ಬ್ರೇಕಿಂಗ್ ನ್ಯೂಸ್
10-11-24 10:53 pm Mangalore Correspondent ಕ್ರೈಂ
ಮಂಗಳೂರು, ನ.10: ಹುಡುಗಿ ಹುಡುಕಿ ಬಂದನೆಂಬ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬನಿಗೆ ಯುವಕರ ತಂಡವೊಂದು ಕಟ್ಟಿ ಹಾಕಿ ಥಳಿಸಿ ಚಿತ್ರಹಿಂಸೆ ಕೊಟ್ಟು ನೈತಿಕ ಪೊಲೀಸ್ ಗೂಂಡಾಗಿರಿ ಮೆರೆದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಂಚಿನಡ್ಕ ಪದವಿನಲ್ಲಿ ನಡೆದಿದೆ.
ಮಹಮ್ಮದ್ ಮುಸ್ತಾಫ (21) ಎಂಬ ಯುವಕನಿಗೆ ಕಟ್ಟಿ ಹಾಕಿ ಅರೆಬೆತ್ತಲೆ ಮಾಡಿ ಚಿತ್ರಹಿಂಸೆ ನೀಡಿದ್ದು ಇದರ ವಿಡಿಯೋ ವೈರಲ್ ಆಗಿದೆ. ನ.8ರಂದು ಘಟನೆ ನಡೆದಿದ್ದು ರಾತ್ರಿ ವೇಳೆ ಸ್ಥಳೀಯರು ಗುಂಪು ಸೇರಿ ಹಲ್ಲೆಗೈದಿದ್ದಾರೆ. ಮಹಮ್ಮದ್ ಮುಸ್ತಾಫ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಮುಸ್ತಾಫನಿಗೆ ದೂರದ ಸಂಬಂಧಿಯಾಗಿರುವ ಹುಡುಗಿಯೊಬ್ಬಳು ಕಂಚಿನಡ್ಕ ಪದವಿನ ತನ್ನ ಮನೆಗೆ ಬರಹೇಳಿದ್ದು ಅದರಂತೆ ತೆರಳಿದ್ದ ಯುವಕನಿಗೆ ಸ್ಥಳೀಯ ಯುವಕರು ಸೇರಿ ಕಟ್ಟಿ ಹಾಕಿ ಥಳಿಸಿದ್ದಾರೆ. ಮುಖ, ಕೈಯಲ್ಲಿ ರಕ್ತ ಬರುವಷ್ಟು ಥಳಿಸಿದ್ದು ಆತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಗುಂಪು ಹಲ್ಲೆ ನಡೆಸಿದ ಕಂಚಿನಡ್ಕಪದವು ನಿವಾಸಿಗಳಾದ ಮಹಮ್ಮದ್ ಸಫ್ವಾನ್ (25), ಮಹಮ್ಮದ್ ರಿಜ್ವಾನ್ (25), ಇರ್ಫಾನ್ (27), ಅನೀಸ್ ಅಹ್ಮದ್(19), ನಾಸೀರ್ (27) ಮತ್ತು ಶಾಕೀರ್ (18) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಕಲಂ 115(2), 126(2), 189(2), 190, 191(2), 351 (2), 352, 109, 117 (4) ಸೆಕ್ಷನ್ ಪ್ರಕಾರ ಕೇಸು ದಾಖಲಾಗಿದೆ.
Youth stripped naked, assulted for visiting girls house at night at bengare in Mangalore, Video viral. Mohammed Mustafa, a resident of Bengare in Mangaluru, was reportedly attacked by a mob who tied him to a pole, stripped him half-naked.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm