ಬ್ರೇಕಿಂಗ್ ನ್ಯೂಸ್
24-10-24 11:03 pm Mangalore Correspondent ಕ್ರೈಂ
ಮಂಗಳೂರು, ಅ.24: ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೊಸ ರೀತಿಯ ಮೋಸದ ಜಾಲವನ್ನು ಹೆಣೆಯುತ್ತಲೇ ಇದ್ದಾರೆ. ಇವರ ಜಾಲಕ್ಕೆ ವಿದ್ಯಾವಂತರು ಮತ್ತು ಸಾಕಷ್ಟು ಸ್ಥಿತಿವಂತರೇ ಬಲಿ ಬೀಳುತ್ತಿದ್ದು, ಕದ್ರಿ ನಿವಾಸಿ 65 ವರ್ಷದ ವ್ಯಕ್ತಿಯೊಬ್ಬರು ಸಿಬಿಐ ಅಧಿಕಾರಿಗಳ ಸೋಗಿನ ಜಾಲಕ್ಕೆ ಬಿದ್ದು ತನ್ನ ಷೇರು ಮಾರುಕಟ್ಟೆಯಲ್ಲಿದ್ದ ಹಣವನ್ನೂ ಮಾರಿ, ಮೋಸಗಾರರಿಗೆ ಕೊಟ್ಟು ಬರೋಬ್ಬರಿ 32 ಲಕ್ಷ ರೂಪಾಯಿ ಕಳಕೊಂಡಿದ್ದಾರೆ.
ಇವರಿಗೆ ಮೊದಲ ಬಾರಿಗೆ ಅ.7ರಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ಡಿಪಾರ್ಟ್ಮೆಂಟ್ ಆಫ್ ಟೆಲಿ ಕಮ್ಯುನಿಕೇಶನ್ಸ್ ನಿಂದ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮಲ್ಲಿ ಇನ್ನೊಂದು ಮೊಬೈಲ್ ನಂಬರ್ ಇದೆಯಲ್ವಾ, ಅದನ್ನು ಬಳಸಿ ಮುಂಬೈನಲ್ಲಿ ಫ್ರಾಡ್ ಮಾಡಲಾಗಿದೆ ಎಂದು ಹೇಳಿದ್ದು, ಕರೆಯನ್ನು ಸಂಜನಾ ಎಂಬವರಿಗೆ ವರ್ಗಾಯಿಸುತ್ತೇನೆಂದು ಹೇಳಿ ವರ್ಗಾವಣೆ ಮಾಡಿದ್ದಾರೆ. ಆಕೆ ಮಾತನಾಡಿ ನಿಮ್ಮ ವಿರುದ್ಧ ಮುಂಬೈನ ಎಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ, ಎರಡು ಗಂಟೆಯೊಳಗೆ ಠಾಣೆಗೆ ಹಾಜರಾಗಬೇಕು ಎಂದು ಹೇಳಿದ್ದಾಳೆ. ಆ ಠಾಣೆಯ ನಂಬರ್ ಕೊಡಿ ಎಂದು ಕೇಳಿದ್ದಕ್ಕೆ, 8293369743 ಎಂಬ ನಂಬರ್ ಕೊಟ್ಟಿದ್ದರು. ಕೆಲಹೊತ್ತಿನ ಬಳಿಕ ದೂರುದಾರ ವ್ಯಕ್ತಿ ಆ ಸಂಖ್ಯೆಗೆ ಕರೆ ಮಾಡಿದ್ದು, ಅತ್ತ ಕಡೆಯಿಂದ ಸಂದೀಪ್ ರಾವ್ ಎಂದು ವ್ಯಕ್ತಿಯೊಬ್ಬ ಮಾತನಾಡಿದ್ದಾನೆ.
ನಿಮ್ಮ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಬಳಸಿ ಅಕ್ರಮ ಹಣ ವರ್ಗಾವಣೆಯಾಗಿದೆ, ಜೆಟ್ ಏರ್ವೇಸ್ ಮಾಲಕ ನರೇಶ್ ಗೋಯಲ್ ಮನೆಗೆ ಸಿಬಿಐ ದಾಳಿ ನಡೆಸಿದ್ದಾಗ ನಿಮ್ಮ ಹೆಸರಿನ ಡೆಬಿಟ್ ಕಾರ್ಡ್ ಸಿಕ್ಕಿದೆ. ಅಲ್ಲದೆ, ನಿಮ್ಮ ಹೆಸರಲ್ಲಿ ಮುಂಬೈನ ಕೆನರಾ ಬ್ಯಾಂಕಿನಲ್ಲಿ ಖಾತೆಯಿದ್ದು, ಅದರಲ್ಲಿ ಸಾರ್ವಜನಿಕರ ಹಣ ಜಮೆಯಾಗಿದೆ. ಈ ಬಗ್ಗೆಯೂ 24 ಮಂದಿ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿದ್ದು ನಿಮ್ಮ ಮೇಲೆ ಅರೆಸ್ಟ್ ವಾರೆಂಟ್ ಆಗಿದೆಯೆಂದು ಹೇಳಿ ನಂಬಿಸಿದ್ದಾರೆ. ಅ.8ರಂದು ಬೆಳಗ್ಗೆ 9 ಗಂಟೆಗೆ ನವಜೋತಿ ಸಿಮಿ ಎಂದು ತನ್ನನ್ನು ಪರಿಚಯಿಸಿದ ವ್ಯಕ್ತಿಯೊಬ್ಬ ಸಿಬಿಐ ಅಧಿಕಾರಿಯೆಂದು ಹೇಳಿ ವಾಟ್ಸಾಪ್ ಕರೆ ಮಾಡಿದ್ದಾನೆ. ಅರೆಸ್ಟ್ ವಾರೆಂಟ್ ಇದೆ, ನಿಮ್ಮನ್ನು ಬಚಾವ್ ಮಾಡುವುದಿದ್ದರೆ ನಮ್ಮ ಜೊತೆಗೆ ಸಹಕರಿಸಿ, ನಿಮ್ಮ ಹೆಸರಲ್ಲಿ ಎಲ್ಲೆಲ್ಲಿ ಬ್ಯಾಂಕ್ ಖಾತೆಯಿದೆ, ಅದರಲ್ಲಿ ಹಣ ಎಷ್ಟಿದೆ ಎಂಬ ಬಗ್ಗೆ ವಿವರ ಕೊಡಿ ಎಂದು ತಿಳಿಸಿದ್ದಾನೆ.
ಹಂಪನಕಟ್ಟೆಯ ಕೆನರಾ ಬ್ಯಾಂಕ್ ಶಾಖೆ ಮತ್ತು ಬಂಟ್ಸ್ ಹಾಸ್ಟೆಲಿನ ಏಕ್ಸಿಸ್ ಬ್ಯಾಂಕ್ ನಲ್ಲಿ ಎರಡು ಲಕ್ಷ ಮತ್ತು ಇನ್ನೊಂದರಲ್ಲಿ ಮೂರು ಲಕ್ಷ ಹಣ ಇರುವ ಬಗ್ಗೆ ತಿಳಿಸಿದ್ದು, ಅದನ್ನು ನಾವು ತಿಳಿಸಿದ ಖಾತೆಗೆ ವರ್ಗಾಯಿಸಿ, ತನಿಖೆಯ ಬಳಿಕ ನಿಮ್ಮ ಹಣವನ್ನು ಹಿಂತಿರುಗಿಸುವುದಾಗಿ ನಂಬಿಸಿದ್ದಾರೆ. ಅದರಂತೆ, ಈ ವ್ಯಕ್ತಿ ತನ್ನ ಬ್ಯಾಂಕ್ ಶಾಖೆಗೆ ಹೋಗಿ ಅವರು ಕೊಟ್ಟ ಮಧ್ಯಪ್ರದೇಶದ ಬಂಧನ್ ಬ್ಯಾಂಕ್ ಖಾತೆಗೆ 3 ಲಕ್ಷ ಹಣವನ್ನು ಆರ್ಟಿಜಿಎಸ್ ಮಾಡಿದ್ದಾರೆ. ಇನ್ನೊಂದು ಪಶ್ಚಿಮ ಬಂಗಾಳದ ಎಸ್ ಬಿಐ ಬ್ಯಾಂಕ್ ಖಾತೆ ಕೊಟ್ಟಿದ್ದು, ಅದಕ್ಕೂ ಎರಡು ಲಕ್ಷ ಹಣ ಹಾಕಿದ್ದಾರೆ. ಆನಂತರ, ನಿಮ್ಮ ಹೆಸರಲ್ಲಿ ಡಿಮ್ಯಾಟ್ ಖಾತೆಯಲ್ಲಿರುವ ಷೇರು ಹೂಡಿಕೆಯ ಹಣವನ್ನೂ ಕೆನರಾ ಬ್ಯಾಂಕಿಗೆ ವರ್ಗಾಯಿಸಿ, ಅದನ್ನೂ ನಾವು ಹೇಳುವ ಖಾತೆಗೆ ವರ್ಗಾವಣೆ ಮಾಡಿ ಎಂದು ತಿಳಿಸಿದ್ದಾರೆ.
ಇದೆಲ್ಲವನ್ನೂ ಅಸಲಿ ಸಿಬಿಐ ಅಧಿಕಾರಿಗಳೇ ಮಾಡುತ್ತಿದ್ದಾರೆಂದು ನಂಬಿದ್ದ ಈ ವ್ಯಕ್ತಿ ಷೇರು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದ ಮೊತ್ತವನ್ನು ಅ.18ರಂದು ಮಾರಾಟ ಮಾಡಿದ್ದು ಷೇರು ಮೌಲ್ಯ ಹೆಚ್ಚಿದ್ದರಿಂದ ಒಟ್ಟು ಮೌಲ್ಯ 26.10 ಲಕ್ಷ ಬಂದಿತ್ತು. ಅದನ್ನೂ ಆರೋಪಿ ನವಜೋತ್ ಸಿಮಿ ಕೊಟ್ಟಿದ್ದ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಅ.19ರಂದು ನವಜೋತ್ ಸಿಮಿ ಮತ್ತೆ ವಾಟ್ಸಾಪ್ ಕರೆ ಮಾಡಿದ್ದು, ನಿಮ್ಮ ಮೇಲಿನ ಅರೆಸ್ಟ್ ವಾರೆಂಟ್ ಹಿಂಪಡೆಯಲು 50 ಲಕ್ಷ ಡಿಪಾಸಿಟ್ ಇಡಬೇಕೆಂದು ಹೇಳಿದ್ದಾನೆ. ಆನಂತರ, ಈಗಾಗಲೇ ನೀವು ಕೊಟ್ಟಿರುವ 31.12 ಲಕ್ಷ ಹಣವನ್ನು ಹಿಂದಕ್ಕೆ ನೀಡುವುದಾಗಿ ತಿಳಿಸಿದ್ದಾನೆ. ದಿನದಿಂದ ದಿನಕ್ಕೆ ತನ್ನ ಹಣವನ್ನೆಲ್ಲ ಪೀಕಿಸುತ್ತಿರುವುದರಿಂದ ಚಿಂತೆಗೀಡಾದ 65 ವರ್ಷದ ವ್ಯಕ್ತಿ, 50 ಲಕ್ಷ ಕೊಡುವ ವಿಚಾರದಲ್ಲಿ ಮನೆಯವರಲ್ಲಿ ತಿಳಿಸಿದ್ದಾರೆ. ಅಷ್ಟರಲ್ಲಿ ನಿಮ್ಮನ್ನು ಸಿಬಿಐ ಅಧಿಕಾರಿಗಳೆಂದು ಮೋಸ ಮಾಡಿದ್ದಾರೆಂದು ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.
ಷೇರು ಹೂಡಿಕೆಯನ್ನೂ ಮಾರಿ ಕೊಟ್ಟುಬಿಟ್ಟ !
ಕುಳಿತಲ್ಲೇ 31 ಲಕ್ಷ ರೂಪಾಯಿ ಕಳಕೊಂಡ ವ್ಯಕ್ತಿ ತಾನು ಮೋಸ ಹೋದ ಬಗ್ಗೆ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ, ದೂರು ನೀಡಿದ್ದು, ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ್ ರಾವ್, ಸಂಜನಾ, ನವಜೋತ್ ಸಿಮಿ ಎಂಬವರ ಮೇಲೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಈ ಬಗ್ಗೆ ಬಂದರು ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅವರಲ್ಲಿ ಕೇಳಿದಾಗ, ದೊಡ್ಡ ಬ್ಲಂಡರ್ ಅಂದ್ರೆ, ಷೇರು ಮಾರುಕಟ್ಟೆಯಲ್ಲಿರುವ ಹಣವನ್ನೂ ಮಾರಾಟ ಮಾಡಿ ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಇಷ್ಟಾದರೂ ಇವರಿಗೆ ಸಂಶಯ ಬಂದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸುತ್ತಾರೆ. ಮೋಸಕ್ಕೀಡಾದ ವ್ಯಕ್ತಿ ಹಿಂದೆ ವಿದೇಶದಲ್ಲಿದ್ದು ನಿವೃತ್ತಿಯ ಬಳಿಕ ಮಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ. ಇವರ ಸ್ವಾಭಿಮಾನ ಎಷ್ಟಿತ್ತು ಅಂದರೆ, ತನ್ನಿಂದ ಹಣ ಪೀಕಿಸುತ್ತಿರುವ ಬಗ್ಗೆ ತನ್ನ ಮನೆಯವರಿಗೂ ತಿಳಿಸಿರಲಿಲ್ಲ. ತನ್ನ ಬ್ಯಾಂಕ್ ಕಚೇರಿಗೆ ಹೋಗಿ ಆರ್ ಟಿಜಿಎಸ್ ಮಾಡುವಾಗಲೂ ಅಲ್ಲಿನ ಸಿಬಂದಿಗೂ ತಿಳಿಸಿರಲಿಲ್ಲ. ಇಷ್ಟೊಂದು ಮೂರ್ಖತನ ತೋರಿದ್ದೇ ಆರೋಪಿಗಳ ಮೋಸಕ್ಕೆ ಬಲಿ ಬೀಳಲು ಕಾರಣವಾಗಿದೆ.
Mangalore Fake CBI whatsapp call, man looses 31 lakhs by selling his share market online. Man from kadri was threatened of using his mobile number for fraud and later was threatened to pay Rs 31 lakhs online.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm