ಬ್ರೇಕಿಂಗ್ ನ್ಯೂಸ್
01-10-24 01:50 pm Mangalore Correspondent ಕ್ರೈಂ
ಮಂಗಳೂರು, ಅ.1: ಮಂಗಳೂರು ಏರ್ಪೋರ್ಟ್ ಭದ್ರತಾ ಸಿಬಂದಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬಜ್ಪೆಯ ಕೇಕ್ ಶಾಪ್ ಒಂದಕ್ಕೆ ಕರೆ ಮಾಡಿ, ನಾಲ್ಕು ಕೇಜಿ ಕೇಕ್ ಆರ್ಡರ್ ಮಾಡಿದ್ದಲ್ಲದೆ, ಗೂಗಲ್ ಪೇಯಲ್ಲಿ ಹೆಚ್ಚುವರಿ ಹಣ ಕಳುಹಿಸಿದ್ದಾಗಿ ಹೇಳಿ ಶಾಪ್ ಮಾಲಕರನ್ನೇ ಯಾಮಾರಿಸಲು ಯತ್ನಿಸಿದ ಘಟನೆ ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣದ ಭದ್ರತೆ ನೋಡಿಕೊಳ್ಳುವ ಸಿಐಎಸ್ಎಫ್ ಸಿಬಂದಿಯೆಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಕೇಕ್ ಶಾಪ್ ಮಾಲಕರಿಗೆ ಕರೆ ಮಾಡಿ, ನಾಲ್ಕು ಕೇಜಿ ಕೇಕ್ ಬೇಕಾಗಿದೆ, ಎಷ್ಟು ಹಣ ಬೇಕಾಗುತ್ತದೆ ಎಂದು ಕೇಳಿದ್ದಾನೆ. 2800 ರೂ. ಆಗುತ್ತದೆ ಎಂದು ಕೇಕ್ ಶಾಪ್ ಕಡೆಯಿಂದ ಹೇಳಿದಾಗ, ಹಣವನ್ನು ಗೂಗಲ್ ಪೇ ಮೂಲಕ ಕಳಿಸುತ್ತೇನೆ. ಗೂಗಲ್ ಪೇ ನಂಬರ್ ಕೊಡಿ, ಕೇಕ್ ಪಾರ್ಸಲ್ ತರಲು ಹುಡುಗನನ್ನು ಕಳಿಸಿಕೊಡುತ್ತೇನೆ ಎಂದು ಹೇಳಿದ್ದಾನೆ. ಕೇಕ್ ಶಾಪ್ ಮಾಲಕರು ತನ್ನ ಪತ್ನಿಯ ಗೂಗಲ್ ಪೇ ನಂಬರನ್ನು ಕೊಟ್ಟು ಹಣ ಕಳಿಸುವಂತೆ ತಿಳಿಸಿದ್ದಾರೆ.
ಸ್ವಲ್ಪ ಹೊತ್ತಿನಲ್ಲಿ ಪತ್ನಿಯ ಮೊಬೈಲಿಗೆ 28 ಸಾವಿರ ರೂ. ಹಣ ಬಂದಿದ್ದಾಗಿ ಮೆಸೇಜ್ ಬಂದಿತ್ತು. ಇದರ ಬೆನ್ನಲ್ಲೇ ಅಪರಿಚಿತ ವ್ಯಕ್ತಿ ಕರೆ ಮಾಡಿ, 2800 ಬದಲಿಗೆ ತಪ್ಪಾಗಿ 28 ಸಾವಿರ ರೂ. ಹಾಕಿದ್ದಾಗಿ ತಿಳಿಸಿದ್ದು, ಉಳಿಕೆ ಹಣವನ್ನು ಪಾವತಿಸುವಂತೆ ಕೇಕ್ ಶಾಪ್ ಮಾಲಕರಿಗೆ ಕೇಳಿಕೊಂಡಿದ್ದ. ಪತ್ನಿಯಲ್ಲಿ ಕೇಳಿದರೆ, ಮೆಸೇಜ್ ಬಂದಿದೆ. ಆದರೆ ಹಣ ಕ್ರೆಡಿಟ್ ಆಗಿಲ್ಲ ಎಂದು ತಿಳಿಸಿದ್ದಾರೆ. ಚೆಕ್ ಮಾಡಿದಾಗ, ಅಪರಿಚಿತ ವ್ಯಕ್ತಿಯ ನಂಬರಿನಿಂದ ನೇರವಾಗಿ ಮೆಸೇಜ್ ಬಂದಿತ್ತು. ಬ್ಯಾಂಕಿನಿಂದ ಬಂದ ಮೆಸೇಜ್ ಅಲ್ಲ ಎಂದು ಪತ್ನಿ ಹೇಳಿದ್ದರು. ಕೇಕ್ ಶಾಪ್ ಮಾಲಕರು ಅಪರಿಚಿತ ವ್ಯಕ್ತಿ ಮತ್ತು ಪತ್ನಿಯ ಜೊತೆಗೆ ಕಾನ್ಫರೆನ್ಸ್ ಕರೆ ಮಾಡಿ, ಹಣದ ಬಗ್ಗೆ ಸ್ಪಷ್ಟನೆ ಕೇಳಿದರೂ ಆತ ಒಪ್ಪಲಿಲ್ಲ. ನನ್ನ ಮೆಡಿಸಿನ್ ಗೆ ಬೇಕಾಗಿದ್ದ ಹಣ. ದಯವಿಟ್ಟು ಉಳಿಕೆ ಹಣವನ್ನು ಹಿಂತಿರುಗಿಸುವಂತೆ ಅಪರಿಚಿತ ಕೇಳಿಕೊಂಡಿದ್ದಾನೆ.
ಇದರಿಂದ ವಿಚಲಿತರಾದ ಕೇಕ್ ಶಾಪ್ ಮಾಲಕರು, ಮೊಬೈಲಿಗೆ ನೇರವಾಗಿ ಮೆಸೇಜ್ ಮಾಡಿದ್ದನ್ನು ಪ್ರಸ್ತಾಪಿಸಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಏರ್ಪೋರ್ಟ್ ಸಿಬಂದಿಯಾದರೆ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ, ಅಷ್ಟರಲ್ಲಿ ಕರೆ ಕಟ್ ಮಾಡಿದ್ದಾನೆ. ಏರ್ಪೋರ್ಟ್ ಸಿಬಂದಿಯೆಂದು ಹೇಳಿ ಅಪರಿಚಿತರು ಕರೆ ಮಾಡಿ ಹಣ ಎಗರಿಸಲು ಮಾಡಿದ ಪ್ಲಾನ್ ಇದಾಗಿದ್ದು, ಅಂಗಡಿ ಮಾಲಕರನ್ನು ವಂಚಿಸಲೆತ್ನಿಸಿರುವುದು ಕಂಡುಬಂದಿದೆ. ಆನ್ಲೈನ್ ವಂಚಕರು ಹೆಚ್ಚುವರಿ ಹಣ ಕಳಿಸಿದ್ದಾಗಿ ಹೇಳಿ ಹೊಸ ರೀತಿಯ ವಂಚನಾ ಜಾಲದಲ್ಲಿ ತೊಡಗಿದ್ದು ಹಣದ ವಹಿವಾಟು ಹೆಚ್ಚು ಮಾಡುವ ಅಂಗಡಿ, ವ್ಯಾಪಾರಸ್ಥರನ್ನೇ ಟಾರ್ಗೆಟ್ ಮಾಡಿರುವಂತಿದೆ. ಕರಾವಳಿಯಲ್ಲಿ ಹಲವರಿಗೆ ಇದೇ ರೀತಿ ಹಣ ಕಳಿಸಿದ್ದಾಗಿ ಯಾಮಾರಿಸುವ ಪ್ರಕರಣ ನಡೆದಿದ್ದು ಸಣ್ಣ ಮೊತ್ತ ಕಳಕೊಂಡವರು ಪೊಲೀಸ್ ದೂರು ಕೊಡಲು ಮುಂದೆ ಬರುತ್ತಿಲ್ಲ. ತಪ್ಪಾಗಿ ಹಣ ಕಳಿಸಿದ್ದೇನೆ ಎಂದು ಮೆಸೇಜ್ ಹಾಕಿ, ಹಣ ಹಿಂತಿರುಗಿಸುವಂತೆ ಹೇಳಿ ಜನಸಾಮಾನ್ಯರನ್ನು ಯಾಮಾರಿಸುತ್ತಿದ್ದಾರೆ.
Mangalore Fraud in the name of Cisf staff through cake order. Fraudsters are scamming people in the name of online transaction.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
24-01-26 02:13 pm
HK News Staffer
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm