ಬ್ರೇಕಿಂಗ್ ನ್ಯೂಸ್
16-11-24 08:05 pm Bangalore Correspondent ಕ್ರೈಂ
ಬೆಂಗಳೂರು, ನ.16: ಅಪ್ಪಾ.. ಅಪ್ಪ.. ನಂಗೆ ಹೊಸ ಮೊಬೈಲ್ ಕೊಡಿಸಪ್ಪಾ.. ಇಲ್ಲ ಅಂದ್ರೆ ಮನೆಯಲ್ಲಿರುವ ಹಳೆಯ ಮೊಬೈಲ್ ಅನ್ನೇ ರಿಪೇರಿ ಮಾಡ್ಸು ಅಪ್ಪಾ.. ಎಂದು ಕೇಳಿದ 14 ವರ್ಷದ ಮಗನನ್ನ ತಂದೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ನಿನ್ನೆ ತಡರಾತ್ರಿ ವೇಳೆ ಈ ದುರ್ಘಟನೆ ನಡೆದಿದೆ. ತೇಜಸ್ (14) ತಂದೆಯಿಂದಲೇ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಮಗ. ತಂದೆ ರವಿಕುಮಾರ್ ಆರೋಪಿ ಆಗಿದ್ದಾನೆ.
ಆರೋಪಿ ರವಿ ಕುಮಾರ್ ಬೆಂಗಳೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಾ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದರೆ, ಅಪ್ಪನಿಗೆ ಪ್ರತಿನಿತ್ಯ ಒಂದೊಂದೇ ಬೇಡಿಕೆ ಇಡುತ್ತಿದ್ದ ಮಗನಿಂದ ಅಪ್ಪನಿಗೆ ಬೇಸರ ಉಂಟಾಗುತ್ತಿತ್ತು. ಆದರೆ, ಇತ್ತೀಚೆಗೆ ಅಪ್ಪಾ.. ನನ್ನ ಎಲ್ಲ ಫ್ರೆಂಡ್ಸ್ ಬಳಿ ಮೊಬೈಲ್ ಇದೆ. ನೀನು ನನಗೆ ಹೊಸ ಫೋನ್ ಕೊಡಿಸು ಎಂದಿದ್ದಾನೆ. ನಿನಗೆ ಹೊಸ ಫೋನ್ ಕೊಡಿಸಲು ಆಗದಿದ್ದರೆ, ಮನೆಯಲ್ಲಿ ಒಂದು ಹಳೆಯ ಫೋನ್ ಇದೆಯಲ್ಲ ಅದನ್ನಾದರೂ ರಿಪೇರಿ ಮಾಡಿಸಿ ಕೊಡು ಎಂದು ಕೇಳಿದ್ದಾನೆ. ಅಪ್ಪ ಇದಕ್ಕೆ ಸೊಪ್ಪು ಹಾಕದಿದ್ದಾಗ, ಮೊಬೈಲ್ ರಿಪೇರಿ ಮಾಡಿಸು ಅಂತ ಮಗ ತೇಜಸ್ ಹಠ ಮಾಡಲು ಆರಂಭಿಸಿದ್ದಾನೆ.
ಕಾರ್ಪೆಂಟರ್ ಕೆಲಸದಿಂದ ತನಗೆ ಬರುವ ಸ್ವಲ್ಪ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿರುವಾಗ ಇನ್ನು ಮಗನ ಇಷ್ಟಗಳನ್ನು ಈಡೇರಿಸಲು ಅಪ್ಪನಿಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ, ರವಿಕುಮಾರ್ ಕೆಲಸ ಮುಗಿಸಿ ಮನೆಗೆ ಬರುವಾಗ ಕುಡಿದು ಬಂದು ಮಗನನ್ನು ಬೈಯುತ್ತಿದ್ದ. ನಿನ್ನೆ ರಾತ್ರಿಯೂ ಕೂಡ ಮದ್ಯ ಸೇವಿಸಿ ಬಂದ ರವಿಕುಮಾರ್ ತನ್ನ ಮಗನಿಗೆ ಬೈಯಲು ಆರಂಭಿಸಿದ್ದಾನೆ. ನೀನು ಸರಿಯಾಗಿ ಓದಲ್ಲ, ಶಾಲೆಗೆ ಹೋಗಲ್ಲ, ಕೆಟ್ಟವರ ಸಹವಾಸ ಮಾಡ್ತೀಯಾ ಅಂತಾ ಗಲಾಟೆ ತೆಗೆದಿದ್ದಾರೆ. ಜೊತೆಗೆ, ನೀನು ಕೆಟ್ಟವರ ಸಂಘ ಮಾಡ್ತೀಯಾ, ಮೊಬೈಲ್ ಕೇಳ್ತೀಯಾ ಅಂತ ಮಗನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.
ಆದರೆ, ಹೀಗೆ ಮಗನ ಮೇಲೆ ಹಲ್ಲೆ ಮಾಡುವಾಗ ಆತನನ್ನು ಬ್ಯಾಟ್‌ನಿಂದ ಥಳಿಸಿ ಗೋಡೆಗೆ ತಳ್ಳಿದ್ದಾನೆ. ಆದರೆ, ಅಪ್ರಾಪ್ತ ಮಗ ತೇಜಸ್ ಅಪ್ಪ ದೂಡಿದ ರಭಸಕ್ಕೆ ಗೋಡೆಗೆ ಹೋಗಿ ತಲೆ ಹೊಡೆದುಕೊಂಡು ಅಲ್ಲಿಯೇ ರಕ್ತಸ್ರಾವ ಉಂಟಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ತಕ್ಷಣ ಮನೆಯವರು ಕೂಡಲೇ ಆತನನ್ನು ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಗ ತೇಜಸ್ ಸಾವಿಗೀಡಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಂದೆ ರವಿಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
Bangalore Father kills son over mobile dispute. 14 year old son Tejas has been hacked to death. The arrested father has been identified as Ravi Kumar.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm