ಬ್ರೇಕಿಂಗ್ ನ್ಯೂಸ್
05-10-24 08:26 pm Mangalore Correspondent ಕ್ರೈಂ
ಮಂಗಳೂರು, ಅ.5: ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ವಿರೋಧಿಸಿ ಹೋರಾಟಕ್ಕೆ ನೇತೃತ್ವ ನೀಡಿದ್ದ ಕೆಥೋಲಿಕ್ ಸಭಾ ಮುಖಂಡ ಆಲ್ವಿನ್ ಡಿಸೋಜ ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ಆಲ್ವಿನ್ ಡಿಸೋಜ ಅವರು ಯೂಟ್ಯೂಬ್ ಚಾನೆಲ್ಲಿನ ಪತ್ರಕರ್ತರೊಬ್ಬರನ್ನು ಕರೆತಂದು ಅಕ್ರಮ ಮರಳುಗಾರಿಕೆ ಬಗ್ಗೆ ಕವರೇಜ್ ಮಾಡಿಸುತ್ತಿದ್ದರು. ದ್ವೀಪದ ಆಸುಪಾಸಿನಲ್ಲಿ ವಿಡಿಯೋ ಮಾಡಿದ ಬಳಿಕ ಇವರು ಹಿಂತಿರುಗುತ್ತಿದ್ದಾಗ ರಸ್ತೆ ಬದಿಯಲ್ಲಿ ಅಡ್ಡ ಹಾಕಿದ ತಂಡವೊಂದು ಆಲ್ವಿನ್ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಯಿಂದ ಗಾಯಗೊಂಡ ಆಲ್ವಿನ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.



ಆಲ್ವಿನ್ ಡಿಸೋಜ ಮೇಲೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರೇ ಸೇರಿಕೊಂಡು ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿಬಂದಿದೆ. ಆಲ್ವಿನ್ ಕೂಡ ಬೇರೆ ಪ್ರದೇಶದಲ್ಲಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಪಾವೂರು ಉಳಿಯದಲ್ಲಿ ಮರಳುಗಾರಿಕೆ ವಿರೋಧಿಸಿ ಹೋರಾಟ ನಡೆಸುತ್ತಿರುವುದಕ್ಕೆ ಅಲ್ಲಿನ ದಂಧೆಕೋರರು ಆಕ್ಷೇಪಿಸಿದ್ದಾರೆ. ನೀನು ಬೇರೆ ಕಡೆ ಮಾಡ್ತೀಯಲ್ಲಾ.. ಇಲ್ಲಿ ಯಾಕೆ ವಿರೋಧ ಮಾಡ್ತೀಯಾ ಎಂದು ಪ್ರಶ್ನೆ ಮಾಡಿ ಹಲ್ಲೆ ನಡೆಸಿದ್ದಾರೆ. ಒಂದು ದಿನದ ಹಿಂದೆ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಬೋಟುಗಳನ್ನು ಗಣಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು.
ಪಾವೂರು ಉಳಿಯ ದ್ವೀಪದ ಸುತ್ತ ಮಣ್ಣನ್ನು ಅಗೆದು ಮರಳುಗಾರಿಕೆ ನಡೆಸಲಾಗುತ್ತಿದ್ದು ಇದರಿಂದ ದ್ವೀಪದ ಅಸ್ತಿತ್ವಕ್ಕೆ ತೊಂದರೆಯಾಗಿದೆ. ದ್ವೀಪದ ವ್ಯಾಪ್ತಿ ಕಿರಿದಾಗಿದ್ದು ಇದನ್ನು ವಿರೋಧಿಸಿ ಕೆಥೋಲಿಕ್ ಸಭಾದಿಂದ ಇತ್ತೀಚೆಗೆ ಬೃಹತ್ ಪ್ರತಿಭಟನೆ ನಡೆದಿತ್ತು. ದ್ವೀಪದಲ್ಲಿ 40ರಷ್ಟು ಕ್ರಿಸ್ತಿಯನ್ ಕುಟುಂಬಗಳು ವಾಸವಿದ್ದು ಇವರ ಗೋಳು ಅರಣ್ಯ ರೋದನವಾಗಿದೆ.
Mangalore Alwyn DSouza president of Catholic Sabha attacked thrashed by illegal sand goons for taking youtube journalist to film the illegal sand mining at Pavoor uliya. Alwyn DSouza was beaten near Adyar by miscreants. A case has been registered at the Kankandy rural police station.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
28-09-26 09:33 pm
HK News Staffer
30 ನಿಮಿಷದಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಮುಂಗೈ ಸ...
28-09-26 08:33 pm
ದಸರಾಗೆ ಕಾನ್ವೆಂಟ್ ಸ್ಕೂಲ್ ಗಳಲ್ಲಿ ರಜೆ ಯಾಕಿಲ್ಲ, ರ...
28-09-26 08:29 pm
ಅಬ್ದುಲ್ ರೆಹಮಾನ್ ಕೊಲೆಯಾಗಿದ್ದು ವೈಯುಕ್ತಿಕ ಕಾರಣಗಳ...
28-09-26 02:13 pm
ಸೌಜನ್ಯಾ ಪ್ರಕರಣದ ಎಸ್ಐಟಿ ಬಗ್ಗೆ ಆರೆಸ್ಸೆಸ್ ಮುಖಂಡ...
28-09-26 02:10 pm
28-09-26 03:08 pm
HK News Staffer
ಹೆಲ್ಮೆಟ್ ರಹಿತ ಚಾಲನೆಯಿಂದ ಹೆಚ್ಚುತ್ತಿರುವ ಸಾವು- ನ...
27-09-26 08:06 pm
Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ...
27-09-26 06:10 pm
ಶಾರ್ಜಾದಲ್ಲಿ ಹತ್ಯೆಯಾದ ಕುಂದಾಪುರದ ವ್ಯಕ್ತಿಯ ಶವ ಹು...
25-09-26 04:53 pm
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am