ಬ್ರೇಕಿಂಗ್ ನ್ಯೂಸ್
27-10-24 08:57 pm Mangalore Correspondent ಕ್ರೈಂ
ಮಂಗಳೂರು, ಅ.27: ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೆಂದು ಹೇಳಿ ಕರೆ ಮಾಡಿದ ಅಪರಿಚಿತರು, ನಿಮ್ಮ ವಿರುದ್ಧ ಮುಂಬೈನಲ್ಲಿ ಸಿಬಿಐ ಕೇಸು ದಾಖಲಾಗಿದೆಯೆಂದು ನಂಬಿಸಿ ತನಿಖೆ ಮಾಡುವ ನೆಪದಲ್ಲಿ 50 ಲಕ್ಷ ರೂಪಾಯಿ ಹಣವನ್ನು ಪಡೆದು ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಬರ್ ವಂಚಕರು ದಿನಕ್ಕೊಂದು ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿದ್ದರೂ, ಮತ್ತೆ ಮತ್ತೆ ವಿದ್ಯಾವಂತ ಮತ್ತು ಹಣವಂತರೇ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಅ.11ರಂದು ಮಧ್ಯಾಹ್ನ ಮಹಾರಾಷ್ಟ್ರದ ಅಗ್ರಿಪಥ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿನಯ ಕುಮಾರ್ ಎಂದು ಪರಿಚಯ ಮಾಡಿಕೊಂಡು ಕರೆ ಮಾಡಿದ್ದ ವ್ಯಕ್ತಿಯೊಬ್ಬ ನಿಮ್ಮ ಮೊಬೈಲಿನಿಂದ ಅಕ್ರಮ ಜಾಹೀರಾತಿನ ಬಗ್ಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ದಾಖಲಾಗಿದೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳು ಫೋನ್ ಮಾಡುತ್ತಾರೆ ಎಂದು ತಿಳಿಸಿದ್ದ.
ಆಬಳಿಕ ಸಿಬಿಐ ಅಧಿಕಾರಿಯೆಂದು ಹೇಳಿಕೊಂಡು ಆಕಾಶ್ ಕುಲ್ಲಹಾರಿ ಎಂಬ ಹೆಸರಿನಲ್ಲಿ ಮತ್ತೊಬ್ಬ ಕರೆ ಮಾಡಿದ್ದು, ನಿಮ್ಮ ಮೇಲೆ ನರೇಶ್ ಗೋಯಲ್ ಎಂಬವರ ಮನೆ ಮೇಲೆ ದಾಳಿ ನಡೆಸಿದಾಗ ಎಟಿಎಂ ಕಾರ್ಡ್ ಸಿಕ್ಕಿದೆ. ಅದರಲ್ಲಿ 20 ಜನರು ಮುಂಬೈನ ನಿಮ್ಮ ಕೆನರಾ ಬ್ಯಾಂಕಿನ ಖಾತೆಗೆ ಎರಡು ಕೋಟಿ ಹೂಡಿಕೆ ಮಾಡಿದ ಬಗ್ಗೆ ಮನಿ ಲಾಂಡರಿಂಗ್ ಕೇಸು ದಾಖಲಾಗಿದೆ. ಇದರಂತೆ ನಿಮ್ಮನ್ನು ಸಿಬಿಐ ಅಧಿಕಾರಿಗಳು ಡಿಜಿಟಲ್ ಅರೆಸ್ಟ್ ಮಾಡುತ್ತಾರೆಂದು ತಿಳಿಸಿದ್ದು, ಈ ಬಗ್ಗೆ ನೀವು ಸುಪ್ರೀಂ ಕೋರ್ಟಿಗೆ ದಾಖಲಾತಿಗಳೊಂದಿಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ. ಕೋರ್ಟಿಗೆ ಹಾಜರಾಗಲು ಸಾಧ್ಯವಾಗದೇ ಇದ್ದರೆ, ನಾವೇ ಆನ್ಲೈನ್ ಮೂಲಕ ತನಿಖೆ ಮಾಡುತ್ತೇವೆ, ಇದಕ್ಕೆ ನಿಮ್ಮ ಅನುಮತಿ ಬೇಕೆಂದು ಹೇಳಿದ್ದಾರೆ.
ಮರುದಿನ ಅದೇ ಆಕಾಶ್ ಕುಲ್ಲಹಾರಿ ಎಂಬ ಹೆಸರಿನಲ್ಲಿ ವಾಟ್ಸಾಪ್ ಕರೆ ಮಾಡಿದ್ದು, ನಿಮ್ಮ ಹೆಸರಿನಲ್ಲಿರುವ ಎಲ್ಲ ಬ್ಯಾಂಕ್ ಖಾತೆಗಳು, ಫಿಕ್ಸೆಡ್ ಡಿಪಾಸಿಟ್ ಬಗ್ಗೆ ತಿಳಿಸುವಂತೆ ಕೇಳಿದ್ದಾನೆ. ಅಲ್ಲದೆ, ಈ ಮೊತ್ತವನ್ನು ನೀವು ಆರ್ ಬಿಐಗೆ ವರ್ಗಾವಣೆ ಮಾಡಬೇಕು, ಇದರ ಬಗ್ಗೆ ಬ್ಯಾಂಕಿನವರಿಗೆ ಸಂಶಯ ಬರುವ ಕಾರಣ ನೀವು ಶಿವಾನಿ ಎಂಟರ್ ಪ್ರೈಸಸ್, ಬಂಧನ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ. ಅದರಂತೆ, ದೂರುದಾರ ವ್ಯಕ್ತಿಯು ಅ.19ರಂದು 50 ಲಕ್ಷ ರೂ. ಹಣವನ್ನು ಅಪರಿಚಿತ ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೆ, ಅದರ ರಶೀದಿಯನ್ನು ಆ ವ್ಯಕ್ತಿಗೆ ವಾಟ್ಸಾಪ್ ಮಾಡಿದ್ದಾರೆ.
ವಂಚಕ ಈ ಹಣವನ್ನು ಮೂರು ದಿನಗಳ ಬಳಿಕ ಹಿಂತಿರುಗಿಸುವುದಾಗಿ ಹೇಳಿದ್ದಾರೆ. ಇದು ಸತ್ಯವೆಂದೇ ನಂಬಿದ್ದ ವ್ಯಕ್ತಿ ಅ.23ರಂದು ಆತನಿಗೆ ವಾಟ್ಸಾಪ್ ಕರೆ ಮಾಡಿ, ತನ್ನ ಹಣವನ್ನು ಮಂಗಳೂರಿನ ಎಂಸಿಸಿ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. ಆದರೆ, ಆ ವ್ಯಕ್ತಿಯು ಅದು ಆಗಲ್ಲ, ನೀವು ಕಳಿಸಿದ ಖಾತೆಗೇ ನಾವು ಹಣ ಹಿಂತಿರುಗಿಸುತ್ತೇವೆ. ಆದರೆ ಆ ಖಾತೆಯಲ್ಲಿ ಇನ್ನುಳಿದಿರುವ ಹಣವನ್ನೂ ಕಳಿಸಿಕೊಡಿ ಎಂದು ಒತ್ತಾಯ ಮಾಡಿದ್ದಾನೆ. ಮತ್ತಷ್ಟು ಹಣ ಕೇಳಿದ್ದರಿಂದ ಈ ವ್ಯಕ್ತಿಗೆ ಪಂಗನಾಮ ಹಾಕಿರುವ ಬಗ್ಗೆ ಸಂಶಯ ಬಂದಿದ್ದು, ಕದ್ರಿ ಪೊಲೀಸ್ ಠಾಣೆಗೆ ಬಂದು ಮೋಸದ ಜಾಲದ ಬಗ್ಗೆ ಹೇಳಿಕೊಂಡಿದ್ದಾರೆ.
In a recent incident, a woman reportedly lost Rs 50 lakh to fraudsters who impersonated law enforcement officials to deceive her.
According to the complaint, on Oct 11, at around 3 pm, she received a call from an individual identifying himself as Vinay Kumar, a Sub-Inspector from Agripath Police Station, Maharashtra.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm