Bantwal temple robbery, Mangalore crime; ಬಂಟ್ವಾಳ ; ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ಬೆಳ್ಳಿ, ಚಿನ್ನಾಭರಣ ಕಳವು, ಮೂವರು ಕಳ್ಳರ ಚಹರೆ ಸಿಸಿಟಿವಿಯಲ್ಲಿ ಸೆರೆ, ಸುಳಿವು ಕೊಟ್ಟ ನಾಯಿ, ಕೈಯಲ್ಲಿ ಮಾರಕಾಸ್ತ್ರ ನೋಡಿ ಭಯಪಟ್ಟ ಅರ್ಚಕರು

05-11-24 12:50 pm       Mangaluru Correspondent   ಕ್ರೈಂ

ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ಎಂಬಲ್ಲಿ ಶ್ರೀ ದೇವಕಿಕೃಷ್ಣ ರವಳನಾಥ ದೇವಸ್ಥಾನದ ಬಾಗಿಲು ಮುರಿದು ದೇವರ ಗರ್ಭಗುಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳರು ಕಳವು ಮಾಡಿದ್ದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಂಟ್ವಾಳ, ನ.5: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ಎಂಬಲ್ಲಿ ಶ್ರೀ ದೇವಕಿಕೃಷ್ಣ ರವಳನಾಥ ದೇವಸ್ಥಾನದ ಬಾಗಿಲು ಮುರಿದು ದೇವರ ಗರ್ಭಗುಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳರು ಕಳವು ಮಾಡಿದ್ದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನೂರಾರು ವರ್ಷ ಹಳೆಯದಾದ ಸುಮಾರು ಒಂದೂವರೆ ಕೇಜಿ ತೂಕದ ದೇವರ ಬೆಳ್ಳಿಯ ಪೀಠ, ಚಿನ್ನದ ಮೂಗುತಿ, ದೇವರ ಕೊಡೆ ಸೇರಿದಂತೆ ಒಟ್ಟು 2 ಕೇಜಿ ಬೆಳ್ಳಿಯ ಆಭರಣಗಳು ಹಾಗೂ ಅಂದಾಜು ಮೂರು ಪವನ್ ತೂಕದ ಚಿನ್ನದ ಆಭರಣ ಕಳವಾಗಿದೆ. ಅ.4ರ ಸೋಮವಾರ ನಸುಕಿನಲ್ಲಿ 3.3ರ ವೇಳೆಗೆ ಮೂವರು ಆಗಂತುಕರು ದೇವಸ್ಥಾನದ ಹಿಂಬಾಗಿಲು ಮುರಿದು ಒಳನುಗ್ಗಿದ್ದಾರೆ. ಬಳಿಕ ದೇವಸ್ಥಾನದೊಳಗೆ ಸುತ್ತಾಡಿ ಗರ್ಭಗುಡಿಯೊಳಗೆ ನುಗ್ಗಿ ದೇವರ ಬೆಳ್ಳಿಯ ಪೀಠ ಹಾಗೂ ಬಂಗಾರದ ವಸ್ತುಗಳನ್ನು ತೆಗೆದು ಹೊರತಂದು ಗೋಣಿಯಲ್ಲಿ ತುಂಬಿಸಿದ್ದಾರೆ.

ಗೋಣಿಯನ್ನು ನೆಲದಲ್ಲಿ ಹಾಸಿ ಕಳವುಗೈದ ಆಭರಣಗಳನ್ನು ಒಂದರಲ್ಲಿಯೇ ತುಂಬಿಸಿ, ಅದನ್ನು ಕಟ್ಟಿ ಹೆಗಲಿಗೇರಿಸಿಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುತ್ತಿರುವುದು ಕಂಡುಬಂದಿದೆ. ಕಳ್ಳರು ದೇವಸ್ಥಾನಕ್ಕೆ ನುಗ್ಗಿದ್ದನ್ನು ದೇವಸ್ಥಾನದ ಸಮೀಪದಲ್ಲೇ ಇದ್ದ ಅರ್ಚಕರ ಸಾಕು ನಾಯಿ ಗಮನಿಸಿದ್ದು, ಜೋರಾಗಿ ಬೊಗಳಲಾರಂಭಿಸಿದೆ. ನಾಯಿಯ ನಿರಂತರ ಅರಚಾಟಕ್ಕೆ ಎಚ್ಚರಗೊಂಡ ಅರ್ಚಕರು ದೇವಸ್ಥಾನದತ್ತ ವೀಕ್ಷಿಸಿದಾಗ ಮತ್ತಷ್ಟು ಬೊಗಳಲಾರಂಭಿಸಿದೆ. ಬಳಿಕ ಅರ್ಚಕರು ಸಿಸಿಟಿವಿ ಗಮನಿಸಿದಾಗ, ಒಳಗೆ ಮೂವರು ಆಗಂತುಕರು ಚಿನ್ನಾಭರಣಗಳನ್ನು ಕಳವುಗೈಯುತ್ತಿರುವ ದೃಶ್ಯ ಕಂಡುಬಂದಿತ್ತು.

ಕೂಡಲೇ ಅರ್ಚಕರು ದೇವಸ್ಥಾನದ ಆಡಳಿತ ಸಂಚಾಲಕರಿಗೆ ಕರೆ ಮಾಡಿದ್ದು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದ ಮೂವರು ದೇವಸ್ಥಾನದೊಳಗಿದ್ದಾರೆ. ಒಬ್ಬನಿಗೆ ಹೋಗಲು ಭಯವಾಗುತ್ತಿದೆ, ತಕ್ಷಣ ನೀವು ಬನ್ನಿ ಎಂದು ಹೇಳಿದ್ದಾರೆ. ಅದರಂತೆ, ಅವರು ಬರುವಷ್ಟರಲ್ಲಿ ಕಳ್ಳರು ತಮ್ಮ ಕೃತ್ಯ ಮುಗಿಸಿ ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ದೇವಸ್ಥಾನದ ಆಡಳಿತ ಸಂಚಾಲಕ ರಮೇಶ್ ನಾಯಕ್ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

 A gang of thieves broke into the Sajeeru Sri Devakikrishna Ravalanatha Temple near Farangipete and made off with cash and gold ornaments worth Rs 2.3 lac in the early hours of Monday. The incident occurred around 3 am, when the gang broke through the back door and entered the sanctum sanctorum. They stole items including a 1.5 kg silver pedestal, a gold nose ring, a ceremonial umbrella, and various other valuables. I