ಬ್ರೇಕಿಂಗ್ ನ್ಯೂಸ್
15-10-24 06:34 pm Udupi Correspondent ಕ್ರೈಂ
ಉಡುಪಿ, ಅ.15: ಅನಿವಾಸಿ ಭಾರತೀಯ, ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಒಡೆತನದ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ 2.5 ಕೋಟಿಗೂ ಅಧಿಕ ಹಣವನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಮೈಸೂರಿನ ನಂಜನಗೂಡಿನಲ್ಲಿ ಬಂಧಿಸಿದ್ದಾರೆ. ಬಾರ್ಕೂರು ಮೂಲದ ನಾಗೇಶ್ ಪೂಜಾರಿ (31) ಬಂಧಿತ ಆರೋಪಿ.
ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪೊಲೀಸರು ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ. ದುಬೈನ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥೆಯ ಹೋಟೆಲೊಂದಕ್ಕೆ ಉದ್ಯೋಗಕ್ಕೆ ಸೇರಿದ್ದ ನಾಗೇಶ್ ಪೂಜಾರಿ 2.5 ಕೋಟಿಗೂ ಅಧಿಕ ಹಣ ವಂಚಿಸಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಫಾರ್ಚ್ಯೂನ್ ಹೋಟೆಲ್ ಮ್ಯಾನೇಜರ್ ಸುನೀಲ್ ಕುಮಾರ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 25 ಲಕ್ಷಕ್ಕೂ ಹೆಚ್ಚಿನ ಹಣದ ಅವ್ಯವಹಾರ ಆಗಿದ್ದರಿಂದ ಉಡುಪಿ ಸೆನ್ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿತ್ತು.
ಈ ನಡುವೆ, ಆರೋಪಿ ನಾಗೇಶ್ ಪೂಜಾರಿ ಎಫ್‌ಐಆರ್ ಸ್ಥಗಿತಗೊಳಿಸಲು ಹೈಕೋರ್ಟಿಗೆ ಸಲ್ಲಿಸಿದ ಅರ್ಜಿ 2023ರ ಜುಲೈನಲ್ಲಿ ವಜಾಗೊಳಿಸಲಾಗಿತ್ತು. ಬಳಿಕ, ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು. ಆನಂತರ, ಹೈಕೋರ್ಟ್ ಮತ್ತು ಸೆಶನ್ಸ್ ನ್ಯಾಯಾಲಯದ ಆದೇಶಗಳನ್ನು ಮರೆಮಾಚಿ ಬ್ರಹ್ಮಾವರದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಶರಣಾಗಿದ್ದ ಆರೋಪಿ 2023ರ ಆಗಸ್ಟ್ ನಲ್ಲಿ ಅಲ್ಲಿಯೇ ಜಾಮೀನು ಪಡೆದುಕೊಂಡಿದ್ದ. ಈ ಜಾಮೀನು ಆದೇಶವನ್ನು ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಜೆ.ಎಂ.ಎಫ್ ಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಪಡಿಸಲಾಗಿತ್ತು.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ..
ಕಳೆದ ಏಳೆಂಟು ವರ್ಷಗಳ ಹಿಂದೆ ದುಬೈನ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ಕಂಪನಿಗೆ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿಯವರೇ ಸಂದರ್ಶನ ನಡೆಸಿ ನಾಗೇಶ್ ಪೂಜಾರಿಯನ್ನು ಅಕೌಂಟೆಂಟ್ ಆಗಿ ಸೇರಿಸಿಕೊಂಡಿದ್ದರು. 2022ರಲ್ಲಿ ಮುಖ್ಯ ಅಕೌಂಟೆಂಟ್ ಆಗಿ ಬಡ್ತಿಗೊಂಡಿದ್ದು 2023ರಲ್ಲಿ ತನ್ನ ಮದುವೆಯ ಹಿನ್ನೆಲೆ ದುಬೈನಿಂದ ಮೂರು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದ. ರಜೆ ಮುಗಿಯುವ ಹೊತ್ತಿಗೆ ಮತ್ತೆ 15 ದಿನಗಳ ಹೆಚ್ಚುವರಿ ರಜೆಯನ್ನು ಕೋರಿದ್ದು ದುಬೈನಲ್ಲಿ ಕೆಲಸದ ಒತ್ತಡ ಹೆಚ್ಚಿದ್ದರಿಂದ ರಜೆ ನಿರಾಕರಿಸಲಾಗಿತ್ತು.
ಆದರೆ ನಾಗೇಶ್ ಪೂಜಾರಿ ಇ-ಮೇಲ್ ಮೂಲಕ ತನ್ನ ಕೆಲಸಕ್ಕೆ ರಾಜೀನಾಮೆ ಪತ್ರವನ್ನು ಎಚ್.ಆರ್ ಗೆ ಕಳುಹಿಸಿದ್ದ. ದಿಢೀರ್ ರಾಜೀನಾಮೆ ಮತ್ತು ಅಸಹಜ ವರ್ತನೆಯಿಂದ ಅನುಮಾನಗೊಂಡ ಹೋಟೆಲಿನ ಮ್ಯಾನೇಜರ್, ಲೆಕ್ಕ ಪುಸ್ತಕಗಳನ್ನು ಹಾಗೂ ನಗದು ವಹಿವಾಟುಗಳನ್ನು ಬ್ಯಾಂಕ್ ಸ್ಟೇಟ್ಮೆಂಟ್ ಜೊತೆ ಪರಿಶೀಲಿಸಿದಾಗ ಅಲ್ಲಿ ಆದಾಯ ಹೊರತಾಗಿಯೂ ದೊಡ್ಡ ಪ್ರಮಾಣದ ನಗದು ಕಾಣೆಯಾಗಿದ್ದು ತಿಳಿದುಬಂದಿತ್ತು. ಹೋಟೆಲಿನ ಆದಾಯದಲ್ಲಿ ಬಂದ ನಗದನ್ನು ಹೋಟೆಲ್‌ನ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಭಾರತ ದೇಶದ ತನ್ನ ವೈಯುಕ್ತಿಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಲ್ಲದೆ ಮ್ಯಾನೇಜ್ಮೆಂಟ್ ನಿಯಮಿತ ಹಸ್ತಕ್ಷೇಪವನ್ನು ತಪ್ಪಿಸಲು ನಗದು ವಹಿವಾಟುಗಳಿಗೆ ನಕಲಿ ಜರನಲ್ ನಮೂದುಗಳನ್ನು ಸೃಷ್ಟಿಸಿಕೊಂಡಿದ್ದು ಪತ್ತೆಯಾಗಿತ್ತು. ಆರೋಪಿ ಭಾರತದ ರೂಪಾಯಿಗಳಲ್ಲಿ 2 ಕೋಟಿ 55 ಲಕ್ಷದ 63 ಸಾವಿರ ಹಣ ವಂಚಿಸಿದ್ದು ಬೆಳಕಿಗೆ ಬಂದಿತ್ತು.
Udupi CEN police have arrested a man wanted in the case of swindling The Fortune Group of hotels in Dubai owned by Udupi based NRI entrepreneur Praveen Kumar Shetty of over Rs 2.5 crores. The accused Nagesh Poojary (31) was arrested in Nanjangud soon after the District Sessions Court and State High Court cancelled the bail granted to him by the JMFC Court in connection with the case.
16-07-25 11:47 am
HK News Desk
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
16-07-25 11:42 am
Mangalore Correspondent
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm