ಬ್ರೇಕಿಂಗ್ ನ್ಯೂಸ್
02-10-24 04:03 pm HK News Desk ಕ್ರೈಂ
ನವದೆಹಲಿ, ಅ.2: ವರ್ಧಮಾನ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೇರ್ಮನ್ ಆಗಿರುವ 82 ವರ್ಷದ ಎಸ್.ಪಿ. ಓಸ್ವಾಲ್ ಅವರನ್ನು ಸೈಬರ್ ಕಳ್ಳರ ಗ್ಯಾಂಗೊಂದು ತಾವು ಸಿಬಿಐ ಅಧಿಕಾರಿಗಳು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿವೈ ಚಂದ್ರಚೂಡ್ ಅವರ ಹೆಸರಲ್ಲಿ ಹೆದರಿಸಿ ಏಳು ಕೋಟಿ ರೂಪಾಯಿ ಸುಲಿಗೆ ಮಾಡಿರುವ ಘಟನೆ ನಡೆದಿದೆ.
ಗ್ಯಾಂಗ್ ಸದಸ್ಯರು ನಕಲಿ ದಾಖಲೆಗಳನ್ನು ಮುಂದಿರಿಸಿ, ಕೋರ್ಟ್ ಕೊಠಡಿಯಂತೆ ತೋರಿಸಿ ಓಸ್ವಾಲ್ ಅವರನ್ನು ಎರಡು ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿಟ್ಟು ಹಣ ಸುಲಿಗೆ ಮಾಡಿದ್ದಾರೆ. ದೇಶದಲ್ಲಿ ಅತ್ಯಂತ ಮಹತ್ವದ್ದು ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಸಿರುವ ಸ್ಕ್ಯಾಮ್ ಇದಾಗಿದ್ದು, ಕೈಗಾರಿಕೋದ್ಯಮಿಯನ್ನೇ ಯಾಮಾರಿಸಿ ಏಳು ಕೋಟಿ ಪೀಕಿಸಿದ್ದು ಇದೇ ಮೊದಲ ಬಾರಿ. ವಿಷಯ ತಿಳಿಯುತ್ತಲೇ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿದ್ದು, ಸುಮಾರು ಐದು ಕೋಟಿಯಷ್ಟು ಹಣವನ್ನು ಅವರಿಂದ ಜಪ್ತಿ ಮಾಡಿದ್ದಾರೆ.
ಆಗಸ್ಟ್ 28 ಮತ್ತು 29ರಂದು ಓಸ್ವಾಲ್ ಅವರನ್ನು ಬಂಧಿಸಿಟ್ಟು ಈ ಕೃತ್ಯ ಎಸಗಲಾಗಿದ್ದು, ಆರೋಪಿಗಳು ತಿಳಿಸಿದ ವಿವಿಧ ಖಾತೆಗಳಿಗೆ ಏಳು ಕೋಟಿ ಹಣವನ್ನು ಜಮಾ ಮಾಡಿದ್ದಾರೆ. ಓಸ್ವಾಲ್ ಈ ಹಿಂದೆ ಜೆಟ್ ಏರ್ವೇಸ್ ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಜೊತೆಗೆ ಹಣಕಾಸು ವ್ಯವಹಾರದಲ್ಲಿದ್ದರು. ಸಿಬಿಐ ಅಧಿಕಾರಿಗಳು ಅದೇ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾರೆಂದು ಓಸ್ವಾಲ್ ನಂಬಿಕೊಂಡು ಸ್ವಯಂ ಆಗಿಯೇ ತನ್ನ ಮನೆಯಿಂದಲೇ ಬಂಧನಕ್ಕೊಳಗಾಗಿದ್ದರು. ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡಿದ್ದ ಆರೋಪಿಗಳು, ಓಸ್ವಾಲ್ ಅವರಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಹಲವು ಖಾತೆಗಳಿದ್ದು, ಹಣಕಾಸು ನೀತಿಯನ್ನು ಉಲ್ಲಂಘನೆ ಮಾಡಿದ್ದೀರಿ, ನರೇಶ್ ಗೋಯಲ್ ಜೊತೆಗೆ ಹಗರಣದಲ್ಲಿ ನಿಮ್ಮ ಪಾತ್ರವೂ ಇದೆ, ನಿಮ್ಮ ಖಾತೆಗೂ ಗೋಯಲ್ ಖಾತೆಗೂ ಲಿಂಕ್ ಇದೆಯೆಂದು ಹೇಳಿದ್ದು, ನಾವು ತನಿಖೆ ಮಾಡಿ ರಿಪೋರ್ಟ್ ಮಾಡಿದರೆ ನಿಮ್ಮ ಹೆಸರೂ ಹಗರಣದಲ್ಲಿ ಬರುತ್ತದೆ ಎಂದು ಹೆದರಿಸಿದ್ದಾರೆ.
ವಿಶೇಷ ಅಂದ್ರೆ, ಇವರ ಮೋಸಕ್ಕೆ ಸಿಜೆಐ ಡಿವೈ ಚಂದ್ರಚೂಡ್ ಅವರ ಹೆಸರನ್ನೂ ಬಳಸಿಕೊಂಡಿದ್ದಾರೆ. ಕೋರ್ಟ್ ಕಲಾಪ ನಡೆಸುತ್ತಿದ್ದಾರೆಂದು ತೋರಿಸಿದ್ದಲ್ಲದೆ, ಈ ಪ್ರರಣದಲ್ಲಿ ನಿಮ್ಮನ್ನು ವಿಚಾರಣೆ ಮಾಡಲಿದ್ದಾರೆ ಎಂದು ನಕಲಿ ಕೋರ್ಟ್ ರೂಮ್ ತೋರಿಸಿ ನಂಬಿಸಿದ್ದಾರೆ. ವಿಡಿಯೋ ಕರೆಯಲ್ಲಿ ನಕಲಿ ಕೋರ್ಟ್ ರೂಮ್ ತೋರಿಸಿದ್ದಲ್ಲದೆ, ನಿಮ್ಮ ಮತ್ತು ಗೋಯಲ್ ವಿರುದ್ಧ ಬಂದಿರುವ ಕೋರ್ಟ್ ತೀರ್ಪು ಎಂದು ನಕಲಿ ಪ್ರತಿಯನ್ನು ತೋರಿಸಿದ್ದಾರೆ. ಅಲ್ಲದೆ, ಅದೇ ಕಾಪಿಯನ್ನು ಆನಂತರ ಇವರ ವಾಟ್ಸಪ್ ನಂಬರಿಗೂ ಕಳಿಸಿಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ದಂಡದ ರೂಪದಲ್ಲಿ ಏಳು ಕೋಟಿ ನೀಡುವಂತೆ ಹೇಳಿದ್ದರು.
ಇಡಿ ಅಧಿಕಾರಿಗಳು ಅರೆಸ್ಟ್ ವಾರೆಂಟ್ ನೀಡಿರುವುದನ್ನೂ ತೋರಿಸಿದ್ದು ಇಡಿ ಮತ್ತು ಮುಂಬೈ ಪೊಲೀಸರ ದಾಖಲೆಯನ್ನೂ ತೋರಿಸಿದ್ದಾರೆ. ನಕಲಿ ವಾರೆಂಟ್ ಕಾಪಿಯಲ್ಲಿ ಇಡಿ ಅಧಿಕಾರಿ ನೀರಜ್ ಕುಮಾರ್ ಸಹಿ ಹಾಕಿರುವುದೂ ಇತ್ತು. ಇದಕ್ಕೂ ಮೊದಲೇ ಓಸ್ವಾಲ್ ಪ್ರಕರಣದಲ್ಲಿ ಮುಂಬೈ ಇಡಿ ಅಧಿಕಾರಿಗಳು ತನಿಖೆ ನಡೆಸಿರುವುದರಿಂದ ವರ್ಧಮಾನ್ ಗ್ರೂಪ್ ಚೇರ್ಮನ್ ಇದನ್ನೆಲ್ಲ ಸತ್ಯವೆಂದೇ ನಂಬಿಕೊಂಡಿದ್ದರು. ಕೋರ್ಟ್ ತೀರ್ಪಿನಲ್ಲಿ ನೀಡುವ ರೀತಿಯಲ್ಲೇ ಡಿಜಿಟಲ್ ಸೈನ್ ಎಲ್ಲವನ್ನೂ ತೋರಿಸಿದ್ದರಿಂದ ಓಸ್ವಾಲ್ ಸತ್ಯವೆಂದೇ ನಂಬಿದ್ದರು.
ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಹೆದರಿಸಿದ್ದರು
ಡಿಜಿಟಲ್ ಅರೆಸ್ಟ್ ಅನ್ನುವ ಪರಿಕಲ್ಪನೆಯೇ ಇಲ್ಲದಿದ್ದರೂ, ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡಿದ್ದ ಖದೀಮರು ಉದ್ಯಮಿಯನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದಾಗಿ ನಂಬಿಸಿದ್ದಾರೆ. ನಮ್ಮ ತನಿಖೆ ಮುಗಿಯೋ ವರೆಗೂ ಬೇರೆಲ್ಲಿಗೂ ಹೋಗಬಾರದು, ಇದ್ದಲ್ಲಿಯೇ ಕೂರಬೇಕು, ಯಾರಿಗೂ ವಿಷಯ ಹೇಳಬಾರದು ಎಂದು ಸೂಚನೆ ನೀಡಿದ್ದರು. ತಪ್ಪಿದರೆ ನ್ಯಾಶನಲ್ ಸೀಕ್ರೆಟ್ ಆಕ್ಟ್ ಪ್ರಕಾರ, ನಿಮ್ಮನ್ನು ಜೈಲಿಗೆ ಹಾಕುತ್ತೇವೆ ಎಂದು ಹೆದರಿಸಿದ್ದರು. 24 ಗಂಟೆ ಬೇರೆಲ್ಲಿಗೂ ಹೋಗಬಾರದು, ಅತ್ತಿತ್ತ ಹೋದರೂ ನಿಮ್ಮನ್ನು ನಾವು ಮಾನಿಟರ್ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಓಸ್ವಾಲ್ ಅವರ ಒಟ್ಟು ವಹಿವಾಟು, ಎಲ್ಲೆಲ್ಲಿ ಹೂಡಿಕೆ ಇದೆ ಇತ್ಯಾದಿ ಮಾಹಿತಿಗಳನ್ನು ಅವರು ಕೇಳಿ ಪಡೆದಿದ್ದರು.
ನೈಜ ಅಧಿಕಾರಿಗಳೇ ತನ್ನನ್ನು ತನಿಖೆ ಮಾಡುತ್ತಿದ್ದಾರೆ, ಪ್ರಕರಣದಲ್ಲಿ ರಕ್ಷಣೆ ಮಾಡುತ್ತಿದ್ದಾರೆ ಎಂದು 82 ವರ್ಷದ ಓಸ್ವಾಲ್ ನಂಬಿದ್ದರು. ಕೋರ್ಟ್ ತೀರ್ಪು, ಇನ್ನಿತರ ದಾಖಲೆ ಪತ್ರಗಳನ್ನು ಆಧರಿಸಿ ಏಳು ಕೋಟಿ ರೂ. ಹಣ ರವಾನೆ ಮಾಡಿದ್ದರು. ಆದರೆ ಆಗಸ್ಟ್ 31ರಂದು ಸಂಶಯ ಬಂದು ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಕ್ರೈಮ್ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ನೆರವು ಪಡೆದು ಮೂರು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ. ಇದರಿಂದಾಗಿ 5.25 ಕೋಟಿ ಹಣ ಅಲ್ಲಿಂದ ಬೇರೆ ಕಡೆ ರವಾನೆ ಆಗುವುದನ್ನು ತಪ್ಪಿಸಿದ್ದಾರೆ.
ಅಸ್ಸಾಂನಲ್ಲಿ ಇಬ್ಬರ ಬಂಧನ
ಪ್ರಕರಣ ಸಂಬಂಧಿಸಿ ಮುಂಬೈ ಪೊಲೀಸರು ಅಸ್ಸಾಂನಲ್ಲಿ ಅತ್ತನು ಕುಮಾರ್ ಮತ್ತು ಆನಂದ್ ಕುಮಾರ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಆನಂದ್ ಕುಮಾರ್ ಗುವಾಹಟಿಯಲ್ಲಿ ಸಣ್ಣ ವ್ಯಾಪಾರಿಯಾಗಿದ್ದು, ದಿಢೀರ್ ಹಣ ಸಿಗುವ ಕಮಿಷನ್ ಆಸೆಯಿಂದ ತನ್ನ ಖಾತೆಯಲ್ಲಿ ವ್ಯವಹಾರ ಮಾಡುವುದಕ್ಕೆ ಒಪ್ಪಿಗೆ ನೀಡಿದ್ದ. ಗೇಮಿಂಗ್ ಪ್ರೈಜ್ ಫಂಡ್ ಹೆಸರಲ್ಲಿ ನಿನ್ನ ಖಾತೆಗೆ 9 ಕೋಟಿ ಹಣ ಹಾಕಲಾಗುವುದು, ಅದರಲ್ಲಿ ಎರಡು ಕೋಟಿಯನ್ನು ನಿನಗೆ ಕಮಿಷನ್ ನೀಡಲಾಗುವುದು ಎಂದು ತಂಡವೊಂದು ನಂಬಿಸಿತ್ತು. ಈತನ ಖಾತೆಗೆ ಹಣ ಸಂದಾಯ ಆಗಿರುವುದನ್ನು ಪತ್ತೆ ಮಾಡಿದ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಅಂತಾರಾಜ್ಯ ಸೈಬರ್ ಜಾಲ ಇರುವುದನ್ನು ಕಂಡುಕೊಳ್ಳಲಾಗಿದ್ದು, ಮಾಜಿ ಬ್ಯಾಂಕ್ ಅಧಿಕಾರಿಯಾಗಿರುವ ರೂಮಿ ಖಾಲಿಟಾ ಎನ್ನುವ ವ್ಯಕ್ತಿ ಈ ಜಾಲದ ಸೂತ್ರಧಾರ ಎನ್ನಲಾಗುತ್ತಿದೆ. ಈತನ ಜೊತೆಗೆ ನಿಮ್ಮಿ ಭಟ್ಟಾಚಾರ್ಯ, ಅಲೋಕ್ ರಂಗಿ, ಗುಲಾಮ್ ಮುರ್ತಾಜ, ಝಾಕೀರ್ ಎಂಬವರು ಸೇರಿದಂತೆ ಅನೇಕರು ಇದ್ದಾರೆ ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.
SP Oswal, the 82-year-old chairman and managing director of Vardhman Group, a leading textile manufacturer, was defrauded of Rs 7 crore by a gang posing as officials from various government agencies, including the Chief Justice of India (CJI), DY Chandrachud.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm