ಬ್ರೇಕಿಂಗ್ ನ್ಯೂಸ್
03-11-24 07:01 pm Mangalore Correspondent ಕ್ರೈಂ
ಮಂಗಳೂರು, ನ.3: ಅಮೆಜಾನ್ ಕಂಪನಿಯನ್ನು ಆನ್ಲೈನ್ ಮಾರುಕಟ್ಟೆಯ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು ದೋಚುತ್ತಿದ್ದ ಇಬ್ಬರು ಕತರ್ನಾಕ್ ಕಳ್ಳರು ಐಷಾರಾಮಿ ಜೀವನ ಮಾಡುತ್ತಿದ್ದರು. ನಗರದಿಂದ ನಗರಕ್ಕೆ ದೇಶಾದ್ಯಂತ ಆನ್ಲೈನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಪಡೆಯಲು ವಿಮಾನದಲ್ಲಿಯೇ ಬರುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ರಾಜಸ್ಥಾನ ಮೂಲದ ರಾಜಕುಮಾರ್ ಮೀನಾ ಮತ್ತು ಸುಭಾಸ್ ಗುರ್ಜರ್ ಎಂಬಿಬ್ಬರನ್ನು ಮಂಗಳೂರಿನ ಉರ್ವಾ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇವರು ಎಷ್ಟು ಕತರ್ನಾಕ್ ಆಗಿದ್ದರು ಅಂದ್ರೆ, ದೇಶದ ಯಾವುದೇ ನಗರದಲ್ಲಿದ್ದರೂ ಜಿಪಿಎಸ್ ಟ್ರ್ಯಾಕಿಂಗನ್ನೇ ಹ್ಯಾಕ್ ಮಾಡಿ ತಾವು ಮಂಗಳೂರು, ಮೈಸೂರು, ಚೆನ್ನೈ ಅಥವಾ ಇನ್ನಾವುದೇ ನಗರದಲ್ಲಿ ಇರುವಂತೆ ತಮ್ಮ ಲೊಕೇಶನ್ ಹಾಕಿ, ಸಾಮಗ್ರಿಗಳನ್ನು ಆರ್ಡರ್ ಮಾಡುತ್ತಿದ್ದರು. ಒಂದು ಆಂಡ್ರಾಯ್ಡ್ ಮೊಬೈಲ್ ಕೈಗೆ ಸಿಕ್ಕರೆ, ಎರಡೇ ನಿಮಿಷದಲ್ಲಿ ಇಡೀ ಪ್ರಪಂಚ ಜಾಲಾಡುವಷ್ಟರ ಮಟ್ಟಿಗೆ ತಾಂತ್ರಿಕ ನೈಪುಣ್ಯ ಹೊಂದಿದ್ದಾರೆ.
ಸದ್ಯಕ್ಕೆ ಅಮೆಜಾನ್ ಕಂಪನಿಗೆ ಸಂಬಂಧಿಸಿ ದೇಶದ 12 ವಿವಿಧ ನಗರಗಳಲ್ಲಿ ಮೋಸದ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಹೇಳುವ ಪ್ರಕಾರ, 95 ಶೇಕಡಾ ಕೇಸು ದಾಖಲಾಗದೇ ಇರುವ ಸಾಧ್ಯತೆಯೇ ಹೆಚ್ಚಂತೆ. ಸಣ್ಣ ಪುಟ್ಟ ಮೋಸಗಳಾದರೆ, ಸಾವಿರಾರು ಕೋಟಿ ವಹಿವಾಟು ನಡೆಸುವ ಅಮೆಜಾನ್ ಕಂಪನಿ ಅದಕ್ಕೆಲ್ಲ ಕೇಸು ಕೊಡುವ ಬಗ್ಗೆ ಮುಂದೆ ಬರುವುದಿಲ್ಲ. ಹೀಗಾಗಿ ಕೇಸು ದಾಖಲಾಗದೇ ಇರುವ ಸಾಧ್ಯತೆಯೇ ಹೆಚ್ಚಿದೆ. ಇದಲ್ಲದೆ, ದೇಶದಲ್ಲಿ ಫ್ಲಿಪ್ ಕಾರ್ಟ್ ಸೇರಿದಂತೆ ಹಲವಾರು ಕಂಪನಿಗಳು ಆನ್ಲೈನ್ ಮಾರ್ಕೆಟ್ ನಡೆಸುತ್ತವೆ. ಆ ಕಂಪನಿಗಳಿಗೂ ಇದೇ ರೀತಿಯ ಮೋಸ ಆಗಿರುವ ಸಾಧ್ಯತೆಯಿದೆ. ಅಲ್ಲದೆ, ಈ ಪ್ರಕರಣದಲ್ಲಿ ಕೇವಲ ಇಬ್ಬರು ಮಾತ್ರವಲ್ಲದೆ, ಆರ್ಡರ್ ಮೂಲಕ ಪಡೆದ ಸಾಮಗ್ರಿಗಳನ್ನು ಮಾರಾಟ ಮಾಡುವುದಕ್ಕೆ ಬೇರೆಯದ್ದೇ ಟೀಮ್ ಇರುವ ಸಾಧ್ಯತೆಯೂ ಇದೆ.
