ಬ್ರೇಕಿಂಗ್ ನ್ಯೂಸ್
27-09-24 12:34 pm Bangalore Correspondent ಕ್ರೈಂ
ಬೆಂಗಳೂರು, ಸೆ 27: ಮದುವೆ ಹಾಗೂ ಮಗು ಇರುವ ವಿಚಾರವನ್ನು ಮರೆ ಮಾಚಿರುವುದು ಹಾಗೂ ಪರ ಪುರುಷರ ಜತೆ ಹೆಚ್ಚು ಆತ್ಮೀಯವಾಗಿ ಇರುವುದಕ್ಕೆ ಕೋಪಗೊಂಡಿರುವ ಮಹಾಲಕ್ಷ್ಮೀ ಪ್ರಿಯಕರ ಆಕೆಯನ್ನು ಹತೈಗೈದು, ಬಳಿಕ 59 ಪೀಸ್‌ಗಳನ್ನು ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಮುಕ್ತಿರಂಜನ್ ಪ್ರತಾಪ್ ರಾಯ್ ಹಾಗೂ ಮಹಾಲಕ್ಷ್ಮೀ ಐದಾರು ತಿಂಗಳಿಂದ ಒಂದೆಡೆ ಕೆಲಸ ಮಾಡುತ್ತಿದ್ದರಿಂದ, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮಹಾಲಕ್ಷ್ಮೀ, ತನಗೆ ಮದುವೆಯಾಗಿ, ಮಗು ಇರುವ ವಿಚಾರವನ್ನು ಪ್ರಿಯಕರ ಮುಕ್ತಿರಂಜನ್ ರಾಯ್ ಬಳಿ ಹೇಳಿಕೊಂಡಿರಲಿಲ್ಲ. ಜತೆಗೆ ಈಕೆ ಇತರೆ ಯುವಕರ ಜತೆ ಹೆಚ್ಚು ಆತ್ಮೀಯವಾಗಿದ್ದಳು. ಅಲ್ಲದೆ, ಮಹಾಲಕ್ಷ್ಮೀ ಬೇಗನೆ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದಳು. ಆದರೆ, ಈ ಮಧ್ಯೆ, ಮುಕ್ತಿರಂಜನ್ ರಾಯ್ ಗೆ ಪ್ರೇಯಸಿ ಮಹಾಲಕ್ಷ್ಮೀಗೆ ಮದುವೆ ಆಗಿರುವ ವಿಚಾರ ತಿಳಿದು ಪ್ರಶ್ನಿಸಿದ್ದಾರೆ. ಆಕೆ ಸರಿಯಾಗಿ ಉತ್ತರ ನೀಡಿಲ್ಲ. ಸೆ.3ರಂದು ಆಕೆಯ ಮನೆಗೆ ಬಂದಾಗ ಅದೇ ವಿಚಾರ ಪ್ರಸ್ತಾಪಿಸಿ ಗಲಾಟೆ ಮಾಡಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ಕೋಪಗೊಂಡು ಆಕೆಯನ್ನು ಚಾಕುವಿನಿಂದ ಇರಿದು ಕೊಂದು ಆಕ್ಸೈಡ್ ಬ್ಲೇಡ್‌ನಿಂದ ಆಕೆಯ ದೇಹವನ್ನು 59 ಪೀಸ್‌ಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿ ಇರಿಸಿದ್ದ. ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಟಾಯ್ಲೆಟ್ ಕ್ಲಿನರ್‌ನಿಂದ ಸ್ವಚ್ಛಗೊಳಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಇನ್ನು ಒಡಿಶಾದಲ್ಲಿರುವ ರಾಜ್ಯ ಪೊಲೀಸರು, ಮೃತನ ರಕ್ತದ ಮಾದರಿ ಹಾಗೂ ಬೆರಳಚ್ಚು ಪಡೆಯಲಿದ್ದಾರೆ. ಇನ್ನು ಅಬೈಟೆಡ್ ಚಾರ್ಜ್‌ಶೀಟ್ ಸಲ್ಲಿಕೆಗೂ ಮೊದಲು ಪ್ರಕರಣ ಸಂಬಂಧ ಎಲ್ಲಾ ರೀತಿಯ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಬೇಕಿದೆ. ಆರೋಪಿ ಮೊಬೈಲ್ ವಶಕ್ಕೆ ಪಡೆದು ಎಫ್ಎಸ್‌ಎಲ್‌ಗೆ ರವಾನಿಸಬೇಕಿದೆ. ಅಲ್ಲದೇ ಕೃತ್ಯದ ಸ್ಥಳದಲ್ಲಿ ಪತ್ತೆಯಾದ ರಕ್ತದ ಮಾದರಿಯನ್ನು ಲುಮಿನಾರ್ ಟೆಸ್ಟ್‌ಗೆ ಕಳುಹಿಸಲಿದ್ದಾರೆ. ಆರೋಪಿ ಸಹೋದರನ 164 ಹೇಳಿಕೆ ಹಾಗೂ ಸಾಂದರ್ಭಿಕ ಸಾಕ್ಷ್ಯಗಳ ಹೇಳಿಕೆ ಎಲ್ಲವನ್ನು ಅಬೈಟೆಡ್ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗುತ್ತದೆ. ಕೃತ್ಯದ ನಂತರ ಮೃತದೇಹ ತುಂಡರಿಸಿ ಪರಾರಿಯಾಗುವ ವೇಳೆ ಯಾರಾದರೂ ಆರೋಪಿಗೆ ಸಹಕರಿಸಿರುವುದು ಕಂಡುಬಂದರೆ ಅವರನ್ನು ಬಂಧಿಸಲಾಗುವುದು
Bangalore Murder, Mahalakshmi killed for hiding her marrige and child, cut her into 59 pieces. Mahalakshmi, a 29-year-old salesperson at a clothing factory, was murdered and her body was cut into 59 pieces , allegedly with a sharp cleaver knife, by her lover Mukti Ranjan Ray, who escaped from Bengaluru, days after committing the gruesome crime.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm