ಬ್ರೇಕಿಂಗ್ ನ್ಯೂಸ್
31-08-24 10:26 pm HK News Desk ಕ್ರೈಂ
ಚಿಕ್ಕಬಳ್ಳಾಪುರ, ಆ 31: ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ ಗೃಹಿಣಿ ತನ್ನ ಗಂಡನ ಸಾವಿನ ನಂತರ ಸಿಕ್ಕ ಸಿಕ್ಕವರಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ಲಪಟಾಯಿಸಿದ್ದ ಬೆಂಗಳೂರಿನ ಮಹಿಳೆ ಈಗ ಸೈಬರ್ ಕ್ರೈಂ ಪೊಲೀಸರಿಗೆ ಬಲೆಗೆ ಸಿಕ್ಕಿಬಿದ್ದಿದ್ದಾಳೆ.
ಬೆಂಗಳೂರು ಮೂಲದ ಕೋಮಲಾ ಬಂಧಿತ ಮಹಿಳೆ. ಆಕೆಯ ಗಂಡ ಸತ್ತು 7 ವರ್ಷಗಳು ಕಳೆದಿವೆ. ವಿಲಾಸಿ ಮೋಜು-ಮಸ್ತಿಯ ಜೀವನಕ್ಕೆ ಒಗ್ಗಿಕೊಂಡಿದ್ದ ಈಕೆ ಪರ ಪುರುಷರ ಹಿಂದೆ ಬಿದ್ದು ಮದುವೆ ಆಮಿಷವೊಡ್ಡಿ ಹಣ ಪೀಕುವುದನ್ನೇ ವೃತ್ತಿ ಮಾಡಿಕೊಂಡಿದ್ದಳು. ಅಮಾಯಕ ಪುರುಷರನ್ನು ಬಲೆಗೆ ಬೀಳಿಸಲು ಆಕೆ ವಿಧವಿಧವಾದ ನಾಟಕ ಆಡುತ್ತಿದ್ದಳು. ಆಕೆಯ ಮರಳು ಮಾತನ್ನು ನಂಬಿದವರು ಲಕ್ಷಾಂತರ ರೂ. ಕೊಟ್ಟು ಈಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಕೋಮಲಾ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ರಾಘವೇಂದ್ರ ಎಂಬವರನ್ನು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದಳು. ತನ್ನ ಗಂಡ ಮೃತಪಟ್ಟಿದ್ದು, ಪರಿಹಾರವಾಗಿ ಬಂದಿರುವ 6 ಕೋಟಿ ರೂಪಾಯಿ ಹಣ ಪಡೆಯಲು ತೆರಿಗೆ ಕಟ್ಟಬೇಕು ಎಂದು ನಂಬಿಸಿ ತನ್ನಮ್ಮನ ಬ್ಯಾಂಕ್ ಖಾತೆಗೆ 7.40 ಲಕ್ಷ ರೂಪಾಯಿ ವರ್ಗಾಯಿಸಿ ಕೊಂಡಿದ್ದಳುಕೊಂಡಿದ್ದಳು. ಆನಂತರ ಫೋನ್ ನಂಬರ್ ಬ್ಲಾಕ್ ಮಾಡಿಕೊಂಡಿದ್ದಳು.
ಮೋಸ ಹೋಗಿರುವ ರಾಘವೇಂದ್ರ ಸೈಬರ್ ಪೊಲೀಸರಿಗೆ ದೂರು ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದರು. ದೂರಿನ ಹಿನ್ನೆಲೆಯಲ್ಲಿ ಆರೋಪಿ ಕೋಮಲಾಳನ್ನು ಬೆಂಗಳೂರಿನಲ್ಲಿ ಬಂಧಿಸಿ ಆಕೆ ಬಳಿಯಿದ್ದ ಆ್ಯಪಲ್ ಫೋನ್, ಆ್ಯಪಲ್ ವಾಚ್ ಹಾಗೂ 20,940 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.
ಗಂಡ ಸತ್ತ ಬಳಿಕ ಇದೇ ದಂಧೆ ;
ವಿಚಾರಣೆ ವೇಳೆ ಆಕೆಯ ಇನ್ನಷ್ಟು ವಂಚನೆ ಪುರಾಣವೂ ಹೊರಬಿದ್ದಿದೆ. ಗುಜರಾತ್‌ನಲ್ಲಿ ನೆಲೆಸಿರುವ ಕುಂದಾಪುರ ನಿವಾಸಿ ರಾಘವೇಂದ್ರ ಎಂಬುವರಿಗೂ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಜತೆಗೆ ಬೆಂಗಳೂರಿನ ನಾಗರಾಜು ಎಂಬುವರ ಬಳಿಯೂ ಒಂದೂವರೆ ಲಕ್ಷ ಪಡೆದು ಮೋಸ ಮಾಡಿದ್ದು, ಗಂಡ ಸತ್ತ ಬಳಿಕ ಮದುವೆ ವಿಷಯವನ್ನೇ ಹಣ ಮಾಡುವ ದಂಧೆಯಾಗಿ ಮಾಡಿಕೊಂಡಿದ್ದಳು.
ಆಕೆಯ ಮೃತ ಪತಿ ಕೆಪಿಟಿಸಿಲ್ ನೌಕರರಾಗಿದ್ದರು. 2017ರಲ್ಲಿ ಮೃತಪಟ್ಟರು. ಆರೋಪಿ ಕೋಮಲಾಳಿಗೆ 20 ವರ್ಷ ವಯಸ್ಸಿನ ಮಗ, 16 ವರ್ಷದ ಮಗಳು ಕೂಡಾ ಇದ್ದಾಳೆ. ಆದರೂ ಐಷಾರಾಮಿ ಜೀವನ ನಡೆಸಲು ಮದುವೆಯಾಗುವ ನಾಟಕ ಮಾಡಿ ಹಣ ಮಾಡುವ ದಂಧೆ ನಡೆಸುತ್ತಿದ್ದಳು.
Chikkaballapur women arrested for duping many in the name of marriage by Bangalore police. The arrested has been identified as Komala.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm