ಬ್ರೇಕಿಂಗ್ ನ್ಯೂಸ್
17-10-24 11:03 pm Mangalore Correspondent ಕ್ರೈಂ
ಮಂಗಳೂರು, ಅ.17: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಭಾರೀ ಲಾಭ ಗಳಿಸುವ ಆಸೆಯಿಂದ ವ್ಯಕ್ತಿಯೊಬ್ಬ ರು ಅಪರಿಚಿತ ವ್ಯಕ್ತಿಗಳ ಮಾತನ್ನು ನಂಬಿ ವಿವಿಧ ಬ್ಯಾಂಕ್ ಖಾತೆಗಳಿಗೆ ಕೋಟಿಗೂ ಹೆಚ್ಚು (ಒಟ್ಟು 1,12,48,240 ರೂ.) ಮೊತ್ತವನ್ನು ವರ್ಗಾಯಿಸಿ ಮೋಸ ಹೋಗಿದ್ದಾರೆ.
ಡೇಟಿಂಗ್ ಆ್ಯಪ್‌ನಲ್ಲಿ ದೂರುದಾರರಿಗೆ ಲೀನಾ ಜೋಸ್ ಎಂಬವರ ಸಂಪರ್ಕವಾಗಿತ್ತು. ಬಳಿಕ ಟೆಲಿಗ್ರಾಂ ಮೂಲಕ ಚಾಟ್ ಮಾಡತೊಡಗಿದ್ದು ಆಗ ಲೀನಾ ಆಡ್ಮಿರಲ್ ಮಾರ್ಕೆಟ್ ಫೋರೆಕ್ಸ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಡಬಲ್ ಆಗುತ್ತೆ ಎಂದು ನಂಬಿಸಿದ್ದು, ಅದರಂತೆ ದೂರುದಾರರು ನಕಲಿ ವೇವ್ ಜಿಪಿಟೆಕ್ಸಾ ಎಂಬ ಆಪ್ ಡೌನ್‌ಲೋಡ್ ಮಾಡಿ ಲಾಗಿನ್ ಆಗಿದ್ದರು. ಬಳಿಕ 50 ಸಾವಿರ ರೂ. ಮೊತ್ತವನ್ನು ನೆಫ್ಟ್ ಮೂಲಕ ಅದರ ಖಾತೆಗೆ ವರ್ಗಾಯಿಸಿದರು.
ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಮಾತನ್ನು ನಂಬಿದ ದೂರುದಾರರು ಜುಲೈ 3ರಿಂದ 23ರ ವರೆಗೆ 10 ಲಕ್ಷ ರೂ. ಮೊತ್ತವನ್ನು ಆರೋಪಿಗಳು ಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ನಂತರ ವೇವ್‌ಜಿಪಿಟೆಕ್ಸಾ ಆಪ್ ಖಾತೆಯಲ್ಲಿ 80 ಲಕ್ಷ ರೂ. ಆಗಿರೋದಾಗಿ ತೋರಿಸಿತ್ತು. ಹಣವನ್ನು ಹಿಂಪಡೆಯಲು ಹೋದಾಗ ಆರೋಪಿಗಳು ಶೇ. 30ರಷ್ಟು ತೆರಿಗೆ ಮೊತ್ತ ಪಾವತಿಸಲು ಸೂಚಿಸಿದ್ದಾರೆ. ಅದರಂತೆ 19,26,560 ರೂ. ಮೊತ್ತವನ್ನು ವಂಚಕರು ಹೇಳಿದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ನಂತರ ಡಾಲರ್ ರೂಪದಲ್ಲಿರುವ ಮೊತ್ತವನ್ನು ಭಾರತೀಯ ರೂಪಾಯಿಗೆ ವರ್ಗಾಯಿಸಲು ಬ್ಯಾಂಕ್ ವಹಿವಾಟು ಶುಲ್ಕ ಶೇ.10 ಪಾವತಿಸಲು ವಂಚಕರು ಸೂಚಿಸಿದ್ದು, ಅದರಂತೆ ದೂರುದಾರರು 7,36,880 ರೂ. ವರ್ಗಾಯಿಸಿದ್ದಾರೆ. ಇಷ್ಟಾದ ಬಳಿಕವೂ 50 ಲಕ್ಷ ರೂ. ಮೊತ್ತ ವರ್ಗಾವಣೆ ಮಾಡಲು ಹೋದಾಗ ಆರೋಪಿಗಳು ಮತ್ತೆ ಮರುಳು ಮಾಡಿದ್ದು ನಮ್ಮ ರಿಸ್ಕ್ ಕಂಟ್ರೋಲ್ ವಿಭಾಗದವರು ಇಷ್ಟು ದೊಡ್ಡ ಮೊತ್ತವನ್ನು ಹಿಂಪಡೆಯುವುದನ್ನೇ ಹೋಲ್ಡ್ ಮಾಡಿದ್ದಾರೆ. ಹಿಂಪಡೆಯಬೇಕಿದ್ದರೆ ಶೇ.50ರಷ್ಟನ್ನು ಠೇವಣಿ ಇರಿಸಬೇಕು ಎಂದು ಸೂಚಿಸಿದ್ದಾರೆ. ಅದರಂತೆ ಮತ್ತೆ ದೂರುದಾರರು 26,84,800 ರೂ. ವರ್ಗಾಯಿಸಿದ್ದಾರೆ. ಇಷ್ಟಾದ ನಂತರವೂ ಆರೋಪಿಗಳು ದೂರುದಾರರಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ, ಅದು ಏರಿಕೆಯಾಗಬೇಕಾದರೆ ಹಣ ಹಾಕಲು ತಿಳಿಸಿದ್ದಾರೆ. ಈ ರೀತಿ ದೂರುದಾರರು ಒಟ್ಟಾರೆ 1 ಕೋಟಿ ರೂ. ಗೂ ಅಧಿಕ ಮೊತ್ತವನ್ನು ಆನ್ ಲೈನ್ ಮೂಲಕ ಪಾವತಿಸಿದ್ದಾರೆ. ಇಷ್ಟೆಲ್ಲ ಆದ ಬಳಿಕ ವ್ಯಕ್ತಿಗೆ ತಾನು ಮೋಸ ಹೋಗಿರುವ ಅರಿವಾಗಿದೆ. ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Share market fraud, Mangalore man looses 1 crore to online frauds. A case has been registered at the cyber crime police station
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm