ಬ್ರೇಕಿಂಗ್ ನ್ಯೂಸ್
24-11-24 04:33 pm Bangalore Correspondent ಕ್ರೈಂ
ಬೆಂಗಳೂರು, ನ 24: ಪ್ರೊಫೆಸರ್‌ಗೆ ಒಬ್ಬರಿಗೆ ಹನಿಟ್ರ್ಯಾಪ್ ಮಾಡಿ 3 ಕೋಟಿ ರೂ.ವಸೂಲಿ ಮಾಡಿ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಅಂಡ್ ಗ್ಯಾಂಗ್ ಸೇರಿದಂತೆ ಮೂವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಮೂಲದ ತಬಸುಂ ಬೇಗಂ (38), ಕಾರ್ಕಳದ ಅಜೀಂ ಉದ್ದೀನ್ (41), ಹಾಗೂ ಅಭಿಷೇಕ್ (33) ಬಂಧಿತರು. ಬೆಂಗಳೂರಿನ 46 ವರ್ಷದ ಪ್ರೊಫೆಸರ್ ಹನಿಟ್ರ್ಯಾಪ್‌ಗೆ ಒಳಗಾಗಿ ನರಕ ಅನುಭವಿಸಿದವರು
2018ರಲ್ಲಿ ಆರ್.ಟಿ. ನಗರದಲ್ಲಿ ಆರೋಪಿ ತಬಸಂ ಬೇಗಂ ಸಹೋದರ ಅಜೀಂ ಉದ್ದೀನ್ ಮಾಲಿಕತ್ವದ ಜಿಮ್‌ಗೆ ಪ್ರೊಫೆಸರ್ ಸೇರಿಕೊಂಡಿದ್ದರು. ಆ ವೇಳೆ ತಬುಸಂನ ಪರಿಚಯವಾಗಿತ್ತು. ಇಬ್ಬರ ನಡುವೆ ಆತ್ಮೀಯತೆ ಜೋರಾಗಿತ್ತು. ನಾನು ಹೆಚ್ಚಿನ ವ್ಯಾಸಂಗವನ್ನು ಮಾಡುತ್ತೇನೆ. ಅದಕ್ಕೆ ಹಣಕಾಸಿನ ಸಹಾಯ ಮಾಡುವಂತೆ ಪ್ರೊಫೆಸರ್ ಬಲಿ ಹಣ ಕೇಳಿದ್ಲು. ಇದಕ್ಕೆ ಪ್ರೊಫೆಸರ್ ಸಹಾಯ ಮಾಡುವುದಾಗಿ ಹೇಳಿದ್ದರು. ನಾನು ತಜೀಮ್ ಎಂಬ ಮಗುವನ್ನ ದತ್ತು ಪಡೆದು ಸಾಕುತ್ತಿರುವುದಾಗಿ ತಬಸಂ ಪ್ರೊಫೆಸರ್ ಬಳಿ ಹೇಳಿಕೊಂಡಿದ್ದಾಳೆ.
2018ರ ಅಕ್ಟೋಬರ್‌ನಲ್ಲಿ ಜಿಮ್‌ಗೆ ಬರುವುದನ್ನು ಬೇಗಂ ನಿಲ್ಲಿಸಿದಳು. ಈ ಬಗ್ಗೆ ಆಕೆಯ ಅಣ್ಣನ ಬಳಿ ಪ್ರೊಫೆಸರ್ ವಿಚಾರಿಸಿದಾಗ, ತಬಸಂಳನ್ನ ಆಕೆಯ ಪತಿ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದ. ಆಕೆಗೆ ಮದುವೆಯಾಗಿ ಮಗು ಇರುವ ವಿಷಯ ತಿಳಿದ ಪ್ರೊಫೆಸರ್, ಆತಂಕಗೊಂಡು ತಬಸಂಗೆ ಕರೆ ಮಾಡಿ ವಿಚಾರಿಸಿ, ಮದುವೆಯಾಗಿ ಮಗು ಇರುವ ವಿಚಾರವನ್ನು ಮರೆಮಾಚಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದಾಗಿ ತಬಸಂ ಆಕ್ರೋಶಗೊಂಡು ಆಕೆಯೊಂದಿಗೆ ಖಾಸಗಿಯಾಗಿ ಇರುವ ಪೋಟೋ ಮತ್ತು ವಿಡಿಯೋಗಳನ್ನು ದೂರುದಾರರಿಗೆ ಕಳುಹಿಸಿ ಇವುಗಳನ್ನು ನಿನ್ನ ಕಚೇರಿಗೆ ಹಾಗೂ ಕುಟುಂಬಸ್ಥರಿಗೆ ಶೇರ್ ಮಾಡಿ ನಿನ್ನ ಮರ್ಯಾದೆ ತೆಗಿತೀನಿ ಎಂದು ಧಮ್ಕಿ ಹಾಕಿದ್ದಾಳೆ. ನಂತರ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ.
ಇನ್ನು 2019ರಲ್ಲಿ ಆಕೆಯ ಸಹೋದರ ಅಜೀಂ ಪ್ರೊಫೆಸರ್ ನಿಂದ ಇದೇ ವಿಚಾರಕ್ಕೆ ಹಣ ಪಡೆದಿದ್ದ. ಈ ನಡುವೆ ಪೊಲೀಸ್ ಸೋಗಿನಲ್ಲಿ ಆರೋಪಿ ಅಭಿಷೇಕ್, ತಬಸಂಪರವಾಗಿ ಆಕೆ ಕೇಳುವಷ್ಟು ಹಣ ಕೊಡದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಆತಂಕಗೊಂಡ ದೂರುದಾರರು ಸಾಲಗಳನ್ನು ಮಾಡಿ ಹಂತ ಹಂತವಾಗಿ 3 ಕೋಟಿ ರೂ. ನೀಡಿದ್ದರು. ಪಡೆದಿರುವ ಸಾಲಕ್ಕೆ ಪ್ರತಿ ತಿಂಗಳು 1.25 ಲಕ್ಷ ಇಎಂಐ ಕಟ್ಟುತ್ತಿದ್ದಾರೆ. ಮೂರು ಕೋಟಿ ಹಣ ಲೂಟಿ ಮಾಡಿಯು ಇವರ ಹಣದ ದಾಹ ತೀರಲಿಲ್ಲ. ಆರೋಪಿಗಳು ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟು ಹಿಂಸೆ ಮಾಡುತ್ತಿದ್ದರು, ಇದರಿಂದ ಹಿಂಸೆ ತಾಳಲಾರದೆ ಸಿಸಿಬಿ ಪೊಲೀಸರ ಬಳಿ ಹೋಗಿ ದೂರು ನೀಡಿದ್ದರು.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು, ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
Honeytrap to professor in Bangalore, Udupi lady and gang loot three crores, three arrested. Tabasam Begum from Udupi and two others from karkala have been arrested on this case based on the compaint of the professor.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm