Mangalore cyber fraud, stock market: ಯೂಟ್ಯೂಬ್ ನೋಡಿ ಷೇರು ಮಾರ್ಕೆಟ್ ಮೇಲೆ ಹೂಡಿಕೆ ; ಬರೋಬ್ಬರಿ 77 ಲಕ್ಷ ಕಳಕೊಂಡ ಮಂಗಳೂರಿನ ವ್ಯಕ್ತಿ

22-09-24 08:25 pm       Mangalore Correspondent   ಕ್ರೈಂ

ಯೂಟ್ಯೂಬ್ ನೋಡಿ ಆದಿತ್ಯ ಬಿರ್ಲಾ ಮನಿ ಹೆಸರಲ್ಲಿ ಷೇರ್ ಮಾರ್ಕೆಟ್ ಮೇಲೆ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ 77 ಲಕ್ಷ ರೂಪಾಯಿ ಕಳಕೊಂಡಿದ್ದು, ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು, ಸೆ.22: ಯೂಟ್ಯೂಬ್ ನೋಡಿ ಆದಿತ್ಯ ಬಿರ್ಲಾ ಮನಿ ಹೆಸರಲ್ಲಿ ಷೇರ್ ಮಾರ್ಕೆಟ್ ಮೇಲೆ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ 77 ಲಕ್ಷ ರೂಪಾಯಿ ಕಳಕೊಂಡಿದ್ದು, ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಮುಖ ವಾಣಿಜ್ಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ನಿವೃತ್ತಿಯಾಗಿರುವ ಈ ವ್ಯಕ್ತಿ ಮೊಬೈಲಿನಲ್ಲಿ ಯೂಟ್ಯೂಬ್ ನೋಡುತ್ತಿದ್ದಾಗ ಷೇರು ಮಾರ್ಕೆಟ್ ಹೂಡಿಕೆ ಬಗ್ಗೆ ತಿಳಿದುಬಂದಿತ್ತು. ಅದರಲ್ಲಿ ಬಂದ ಸಲಹೆಯಂತೆ ಆದಿತ್ಯ ಬಿರ್ಲಾ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದರು. ಆನಂತರ, ಷೇರು ಮಾರ್ಕೆಟ್ ಸಲಹೆ ನೀಡುವ ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿದ್ದರು.

ಉತ್ತರ ಭಾರತ ಮೂಲದ ವ್ಯಕ್ತಿ ವಾಟ್ಸಪ್ ನಲ್ಲಿ ಷೇರು ಮಾರುಕಟ್ಟೆ ಬಗ್ಗೆ ಸಲಹೆ ನೀಡುತ್ತಿದ್ದ. ರಾಹುಲ್ ಮಿತ್ತಲ್ ಎಂಬ ವ್ಯಕ್ತಿಯ ಸಲಹೆಯಂತೆ ಮಂಗಳೂರಿನ ವ್ಯಕ್ತಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಷೇರು ಮಾರ್ಕೆಟ್ ಮೇಲೆ ಹೂಡಿಕೆ ಮಾಡಿದ್ದರು. ವಿವಿಧ ಖಾತೆಗಳಿಗೆ ಯುಪಿಐ, ಆರ್ಟಿಜಿಎಸ್ ಮೂಲಕ ಹಣ ಹೂಡಿಕೆ ಮಾಡಿದ್ದು ಒಟ್ಟು 77 ಲಕ್ಷ ರೂಪಾಯಿ ಹಣ ರವಾನಿಸಿದ್ದಾರೆ. ಕೊನೆಗೆ, ತನ್ನ ಹಣವನ್ನು ಹಿಂತಿರುಗಿ ಪಡೆಯಲು ಯತ್ನಿಸಿದಾಗ, ಸಾಧ್ಯವಾಗಲಿಲ್ಲ. ಇದರಿಂದ ತಾನು ವಂಚನೆ ಹೋಗಿರುವುದು ವ್ಯಕ್ತಿಗೆ ಅರಿವಿಗೆ ಬಂದಿದ್ದು, ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Man looses Rs 77 lakhs in stock market after watching YouTube video in Mangalore. A case has been registered at the cyber crime police station