ಪೊಲೀಸರ ಪ್ರಕಾರ, ಇವರೇ ನಕಲಿ ಸಿಮ್, ನಕಲಿ ಹೆಸರುಗಳ ಮೂಲಕ ಓಎಲ್ ಎಕ್ಸ್ ಸೇರಿದಂತೆ ಬೇರೆ ಬೇರೆ ಸೋಶಿಯಲ್ ಮೀಡಿಯಾಗಳನ್ನು ನಡೆಸುತ್ತಿದ್ದರು. ಅದರ ಮೂಲಕ ಅಮೆಜಾನಲ್ಲಿ ಪಡೆದ ಲಕ್ಷಾಂತರ ಮೌಲ್ಯದ ಕ್ಯಾಮರಾ ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಪ್ರಕರಣದ ಬಗ್ಗೆ ಸುದ್ದಿಯಾದ ಬಳಿಕ ಇನ್ನಷ್ಟು ಆನ್ಲೈನ್ ಮೋಸದ ಪ್ರಕರಣಗಳ ಬಗ್ಗೆ ದೂರು ಬರಬಹುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.
ಉರ್ವಾ ಠಾಣೆಯಲ್ಲಿ ಸೆ.21ರಂದು ಅಮೆಜಾನ್ ಪ್ರತಿನಿಧಿ ಮಹಮ್ಮದ್ ನಿಶಾಕ್ ದೂರು ನೀಡಿದ್ದರೂ, ಪ್ರಕರಣ ದಾಖಲಾಗಿದ್ದು ಅ.4ರಂದು. ಮೊದಲಿಗೆ ಪ್ರಕರಣದ ಬಗ್ಗೆ ಪೊಲೀಸರಿಗೂ ಕೇಸಿನ ಬಗ್ಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಬಳಿಕ ಬೆಂಗಳೂರಿನಿಂದ ಅಮೆಜಾನ್ ಕಂಪನಿಯ ವಿಜಿಲೆನ್ಸ್ ಅಧಿಕಾರಿಗಳು ಸಂಪರ್ಕಿಸಿದ ಬಳಿಕ ಪ್ರಕರಣದ ಮತ್ತಷ್ಟು ಮಾಹಿತಿಗಳು ಸಿಕ್ಕಿದ್ದವು. ಬೇರೆ ಬೇರೆ ಕಡೆ ಪ್ರಕರಣ ದಾಖಲಾಗಿರುವ ಮಾಹಿತಿಯೂ ಸಿಕ್ಕಿತ್ತು. ತಮಿಳುನಾಡಿನ ಸೇಲಂ ಜಿಲ್ಲೆಯ ಪಲ್ಲಪ್ಪಟ್ಟಿ ಠಾಣೆಯಲ್ಲಿ ಅದೇ ರೀತಿಯ ಪ್ರಕರಣ ದಾಖಲಾಗಿ ರಾಜಕುಮಾರ್ ಮೀನಾ ಎಂಬಾತನ ವಶಕ್ಕೆ ಪಡೆದಿರುವುದು ತಿಳಿದುಬಂದಿತ್ತು. ಅ.18ರಂದು ಮೀನಾನನ್ನು ಬಾಡಿ ವಾರೆಂಟ್ ಪಡೆದು ಉರ್ವಾ ಪೊಲೀಸರು ವಿಚಾರಣೆ ನಡೆಸಿದಾಗ, 4-5 ವರ್ಷಗಳಲ್ಲಿ ದೇಶಾದ್ಯಂತ ಮೋಸದ ಜಾಲ ನಡೆಸಿರುವುದು ಬೆಳಕಿಗೆ ಬಂದಿತ್ತು. ಮತ್ತೊಬ್ಬ ಆರೋಪಿ ಸುಭಾಸ್ ಗುರ್ಜರ್ ನನ್ನೂ ರಾಜಸ್ಥಾನದಲ್ಲಿ ಅರೆಸ್ಟ್ ಮಾಡಿದ್ದರು.
2024ರಲ್ಲಿ ಇವರ ವಿರುದ್ಧ 12 ಪ್ರಕರಣಗಳು ದೇಶದ ವಿವಿಧೆಡೆ ದಾಖಲಾಗಿವೆ. ನಮ್ಮ ಮಾಹಿತಿ ಪ್ರಕಾರ, ಅಂದಾಜು ಒಂದೂವರೆ ಕೋಟಿಯಷ್ಟು ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಆದರೆ ಅಮೆಜಾನ್ ಅಧಿಕಾರಿಗಳು 20-30 ಕೋಟಿ ಸಾಮಗ್ರಿ ಕಳ್ಳತನ ಆಗಿರುವ ಬಗ್ಗೆ ತಿಳಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟೇ ಪ್ರಕರಣ ದಾಖಲಾಗಬೇಕಷ್ಟೇ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
30 crore fraud to Amazon, two cyber criminals arrested in Mangalore, Urwa police inspector Bharathi has done a tremendous job in arresting the criminals. Headline karnataka has exposed detailed report of how these most wanted cyber criminals were working through thier mobile phones to cheat the gaint Amazon online company.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm