ಪೇಟಿಎಂ ಆನ್‌ಲೈನ್‌ ಖಾತೆಯಿಂದ ಹಣ ಎಗರಿಸಿದ ಪ್ರಕರಣ ; ಒಡಿಶಾ ಮೂಲದ ಆರೋಪಿಯನ್ನು ಬಂಧಿಸಿದ ಉಡುಪಿ ಪೊಲೀಸರು 

04-09-24 05:10 pm       Udupi Correspondent   ಕ್ರೈಂ

ಆನ್‌ಲೈನ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್‌ ಠಾಣೆಯ ಪೊಲೀಸರು ಆರೋಪಿ ಒಡಿಶಾ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. 

ಉಡುಪಿ, ಸೆ.4: ಆನ್‌ಲೈನ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್‌ ಠಾಣೆಯ ಪೊಲೀಸರು ಆರೋಪಿ ಒಡಿಶಾ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. 

ವಿಶಾಲ್‌ ಕೋನಪಾಲ(30)ನನ್ನು ಬಂಧಿತ ಆರೋಪಿಯಾಗಿದ್ದು ಆತನಿಂದ 1,56,100 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ವಿದೇಶದಲ್ಲಿ ಉದ್ಯೋಗಿಯಾಗಿರುವ ಉಡುಪಿ ಜಿಲ್ಲೆಯ ಬೆಳ್ಮಣ್‌ ನಿವಾಸಿ ಪ್ರಶಾಂತ್‌ ಶೆಟ್ಟಿ ಅವರು ಬೆಳ್ಮಣ್‌ನ ಯೂನಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಎರಡು ಖಾತೆಗಳನ್ನು ಹೊಂದಿದ್ದರು. ಈ ಎರಡೂ ಖಾತೆಗಳಲ್ಲಿ ಪೇಟಿಎಂ ಆನ್‌ಲೈನ್‌ ಪೇಮೆಂಟ್‌ ಸಿಸ್ಟಂ ಹೊಂದಿದ್ದು, ಫೆ.10 ರಿಂದ 20ರ ನಡುವೆ ಯಾರೋ ಅಪರಿಚಿತರು ಇವರ ಗಮನಕ್ಕೆ ಬಾರದೆ ಒಟ್ಟು 1,56,100 ರೂ.ಗಳನ್ನು ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿದ್ದರು. ಈ ಬಗ್ಗೆ ಉಡುಪಿಯ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೆನ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌ ಅವರ ನೇತೃತ್ವದಲ್ಲಿ ತನಿಖೆ ನಡೆಸಿದಾಗ, ಒಡಿಶಾ ಮೂಲದ ವ್ಯಕ್ತಿಯ ಕೈವಾಡ ಕಂಡುಬಂದಿತ್ತು. ಠಾಣೆಯ ಎಎಸ್‌ಐ ಉಮೇಶ್‌ ಜೋಗಿ ಮತ್ತು ಸಿಬಂದಿ ನಿಲೇಶ್‌ ಅವರ ತಂಡ ಒರಿಸ್ಸಾ ರಾಜ್ಯದ ಬೈರಂಪುರಕ್ಕೆ ತೆರಳಿ ಅಲ್ಲಿ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಆರೋಪಿಯನ್ನು ವಶಕ್ಕೆ ಪಡೆದು ಉಡುಪಿಗೆ ಕರೆತಂದಿದ್ದಾರೆ.

Paytm money fruaud in Udupi, Bihar guy arrested by Udupi police in bihar.