್ಸ್ ಬೆರೆಸಿ ನೀಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಭಯ್ ಪಾತ್ರ ಕೇವಲ ಡ್ರಗ್ಸ್ ಪೂರೈಕೆ ಮಾತ್ರವೇ, ಕೃತ್ಯದಲ್ಲಿ ಭಾಗಿಯಾಗಿದ್ದಾನೆಯೇ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.
Karkala gang rape case another accused arrested by Udupi police. The arrested has been identified as Richard Savera. Totally three have been arrested so far. Hindi girl was drugged kidnapped and raped in the car by Muslim youths.
15-01-25 06:37 pm
Mangaluru Correspondent
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
Keonics, Priyank Kharge; ದಯಾಮರಣಕ್ಕಾಗಿ ರಾಷ್ಟ್ರ...
15-01-25 12:19 pm
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm