ಬ್ರೇಕಿಂಗ್ ನ್ಯೂಸ್
09-11-24 10:03 pm Mangalore Correspondent ಕ್ರೈಂ
ಮಂಗಳೂರು, ನ.9: ಮುಲ್ಕಿ ಬಳಿಯ ಪಕ್ಷಿಕೆರೆ ಜನರು ಒಂದೇ ಕುಟುಂಬದ ಮೂವರ ಸಾವಿನ ಸುದ್ದಿ ಕೇಳಿ ಬೆಚ್ಚಿಬಿದ್ದಿದ್ದಾರೆ. ಆರು ವರ್ಷಗಳ ಹಿಂದೆ ಶಿವಮೊಗ್ಗ ಮೂಲದ ಯುವತಿ ಪ್ರಿಯಾಂಕ ಅವರನ್ನು ಮದುವೆಯಾಗಿದ್ದ ಕಾರ್ತಿಕ್ ಭಟ್ ದಂಪತಿಗೆ ನಾಲ್ಕು ವರ್ಷದ ಮುದ್ದಾದ ಗಂಡು ಮಗುವಿತ್ತು. ಸುಖ ಸಂಸಾರವೂ ಇತ್ತು. ಇಂಥ ಕುಟುಂಬ ಹಠಾತ್ತಾಗಿ ಸಾವಿನ ನಿರ್ಧಾರಕ್ಕೆ ಬಂದಿದ್ದು ಯಾಕೆ ಎನ್ನುವುದೇ ಅಲ್ಲಿ ಸೇರಿದ್ದವರ ಪ್ರಶ್ನೆಯಾಗಿತ್ತು.
ಪಕ್ಷಿಕೆರೆ ಬಳಿಯ ಕೆಮ್ರಾಲ್ ನಿವಾಸಿ ಜನಾರ್ದನ ಭಟ್ ಮತ್ತು ಶ್ಯಾಮಲಾ ದಂಪತಿಯ ಮೂವರು ಮಕ್ಕಳಲ್ಲಿ ಇಬ್ಬರು ಹೆಣ್ಮಕ್ಕಳು, ಏಕೈಕ ಪುತ್ರನೇ ಕಾರ್ತಿಕ್. ಪ್ರೀತಿಯ ಪುತ್ರನ ಹೆಸರಲ್ಲಿಯೇ ಜನಾರ್ದನ ಭಟ್, ಪಕ್ಷಿಕೆರೆಯಲ್ಲಿ 30 ವರ್ಷಗಳಿಂದ ಸಣ್ಣ ಹೊಟೇಲ್ ನಡೆಸುತ್ತಿದ್ದಾರೆ. ಹೆಣ್ಮಕ್ಕಳಿಗೆ ಮದುವೆಯಾದ ಬಳಿಕ ಪುತ್ರನಿಗೂ ಮದುವೆಯಾಗಿತ್ತು. ಮಗನ ಮದುವೆ ನಂತರವೇ ಇವರ ಕುಟುಂಬದಲ್ಲಿ ಬಿರುಗಾಳಿ ಎದ್ದಿತ್ತು. ಸೊಸೆಯಾಗಿ ಬಂದಿದ್ದ ಪ್ರಿಯಾಂಕ ಮತ್ತು ಅತ್ತೆ, ಮಾವನಿಗೆ ಸರಿ ಹೋಗುತ್ತಿರಲಿಲ್ಲ. ವೃದ್ಧ ತಂದೆ, ತಾಯಿ ಜೊತೆಗೆ ರಸ್ತೆ ಬದಿಯ ಫ್ಲಾಟಿನಲ್ಲಿ ನೆಲೆಸಿದ್ದರೂ, ಇವರದ್ದು ಒಡೆದ ಮನೆಯಾಗಿತ್ತು. ತಂದೆ, ತಾಯಿ ದಿನವೂ ಬೆಳಗ್ಗೆದ್ದು ಹೊಟೇಲಿಗೆ ಹೋಗುತ್ತಿದ್ದರೆ, ಕಾರ್ತಿಕ್ ದಂಪತಿ ತಮ್ಮ ಕೋಣೆಯಲ್ಲಿ ತಮ್ಮಷ್ಟಕ್ಕೇ ಗೊಣಗಿಕೊಂಡು ಇರುತ್ತಿದ್ದರು. ಇವರ ನಡುವಿನ ಕೋಪ ಎಷ್ಟೆಂದರೆ, ಮೂರು ವರ್ಷದಿಂದ ಮನೆಯಲ್ಲೇ ಇದ್ದ ತಂದೆ, ತಾಯಿ ಜೊತೆಗೆ ಮಾತನ್ನೇ ಬಿಟ್ಟಿದ್ದರಂತೆ.
ಸ್ಥಳೀಯ ಕೋಆಪರೇಟಿವ್ ಸೊಸೈಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎರಡು ತಿಂಗಳ ಹಿಂದೆ ಕೆಲಸವನ್ನೂ ತೊರೆದಿದ್ದ ಎನ್ನಲಾಗಿದೆ. ಇದರಿಂದಾಗಿ ಸ್ವಲ್ಪ ಹಣಕಾಸು ತೊಂದರೆ ಎದುರಾಗಿದ್ದರೂ ತೋರಿಸಿಕೊಂಡಿರಲಿಲ್ಲ. ಮಗುವನ್ನು ದಂಪತಿ ಜೊತೆಯಾಗೇ ಶಾಲೆಗೆ ಕರೆದೊಯ್ಯುತ್ತಿದ್ದರು. ಮೊನ್ನೆ ದೀಪಾವಳಿಯನ್ನೂ ಜೊತೆಗೇ ಆಚರಿಸಿಕೊಂಡಿದ್ದರು. ಮನೆ ಮುಂದೆ ಸಂಭ್ರಮದಿಂದಲೇ ಪಟಾಕಿಯನ್ನೂ ಒಡೆದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಪತ್ನಿ, ಮಗುವನ್ನು ಕೊಂದು ಆತ್ಮಹತ್ಯೆ
ಶುಕ್ರವಾರ ಮಧ್ಯಾಹ್ನ ಮುಲ್ಕಿ ಬಳಿಯ ಬೆಳ್ಳಾಯರು ಎಂಬಲ್ಲಿ ಯುವಕನೊಬ್ಬ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಪುಡಿ ಪುಡಿಯಾಗಿದ್ದು, ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಮುಲ್ಕಿ ಪೊಲೀಸರಿಗೆ ಲಭಿಸಿತ್ತು. ಯುವಕನ ದೇಹ ಛಿದ್ರಗೊಂಡಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಮುಲ್ಕಿಯ ರೈಲ್ವೇ ಪೊಲೀಸರು ಕೇಸು ದಾಖಲಿಸಿದ್ದರು. ಯುವಕನ ಮೃತದೇಹ ಸಿಕ್ಕಿದ ತುಸು ದೂರದಲ್ಲೇ ಬೈಕ್ ಒಂದು ಪತ್ತೆಯಾಗಿತ್ತು. ಆತನ ದೇಹದಲ್ಲಿ ಬೇರಾವುದೇ ಗುರುತು ಪತ್ರಗಳಿರಲಿಲ್ಲ. ಶನಿವಾರ ಬೆಳಗ್ಗೆ ಸ್ಥಳದಲ್ಲಿ ಬೈಕ್ ಕೀ ಸಿಕ್ಕಿದ್ದು ಬೈಕನ್ನು ಚೆಕ್ ಮಾಡಿದಾಗ, ಅದರಲ್ಲಿ ಆರ್ ಸಿ ಕಾರ್ಡ್ ಸಿಕ್ಕಿದ್ದರಿಂದ ಪಕ್ಷಿಕೆರೆಯ ವಿಳಾಸ ತೋರಿಸಿತ್ತು. ಪಕ್ಷಿಕೆರೆಯಲ್ಲಿ ಜನಾರ್ದನ ಭಟ್ ಹೊಟೇಲ್ ನಡೆಸುತ್ತಿದ್ದು, ಜನಾನುರಾಗಿ ವ್ಯಕ್ತಿಯಾಗಿದ್ದರು. ಅವರ ಮಗನೇ ಮೃತಪಟ್ಟ ಕಾರ್ತಿಕ್ ಎಂದು ತಿಳಿದು ಪೊಲೀಸರು ಅವರ ಬಳಿಗೆ ತೆರಳಿದ್ದರು.
30 ವರ್ಷಗಳಿಂದ ಹೊಟೇಲ್ ನಡೆಸುತ್ತಿದ್ದ ದಂಪತಿ
ಮಧ್ಯಾಹ್ನ 1.30ರ ಸುಮಾರಿಗೆ ಪೊಲೀಸರು ಜನಾರ್ದನ ಭಟ್ ಅವರ ಹೊಟೇಲಿಗೆ ತೆರಳಿ, ಕಾರ್ತಿಕ್ ಬಗ್ಗೆ ಕೇಳಿದಾಗ ನಿನ್ನೆ ಬೆಳಗ್ಗೆ ಮನೆಯಲ್ಲಿದ್ದರು. ಸಂಜೆ ಬಾಗಿಲು ಹಾಕ್ಕೊಂಡಿತ್ತು. ಇವತ್ತು ಬೆಳಗ್ಗೆ ಕಾಣಿಸಿರಲಿಲ್ಲ. ನಾವು ಬೆಳಗ್ಗೆಯೇ ಹೊಟೇಲಿಗೆ ಬಂದಿದ್ದವು ಎಂದು ತಿಳಿಸಿದ್ದಾರೆ. ಫೋನ್ ಮಾಡಿದರೆ ಮಗ ಮತ್ತು ಸೊಸೆಯ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಕೂಡಲೇ ಮನೆಗೆ ತೆರಳಿ, ಅವರಿದ್ದ ಕೋಣೆಯ ಬಾಗಿಲು ಒಡೆದು ನೋಡಿದಾಗ ಬೆಡ್ ನಲ್ಲಿ ಮಗು ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿತ್ತು. ಅಲ್ಲಿಯೇ ಕೆಳಗಡೆ ಸೊಸೆ ಪ್ರಿಯಾಂಕ ಮೃತದೇಹ ಪತ್ತೆಯಾಗಿದೆ. ಕಾರ್ತಿಕನ ವೃದ್ಧ ತಂದೆ, ತಾಯಿ ಅದೇ ಮನೆಯಲ್ಲಿ ನಿನ್ನೆ ರಾತ್ರಿ ಕಳೆದಿದ್ದರೂ, ಮನೆಯಲ್ಲಿ ಸೊಸೆ, ಮಗು ಮೃತಪಟ್ಟಿರುವುದು ಅವರ ಗಮನಕ್ಕೆ ಬಂದಿರಲಿಲ್ಲ.
ಒಂದೇ ಮನೆಯಲ್ಲಿದ್ದರೂ ಮಗ, ಸೊಸೆ, ದಿನವೂ ಹೊಟೇಲೇ ತಮ್ಮ ಜಗತ್ತು ಅಂದ್ಕೊಂಡಿದ್ದ ಜನಾರ್ದನ ಭಟ್ ಮತ್ತು ಶ್ಯಾಮಲಾ ಜೊತೆಗೆ ಮಾತುಕತೆ ಇರಲಿಲ್ಲ. ಹೀಗಾಗಿ ಕೆಲವೊಮ್ಮೆ ಮಗ, ಸೊಸೆ ಮನೆಯಿಂದ ಹೊರಗೆ ಹೋಗುತ್ತಿದ್ದರೂ, ತಡವಾಗಿ ಮನೆಗೆ ಬರುತ್ತಿದ್ದರೂ, ಇವರು ಚಿಂತೆ ಮಾಡುತ್ತಿರಲಿಲ್ಲ. ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ (ನ.8) ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿ ಮತ್ತು ಮಗುವನ್ನು ಗ್ಲಾಸಿನ ಚೂರಿನಿಂದ ತಿವಿದು ಹತ್ಯೆ ಮಾಡಲಾಗಿದೆ. ಅಲ್ಲದೆ, ಮನೆಯ ಕೋಣೆಯಲ್ಲಿ ಸೀರೆಯನ್ನು ಬಿಗಿದ ರೀತಿ ಕಂಡುಬಂದಿದ್ದು, ಕಾರ್ತಿಕ್ ಅದರಲ್ಲಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎನ್ನುವ ಸಂಶಯ ವ್ಯಕ್ತವಾಗಿದೆ. ಅಲ್ಲದೆ, ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸುದೀರ್ಘ ಡೆತ್ ನೋಟ್ ಇದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆದಿಟ್ಟಿದ್ದಾನೆ.
ತಂದೆ, ತಾಯಿಗೆ ಶವ ನೀಡಬೇಡಿ
ತಮ್ಮ ಶವಗಳನ್ನು ಪತ್ನಿಯ ತಂದೆ, ತಾಯಿಗೆ ನೀಡುವಂತೆ ಹೇಳಿದ್ದು, ತಂದೆ, ತಾಯಿ ತಮ್ಮ ಅಂತ್ಯ ಸಂಸ್ಕಾರ ಮಾಡಬಾರದು ಎಂದು ಬರೆದಿಟ್ಟಿದ್ದಾನೆ. ಅಲ್ಲದೆ, ತನಗೆ ಸೇರಬೇಕಾದ ಆಸ್ತಿಯ ವಿಚಾರವನ್ನೂ ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಬರೆಯಲಾಗಿದೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬುದನ್ನೂ ಬರೆಯಲಾಗಿದೆ. ಕಾರ್ತಿಕ್ ಪತ್ನಿ ಪ್ರಿಯಾಂಕ ಶಿವಮೊಗ್ಗ ಮೂಲದವರಾಗಿದ್ದು, ಆಕೆಯ ಹೆತ್ತವರು ಬಂದ ಬಳಿಕವೇ ಪೋಸ್ಟ್ ಮಾರ್ಟಂ ನಡೆಸಲಾಗುವುದು ಎಂದು ಸ್ಥಳಕ್ಕೆ ಬಂದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಕಾರ್ತಿಕ್ ಪತ್ನಿ ಪ್ರಿಯಾಂಕ ಗರ್ಭಿಣಿ ಎನ್ನುವ ವಿಷಯವೂ ಕೇಳಿಬರುತ್ತಿದೆ. ಮನೆಯಲ್ಲಿ ಕಲಹ, ಕೈಯಲ್ಲಿ ಕೆಲಸವೂ ಇಲ್ಲ ಎನ್ನುವ ನೋವಿನಲ್ಲೋ ಏನೋ ಕಾರ್ತಿಕ್ ದುಡುಕಿನ ನಿರ್ಧಾರಕ್ಕೆ ಬಂದಿದ್ದಾನೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹ, ಅತ್ತೆ- ಸೊಸೆ ಜಗಳದ ಸಮಸ್ಯೆ ಕೇಳಿಬಂದಿದ್ದು, ಇಷ್ಟಕ್ಕೇ ಕಾರ್ತಿಕ್ ತನ್ನ ಪತ್ನಿ, ಮಗುವನ್ನು ಸಾಯಿಸಿ ತಾನೂ ಸಾವಿಗೆ ಶರಣಾದನೇ ಅನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಅತ್ತೆ –ಸೊಸೆ ಜಗಳ ಇರುವುದು ಸಮಾಜದಲ್ಲಿ ಸಾಮಾನ್ಯ. ಹಾಗಂತ, ಆ ಒಂದು ಗಲಾಟೆಗೆ ತಮ್ಮ ಬದುಕನ್ನೇ ಅಂತ್ಯಗೊಳಿಸುವುದು, ಬಾಳಿ ಬದುಕಬೇಕಾದ ಜೀವಗಳನ್ನು ಕೊಲ್ಲುವುದು, ಬದುಕೇ ಬೇಡ ಎಂದುಕೊಂಡು ಸಾವಿನ ದಾರಿ ಹಿಡಿಯುವುದು ಒಂದು ಕ್ಷಣದ ಸಿಟ್ಟು, ಚಿಂತೆಯಿಂದ ಹುಟ್ಟುವ ದುಡುಕಿನ ನಿರ್ಧಾರವಷ್ಟೇ.
Mangalore Mulki Pakshikere double murder case, reason for murder and suicide revealed. In a shocking incident, a man was found dead on the railway track in Bellayuru village under the jurisdiction of Mulki police station. The unidentified man reportedly ended his life by placing his head on the track. During the investigation, police recovered a scooter key and house keys near the body.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:13 pm
Udupi Correspondent
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
15-07-25 06:52 pm
Bangalore Correspondent
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am