ಬ್ರೇಕಿಂಗ್ ನ್ಯೂಸ್
31-10-24 08:04 pm HK News Desk ಕ್ರೈಂ
ದಾವಣಗೆರೆ, ಅ 31: ನಗರದ ನ್ಯಾಮತಿಯಲ್ಲಿರುವ ಎಸ್ ಬಿಐ ಬ್ಯಾಂಕ್ ಲಾಕರ್‌ನಲ್ಲಿದ್ದ ಸುಮಾರು 13 ಕೋಟಿ ರೂ. ಮೌಲ್ಯದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಎರಡು ದಿನಗಳ ಸತತ ರಜೆಯಿರುವ ಸಂದರ್ಭವನ್ನು ಗ್ಯಾಸ್ ಕಟರ್ ಬಳಸಿಕೊಂಡು ಕಿಟಕಿ ಸರಳುಗಳನ್ನು ಮುರಿದಿರುವ ಕಳ್ಳರು ಬಳಿಕ, ಬ್ಯಾಂಕ್ ಒಳಗೆ ನುಗಿದ್ದಾರೆ. ಬ್ಯಾಂಕಿನ ಸರಳುಗಳನ್ನು ಮುರಿದು ಒಳಪ್ರವೇಶಿಸಿರುವ ಕಳ್ಳರು, ಅಲ್ಲಿನ ಲಾಕರ್ ಗಳಲ್ಲಿದ್ದ ಆಭರಣಗಳು, ಹಣವನ್ನು ದೋಚಿದ್ದಾರೆ. ನ್ಯಾಮತಿ ಪಟ್ಟಣದ ನೆಹರೂ ರಸ್ತೆಯಲ್ಲಿರುವ ಎಸ್ ಬಿಐನಲ್ಲಿ ಈ ದರೋಡೆ ನಡೆದಿದೆ. ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಅಕ್ಟೋಬರ್ 27ರ ಭಾನುವಾರ ಈ ಘಟನೆ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಎಸ್ ಬಿ ಐ ಬ್ಯಾಂಕ್ ನ ಎಡಭಾಗದಲ್ಲಿರುವ ಕಿಟಕಿಯ ಮೂಲಕ ಕಳ್ಳರು ಬ್ಯಾಂಕ್ ಪ್ರವೇಶಿಸಿದ್ದಾರೆ. ಮೂರು ಲಾಕರ್ ಡೋರ್ ಗಳನ್ನ ಮುರಿಯಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಿದರು. ಆದರೆ, ಒಂದು ಲಾಕರ್‌ನ್ನು ಮಾತ್ರ ಯಶಸ್ವಿಯಾಗಿ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕಳ್ಳರು ಪತ್ತೆಯಿಂದ ತಪ್ಪಿಸಿಕೊಳ್ಳಲು ಸಿಸಿಟಿವಿ ಕ್ಯಾಮೆರಾಗಳು ಮತ್ತು ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಎರಡು ದಿನ ಬ್ಯಾಂಕಿಗೆ ರಜೆ ಇದ್ದಿದ್ದನ್ನು ಗಮನಿಸಿದ್ದ ಕಳ್ಳರು ಮಾಸ್ಟರ್ ಪ್ಲಾನ್ ನಡೆಸಿದ್ದು, ದುಷ್ಕರ್ಮಿಗಳು ಮಾಹಿತಿ ಸಿಗಬಾರದು ಎಂದು ಬ್ಯಾಂಕಿನ ಸಿಸಿಟಿವಿ ಧ್ವಂಸಗೊಳಿಸಿದ್ದಾರೆ. ಡಿವಿಆರ್ ಸಹ ಹೊತ್ತುಕೊಂಡು ಹೋಗಿದ್ದಾರೆ. ಕಳ್ಳರು ಬ್ಯಾಂಕ್ ಒಳಗೆ ಬರುತ್ತಿದ್ದಂತೆ ಸಿಸಿಟಿವಿ, ಸೈರನ್ ಸ್ಥಗಿತಗೊಳಿಸಿದ್ದಾರೆ. 30 ಲಕ್ಷ ಹಣ, ಚಿನ್ನಾಭರಣವಿದ್ದ ಎರಡು ಲಾಕರ್‌ಗಳನ್ನು ಕತ್ತರಿಸಲು ಸಹ ಪ್ರಯತ್ನ ನಡೆಸಿದ್ದಾರೆ. ಆದರೆ ಗ್ಯಾಸ್ ಖಾಲಿಯಾದ ಕಾರಣ, ಸಮಯ ಮೀರಿದ್ದ ಕಾರಣದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಘಟನೆ ತಿಳಿದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ನಡೆಸಿ, ಶ್ವಾನದಳ, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡರು. ಆದರೆ ದುಷ್ಕರ್ಮಿಗಳು ಕೃತ್ಯ ನಡೆದ ಸ್ಥಳದಲ್ಲಿ ಶ್ವಾನದಳಕ್ಕೆ ಗುರುತು ಸಿಗಬಾರದು ಎಂದು ಖಾರದಪುಡಿಯನ್ನು ಚೆಲ್ಲಿದ್ದಾರೆ. ಶ್ವಾನದಳ ವಾಸನೆ ಗ್ರಹಿಸುತ್ತಾ ಸವಳಂಗ ರಸ್ತೆಯ ಸಾಲಬಾಲು ಗ್ರಾಮದ ತನಕ ಸಾಗಿವೆ.
ಈ ಕುರಿತು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಬ್ಯಾಂಕಿಗೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಹಳೆಯ ಕಾಲದ ಸೈರನ್ ವ್ಯವಸ್ಥೆಯನ್ನು ಹಾಕಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಭದ್ರತಾ ಲೋಪದಿಂದಲೇ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಈ ದರೋಡೆ ಪ್ರಕರಣದ ತನಿಖೆಗೆ ಐವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದ 5 ತಂಡಗಳನ್ನು ರಚನೆ ಮಾಡಲಾಗಿದೆ. 10 ಜನ ಪಿಎಸ್‌ಐ ಸೇರಿ ಹಲವು ಸಿಬ್ಬಂದಿಗಳು ತಂಡದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
Robbers steal 8 crore worth cash and gold from SBI bank in Davanagere. Robbers have disconnected the CCTV cameras and also put chillies on ground to confuse the dog squad.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm