Kodagu Murder, Telangana, Crime News; ಹೈದ್ರಾಬಾದ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ ; ಕೊಡಗಿನಲ್ಲಿ ಸುಟ್ಟು ಹಾಕಿ ಆರಾಮವಾಗಿದ್ದ ಹಂತಕರು, ಒಬ್ಬರಲ್ಲ ಐವರು ಪುರುಷರ ಬಾಳನ್ನು ಮುಗಿಸಿಬಿಟ್ಟ ಪಾಂಚಾಲಿ ! ಸುಳಿವೇ ಇಲ್ಲದ ಕೇಸಿನಲ್ಲಿ ಕ್ಲೂ ಕೊಟ್ಟಿತ್ತು ಕೆಂಬಣ್ಣದ ಬೆಂಜ್ ಕಾರು ! 

27-10-24 02:58 pm       HK News Desk   ಕ್ರೈಂ

ಪೊಲೀಸರು ಮನಸ್ಸು ಮಾಡಿದರೆ ಯಾವ ಕೇಸನ್ನೂ ಭೇದಿಸಬಲ್ಲರು ಅನ್ನುವುದಕ್ಕೆ ಈ ಕತೆನೇ ಸಾಕ್ಷಿ. ಯಾವುದೇ ಪ್ರತ್ಯಕ್ಷದರ್ಶಿಯಾಗಲೀ, ಸಿಸಿಟಿವಿ ಸಾಕ್ಷಿಯಾಗಲೀ ಇಲ್ಲದಿದ್ದರೂ, ದೂರದ ತೆಲಂಗಾಣದಲ್ಲಿ ಕೊಲೆಗೈದು ಮಡಿಕೇರಿಯ ಕಾಫಿ ತೋಟದಲ್ಲಿ ಉದ್ಯಮಿಯನ್ನು ಸುಟ್ಟು ಹಾಕಿದ್ದ ಪ್ರಕರಣವನ್ನು ಪೊಲೀಸರು ಚಾಣಾಕ್ಷತನದಿಂದ ಭೇದಿಸಿದ್ದಾರೆ.

ಬೆಂಗಳೂರು, ಅ.27: ಪೊಲೀಸರು ಮನಸ್ಸು ಮಾಡಿದರೆ ಯಾವ ಕೇಸನ್ನೂ ಭೇದಿಸಬಲ್ಲರು ಅನ್ನುವುದಕ್ಕೆ ಈ ಕತೆನೇ ಸಾಕ್ಷಿ. ಯಾವುದೇ ಪ್ರತ್ಯಕ್ಷದರ್ಶಿಯಾಗಲೀ, ಸಿಸಿಟಿವಿ ಸಾಕ್ಷಿಯಾಗಲೀ ಇಲ್ಲದಿದ್ದರೂ, ದೂರದ ತೆಲಂಗಾಣದಲ್ಲಿ ಕೊಲೆಗೈದು ಮಡಿಕೇರಿಯ ಕಾಫಿ ತೋಟದಲ್ಲಿ ಉದ್ಯಮಿಯನ್ನು ಸುಟ್ಟು ಹಾಕಿದ್ದ ಪ್ರಕರಣವನ್ನು ಪೊಲೀಸರು ಚಾಣಾಕ್ಷತನದಿಂದ ಭೇದಿಸಿದ್ದಾರೆ. ಇದೇ ಅ.8ರಂದು ಕೊಡಗಿನ ಸುಂಟಿಕೊಪ್ಪ ಸಮೀಪದ ಕಾಫಿ ತೋಟದಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿ ತನಿಖೆಗಿಳಿದ ಪೊಲೀಸರು ಕೇವಲ 15 ದಿನಗಳಲ್ಲಿ ದೆಹಲಿ, ಬೆಂಗಳೂರಿನಲ್ಲಿ ಅವಿತಿದ್ದ ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ತೆಲಂಗಾಣ ಮೂಲದ ನಿಹಾರಿಕ (29), ಆಂಧ್ರ ಮೂಲದ, ಬೆಂಗಳೂರಿನಲ್ಲಿ ಪಶು ವೈದ್ಯನಾಗಿರುವ ನಿಖಿಲ್ ರೆಡ್ಡಿ ಹಾಗೂ ಹರಿಯಾಣ ಮೂಲದ ಅಂಕುರ್ ರಾಣ ಬಂಧಿತರು. ತನಿಖೆಗಿಳಿದ ಸುಂಟಿಕೊಪ್ಪ ಪೊಲೀಸರಿಗೆ ಕೆಂಪು ಬಣ್ಣದ ಬೆಂಜ್ ಕಾರಿನಲ್ಲಿ ಯಾರೋ ಬಂದಿದ್ದರು ಎನ್ನುವುದಷ್ಟೇ ಸಿಸಿಟಿವಿಯಿಂದ ಸುಳಿವು ಸಿಕ್ಕಿತ್ತು. ಹೀಗಾಗಿ ಯಾರದ್ದೋ ಹೈಪ್ರೊಫೈಲ್ ಕೃತ್ಯ ಎನ್ನುವ ಅನುಮಾನದಲ್ಲಿ ಕಾರಿನ ನಂಬರ್ ಪತ್ತೆಗೆ ಮುಂದಾಗಿದ್ದರು. ಕೊಡಗಿನಿಂದ ತುಮಕೂರಿನ ಬೆಳ್ಳೂರು ಕ್ರಾಸ್ ವರೆಗಿನ 500ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ, ಒಂದು ಕಡೆ ಕಾರಿನ ನಂಬರ್ ಪತ್ತೆಯಾಗಿತ್ತು. ಕಾರನ್ನು ಒಂದ್ಕಡೆ ಸರ್ವಿಸ್ ಸ್ಟೇಶನ್ನಲ್ಲಿ ಬಿಟ್ಟು ಹೋಗಿರುವ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ಹೋಗಿ ಸರ್ವೀಸ್ ಗೆ ಬಿಟ್ಟವರು ಯಾರೆಂದು ಕೇಳಿದಾಗ ಹತ್ಯೆಯ ಸುಳಿವು ಬಿಚ್ಚಿಕೊಂಡಿತ್ತು. ಕಾರನ್ನು ಸರ್ವೀಸ್ಗೆ ಬಿಟ್ಟವರೇ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಕೊಡಗಿಗೆ ತಂದು ಸುಟ್ಟು ಹಾಕಿದ್ದರು ಎನ್ನುವ ಭಯಾನಕ ಸತ್ಯ ಬೆಳಕಿಗೆ ಬಂದಿತ್ತು. 

ತೆಲಂಗಾಣ ರಾಜ್ಯದ ನಿಹಾರಿಕಾ ಎಂಬ ಮಹಿಳೆ, ಬೆಂಗಳೂರಿನ ಪಶುವೈದ್ಯ ನಿಖಿಲ್ ಹಾಗೂ ಹರಿಯಾಣ ಮೂಲದ ಅಂಕುರ್ ಠಾಕೂರ್ ಸೇರಿ ಕೃತ್ಯ ಎಸಗಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಿದ್ದರು. ನಿಖಿಲ್ ಮತ್ತು ನಿಹಾರಿಕಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಜ ವಿಷಯ ಬಯಲಾಗಿತ್ತು. ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಎಂಬಾತನನ್ನು ತೆಲಂಗಾಣದಲ್ಲಿ ಕೊಲೆ ಮಾಡಿ, ಕೊಡಗಿನಲ್ಲಿ ಸುಟ್ಟು ಹಾಕಿದ್ದರು. ಆಸ್ತಿಗಾಗಿ ಪತ್ನಿ ನಿಹಾರಿಕಳೇ ಪ್ರಿಯಕರರ ಜೊತೆ ಸೇರಿ ಕೃತ್ಯ ಎಸಗಿದ್ದಾಳೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ‌

ತೆಲಂಗಾಣ ರಾಜ್ಯದ ಯಾಯತಿ ಜಿಲ್ಲೆಯವಳಾದ ನಿಹಾರಿಕಾಗೆ 10ನೇ ತರಗತಿಯಲ್ಲಿದ್ದಾಗಲೇ ಇಂಜಿನಿಯರ್ ಒಬ್ಬನ ಜೊತೆಗೆ ಮದುವೆ ಆಗಿತ್ತು. ಮೊದಲ ಗಂಡನಿಗೆ ಡೈವೋರ್ಸ್ ಕೊಟ್ಟು ಒಂದಷ್ಟು ಹಣ ಪಡೆದು ತನ್ನ ಶಿಕ್ಷಣ ಮುಂದುವರಿಸಿ ಬಿಟೆಕ್ ಪೂರೈಸಿದ್ದಳು.‌ ಹೈದರಾಬಾದ್ ನಲ್ಲಿ ವಿಪ್ರೊ ಸೇರಿದಂತೆ ಐಟಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಗಲೇ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಪರಿಚಯ ಆಗಿತ್ತು. ಆತನ ಆಸ್ತಿ ನೋಡಿ ಮದುವೆಯೂ ಆಗಿದ್ದಳು. ಆದರೆ ಈಕೆಯ ಸಂಸಾರ ಹೆಚ್ಚು ದಿನ ಇರಲಿಲ್ಲ. ಆತನಿಗೆ ಕೈಕೊಟ್ಟು ಕೆಲಸದ ನೆಪ ಹೇಳಿ ಹರಿಯಾಣಕ್ಕೆ ಹಾರಿದ್ದಳು. ಅಲ್ಲಿ ಮತ್ತೊಬ್ಬನಿಗೆ ವಂಚಿಸಿ ಜೈಲು ಸೇರಿದ್ದ ನಿಹಾರಿಕಾಗೆ ಜೈಲಿನಲ್ಲಿದ್ದ ಮಹಿಳೆಯ ಮಗ ಅಂಕುರ್ ಠಾಕೂರ್ ಗೆಳೆತನ ಆಗಿತ್ತು. ಅಂಕುರ್ ಜೊತೆಗೆ ಮತ್ತೆ ಬೆಂಗಳೂರಿಗೆ ಬಂದು ನೆಲೆಸಿದ್ದ ನಿಹಾರಿಕಾಗೆ ಇಲ್ಲಿ ಮತ್ತೊಬ್ಬನ ಜೊತೆಗೂ ಸಂಪರ್ಕ ಆಗಿತ್ತು. ಪಾರ್ಟಿಯಲ್ಲಿ ಪರಿಚಯವಾಗಿದ್ದ ಆಂಧ್ರ ಮೂಲದ, ಬೆಂಗಳೂರಿನಲ್ಲಿ ಪಶು ವೈದ್ಯನಾಗಿದ್ದ ನಿಖಿಲ್ ರೆಡ್ಡಿಯೂ ಈಕೆಯ ಲೋಹದ ಬಲೆಗೆ ಬಿದ್ದಿದ್ದಳು.‌ ಏಕಕಾಲದಲ್ಲಿ ಇಬ್ಬರ ಜೊತೆಗೂ ಪ್ರೀತಿಯ ಆಟದಲ್ಲಿದ್ದ ನಿಹಾರಿಕಾ ಇಬ್ಬರು ಗೆಳೆಯರ ಜೊತೆ ಸೇರಿ ತನ್ನ ಎರಡನೇ ಪತಿ, ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿಯಿಂದ ಹಣ ದೋಚುವ ಪ್ಲಾನ್ ಮಾಡಿದ್ದರು. 

ಇದಕ್ಕಾಗಿ ಅಂಕುರ್ ಮತ್ತು ನಿಹಾರಿಕಾ ಹೈದರಾಬಾದ್ ತೆರಳಿದ್ದರು.‌ ಹಣ, ಆಸ್ತಿ ಕೊಡುವಂತೆ ಒತ್ತಡ ಹಾಕಿದರೂ ಸೊಪ್ಪು ಹಾಕದ ಗಂಡನನ್ನು ಕೊನೆಗೆ ನಿನ್ನೊಂದಿಗೆ ಮಾತನಾಡಬೇಕು ಎಂದು ಹೇಳಿ ಹೈದರಾಬಾದಿನ ಒಂದು ಜಾಗಕ್ಕೆ ಕರೆಸಿಕೊಂಡಿದ್ದರು. ಆತನ ಕಾರಿನಲ್ಲಿಯೇ ರಮೇಶನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದರು. ಆತನ ಕಾರಿನಲ್ಲಿಯೇ ಬಳಿಕ ರಮೇಶ್ ಅಪಾರ್ಟ್ಮೆಂಟಿಗೆ ಹೋಗಿ ಆತನ ಮನೆಯಲ್ಲಿದ್ದ ಹಣ, ಆಸ್ತಿ ಪತ್ರಗಳನ್ನು ದೋಚಿದ್ದರು. ಬಳಿಕ ಪಶುವೈದ್ಯ ನಿಖಿಲ್ ಗೆ ಫೋನ್ ಮಾಡಿ ಹತ್ಯೆ ಮಾಡಿರುವ ವಿಷಯವನ್ನು ತಿಳಿಸಿದ್ದು ಆತನ ಸಲಹೆಯಂತೆ ಶವವನ್ನು ಕೊಡಗಿಗೆ ತಂದು ಸುಟ್ಟು ಹಾಕುವುದಕ್ಕೆ ಪ್ಲಾನ್ ಮಾಡಿದ್ದರು. ಹೈದರಾಬಾದಿನಿಂದ ಬೆಂಗಳೂರಿಗೆ ರಮೇಶನ ಕಾರಿನಲ್ಲೇ ಶವ ತಂದಿದ್ದ ಅಂಕುರ್ ಮತ್ತು ನಿಹಾರಿಕಾ ಇಡೀ ದಿನ ಬೆಂಗಳೂರಿನಲ್ಲಿ ರೆಸ್ಟ್ ಮಾಡಿದ್ದರು. ಅಂದು ರಾತ್ರಿಯೇ ಬೆಂಗಳೂರಿನಿಂದ ಕೊಡಗಿನತ್ತ ಬಂದು ಮಧ್ಯರಾತ್ರಿ ಸುಂಟಿಕೊಪ್ಪದಿಂದ ಎಂಟು ಕಿಮೀ ದೂರದ ಮಾದಾಪುರ ರಸ್ತೆಯ ಕಾಫಿ ತೋಟದಲ್ಲಿ ರಮೇಶನ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಕರ್ಗತ್ತಲ ರಾತ್ರಿಯಲ್ಲಿ ಶವ ತಂದು ಸುಟ್ಟು ಹಾಕಿ ಬಂದ ದಾರಿಯಲ್ಲೇ ಹಿಂತಿರುಗಿದ್ದರು. 

ಎಲ್ಲಿಯ ತೆಲಂಗಾಣ, ಎಲ್ಲಿಯ ಸುಂಟಿಕೊಪ್ಪ ಎಂದನಿಸ್ಕೊಂಡು ಏನೂ ಆಗಿಲ್ಲ ಎಂಬಂತೆ ನಿಖಿಲ್ ಮತ್ತು ನಿಹಾರಿಕಾ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅಂಕುರ್ ನೇರವಾಗಿ ಹರ್ಯಾಣಕ್ಕೆ ಹಿಂತಿರುಗಿದ್ದ. ಹೀಗಾಗಿ ಇವರ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಯಾವಾಗ ಕಾರಿನ ನಂಬರ್ ಗೊತ್ತಾಗಿತ್ತೋ ಆಗ ಕೊಡಗು ಪೊಲೀಸರಿಗೆ ಕೊಲೆಯ ಜಾಡು ಸಿಕ್ಕಿಬಿಟ್ಟಿತ್ತು. ಇಬ್ಬರನ್ನು ಎತ್ತಾಕಿ ಬಂದು ತಮ್ಮದೇ ಧಾಟಿಯಲ್ಲಿ ಟ್ರೀಟ್ಮೆಂಟ್ ನೀಡುತ್ತಿದ್ದಂತೆ ಸತ್ಯ ಬಯಲಾಗಿದೆ. ಆದರೆ ಹತ್ಯೆ ಮಾಡಿದ್ದ ಅಂಕುರ್ ಠಾಕೂರ್ ಮಾತ್ರ ಹರಿಯಾಣದ ಮೂಲಕ ದೆಹಲಿಗೆ ಹೋಗಿ ತಲೆಮರೆಸಿಕೊಂಡಿದ್ದ. ಅಲ್ಲಿ ಐದಾರು ದಿನ ಅಲೆದಿದ್ದ ಕೊಡಗಿನ ಪೊಲೀಸರು ಕೊನೆಗೂ ದೆಹಲಿಯ ಡಾಬಾ ಒಂದರಲ್ಲಿ ಊಟಕ್ಕೆ ಕುಳಿತಿದ್ದ ಅಂಕುರ್ ನನ್ನು ಹೆಡೆಮುರಿ ಕಟ್ಟಿದ್ದರು. 

ಒಬ್ಬರಲ್ಲ ಐವರು ಪುರುಷರ ಬಾಳಿನಲ್ಲಿ ಚೆಲ್ಲಾಟವಾಡಿದ್ದ ನಿಹಾರಿಕಾ ಎನ್ನುವ ಹೆಣ್ಣು ಮಗಳು ತನ್ನ ಕಾಮದಾಟ, ಹಣಕ್ಕಾಗಿ ಏನೂ ಮಾಡಬಲ್ಲೆ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದು ನಿಜಕ್ಕೂ ದುರಂತವೇ ಸರಿ.

In a swift and intense investigation, Kodagu police have arrested three individuals in connection with the murder of Ramesh, a 54-year-old real estate businessman from Telangana. The case, which has garnered significant media attention, was cracked just 15 days after a half-decomposed body was discovered on October 8 in Panya Estate near Suntikoppa of Kodagu district. Authorities reported that the victim had allegedly been murdered elsewhere before his body was set ablaze with petrol, with investigators estimating the burning occurred three to four days prior to the gruesome discovery. This horrifying find left police scrambling to identify the victim, prompting an urgent investigation.