ಬ್ರೇಕಿಂಗ್ ನ್ಯೂಸ್
13-09-24 03:51 pm HK News Desk ಕ್ರೈಂ
ಪಾಟ್ನಾ, ಸೆ.13: ಕೊಲ್ಕತ್ತಾ ರೇಪ್ ಪ್ರಕರಣದ ಕಾವು ಮಾಸುವ ಮುನ್ನವೇ ಬಿಹಾರದಲ್ಲಿ ಮತ್ತೊಂದು ಆಸ್ಪತ್ರೆಯಲ್ಲಿ ನರ್ಸ್ ಒಬ್ಬರನ್ನು ವೈದ್ಯರು ಮತ್ತು ಇತರ ಇಬ್ಬರು ಸಿಬಂದಿ ಸೇರಿ ಗ್ಯಾಂಗ್ ರೇಪ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಘಟನೆ ಸಂದರ್ಭದಲ್ಲಿ ಪ್ರತಿರೋಧ ತೋರಿದ ನರ್ಸ್, ಅತ್ಯಾಚಾರಕ್ಕೆ ಬಂದ ವೈದ್ಯನ ಮರ್ಮಾಂಗವನ್ನೇ ಬ್ಲೇಡ್ ನಲ್ಲಿ ಕತ್ತರಿಸಿ ಕೃತ್ಯದಿಂದ ಪಾರಾಗಿದ್ದಾಳೆ.
ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ವೈದ್ಯ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಾ.ಸಂಜಯ್ ಕುಮಾರ್, ಅವಧೇಶ್ ಕುಮಾರ್ ಮತ್ತು ಸುನಿಲ್ ಕುಮಾರ್ ಗುಪ್ತಾ ಬಂಧಿತರು. ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಹಿಂತಿರುಗಲು ತಯಾರಿ ನಡೆಸುತ್ತಿದ್ದ ನರ್ಸ್ ಯುವತಿಯ ಅತ್ಯಾಚಾರಕ್ಕೆ ಡಾ.ಸಂಜಯ್ ಕುಮಾರ್ ಯತ್ನಿಸಿದ್ದಾನೆ. ಆತನಿಗೆ ಇನ್ನಿಬ್ಬರು ಸಿಬಂದಿಗಳಾದ ಅವಧೇಶ್ ಮತ್ತು ಸುನಿಲ್ ಕುಮಾರ್ ಸಹಕರಿಸಿದ್ದಾರೆ. ಮೂವರೊಳಗೆ ಜಟಾಪಟಿ ನಡೆಯುತ್ತಿದ್ದಾಗಲೇ ನರ್ಸ್ ಕೈಗೆ ಸಿಕ್ಕ ಬ್ಲೇಡ್ ನಿಂದ ಸಂಜಯ್ ಕುಮಾರ್ ಶಿಶ್ನವನ್ನು ಕತ್ತರಿಸಿದ್ದಾಳೆ. ಆನಂತರ, ಅವರ ಕೈಯಿಂದ ಪಾರಾಗಿ ಬಂದು ಪೊಲೀಸರಿಗೆ ಫೋನ್ ಮಾಡಿದ್ದಾಳೆ. ಕೂಡಲೇ ಪೊಲೀಸರು ಬಂದು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ಕುಡಿದ ಮತ್ತಿನಲ್ಲಿ ಕೃತ್ಯಕ್ಕೆ ಯತ್ನಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಆಸ್ಪತ್ರೆ ಒಳಗಿನ ಸಿಸಿಟಿವಿ ಸಂಪರ್ಕವನ್ನು ಕಟ್ ಮಾಡಿದ್ದು, ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ಆದರೆ, ನರ್ಸ್ ಪ್ರತಿರೋಧ ತೋರುತ್ತಲೇ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿದ್ದು ಕೃತ್ಯದಿಂದ ಪಾರಾಗುವಂತಾಗಿದೆ. ಸ್ಥಳದಿಂದ ಮರ್ಮಾಂಗ ಕತ್ತರಿಸಿದ ಬ್ಲೇಡ್, ಒಂದು ಮದ್ಯದ ಬಾಟಲಿ, ರಕ್ತಸಿಕ್ತ ಬಟ್ಟೆಗಳು ಮತ್ತು ಮೂರು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಆಸ್ಪತ್ರೆ ಸಿಬಂದಿಯೇ ಕೃತ್ಯ ನಡೆಸಿದ್ದು, ಆನಂತರ ಘಟನೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು.
A gang-rape attempt was made on a nurse at a private hospital in Bihar, said the police on Thursday, adding that she escaped the crime scene after inflicting a cut on the private parts of an assaulter with a blade. It comes one month after a trainee doctor was raped and murdered at RG Kar Medical College and Hospital in Kolkata, triggering nationwide protest and indefinite strike of junior doctors in West Bengal.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
24-01-26 02:13 pm
HK News Staffer
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm