ಬ್ರೇಕಿಂಗ್ ನ್ಯೂಸ್
29-11-24 10:49 pm Bangalore Correspondent ಕ್ರೈಂ
ಬೆಂಗಳೂರು, ನ 29: ಇಂದಿರಾನಗರದಲ್ಲಿ ಪ್ರೇಯಸಿಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಆರವ್ ಹಾರ್ನಿ (21) ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದು, ಪ್ರೇಯಸಿಯು ಬೇರೆ ಯುವಕರೊಂದಿಗೆ ಸಲುಗೆಯಿಂದ ಇದ್ದ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಆರವ್, ಇಂದಿರಾನಗರದ ದಿ ರಾಯಲ್ ಲಿವಿಂಗ್ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿತನ್ನ ಪ್ರೇಯಸಿ ಮಾಯಾ ಗೊಗೋಯಿ (20) ಅವರನ್ನು ಕೊಲೆ ಮಾಡಿದ್ದ. ಆರವ್ ಮತ್ತು ಮಾಯಾ, ನ.23ರಂದು ಮಧ್ಯಾಹ್ನ ಒಟ್ಟಿಗೆ ಅಪಾರ್ಟ್‌ಮೆಂಟ್‌ಗೆ ಬಂದು ಕೊಠಡಿ ಬಾಡಿಗೆಗೆ ಪಡೆದಿದ್ದರು. ನಂತರ ಅದೇ ಕೊಠಡಿಯಲ್ಲಿತಂಗಿದ್ದರು. ಮಾಯಾ, ಸಹೋದ್ಯೋಗಿ ಯುವಕರೊಂದಿಗೆ ಹೆಚ್ಚು ಸಲುಗೆಯಿಂದ ಮಾತನಾಡುತ್ತಿದ್ದರು. ಈ ವಿಚಾರಕ್ಕೆ ಅಸಮಾಧಾನಗೊಂಡಿದ್ದ ಆರವ್, ಪ್ರೇಯಸಿ ಜತೆ ಆಗಾಗ್ಗೆ ಜಗಳವಾಡುತ್ತಿದ್ದ. ಅದೇ ರೀತಿ ನ.24ರಂದು ಮಧ್ಯಾಹ್ನ ಜಗಳವಾಡಿ ಮಾಯಾ ಅವರಿಗೆ ಮನಸೋ-ಇಚ್ಛೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ನಂತರ ಎರಡು ದಿನ ಶವದ ಜತೆಯೇ ಇದ್ದ ಆರೋಪಿಯು ಶವವನ್ನು ತುಂಡರಿಸಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಸಾಗಿಸುವ ಬಗ್ಗೆ ಯೋಚಿಸುತ್ತಾ ಕಾಲ ಕಳೆದಿದ್ದಾನೆ. ಆದರೆ, ಸಿಕ್ಕಿಬೀಳುವ ಭಯದಲ್ಲಿಆ ನಿರ್ಧಾರ ಕೈಬಿಟ್ಟಿದ್ದಾನೆ. ಅಂತಿಮವಾಗಿ ಶವವನ್ನು ಅಲ್ಲಿಯೇ ಬಿಟ್ಟು ನ.26ರಂದು ಬೆಳಗ್ಗೆ ಅಪಾರ್ಟ್‌ಮೆಂಟ್‌ನಿಂದ ಹೊರಬಂದು ಕ್ಯಾಬ್‌ನಲ್ಲಿಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರವ್, ಕ್ಯಾಬ್‌ನಲ್ಲಿನಗರ ರೈಲು ನಿಲ್ದಾಣಕ್ಕೆ ಹೋಗಿದ್ದ. ಅಪಾರ್ಟ್‌ಮೆಂಟ್ ಸುತ್ತಮುತ್ತಲಿನ ಸಿ.ಸಿ. ಕ್ಯಾಮೆರಾಗಳಲ್ಲಿಸೆರೆಯಾಗಿದ್ದ ಆ ಕ್ಯಾಬ್‌ನ ನೋಂದಣಿ ಸಂಖ್ಯೆಯ ವಿವರ ಆಧರಿಸಿ ಮೊದಲಿಗೆ ಚಾಲಕನನ್ನು ಪತ್ತೆ ಮಾಡಲಾಯಿತು. ನಂತರ ಆ ಚಾಲಕನ ವಿಚಾರಣೆ ನಡೆಸಿದಾಗ ಆರೋಪಿಯು ರೈಲು ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಂಡಿದ್ದ ವಿಚಾರ ಗೊತ್ತಾಯಿತು. ಆರೋಪಿ ರೈಲಿನಲ್ಲಿರಾಯಚೂರು, ಮಧ್ಯಪ್ರದೇಶ, ಉತ್ತರಪ್ರದೇಶ ಮಾರ್ಗವಾಗಿ ವಾರಣಾಸಿಗೆ ಹೋಗಿದ್ದ. ನಂತರ ವಾರಣಾಸಿಯಿಂದ ಶುಕ್ರವಾರ ಬೆಂಗಳೂರಿಗೆ ಹಿಂದಿರುಗಿದ್ದ ಆತನನ್ನು ಮೊಬೈಲ್ ಕರೆಗಳ ಸುಳಿವು ಆಧರಿಸಿ ದೇವನಹಳ್ಳಿ ಬಳಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ ;
ಕೇರಳ ಮೂಲದ ಆರವ್, ಬಿಬಿಎ ಓದಿದ್ದಾನೆ. ಕೆಲ ತಿಂಗಳ ಹಿಂದೆ ಆತ ಬೆಂಗಳೂರಿಗೆ ಬಂದು ಕೋರಮಂಗಲದ ಇನ್‌ಸ್ಟಿಟ್ಯೂಟ್‌ನಲ್ಲಿಡಿಪ್ಲೊಮಾ ಪೂರೈಸಿದ್ದ. ಈ ಮಧ್ಯೆ ಆತ ‘ಬಂಬಲ್’ ಡೇಟಿಂಗ್ ಆ್ಯಪ್‌ನಲ್ಲಿಮಾಯಾ ಅವರನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಪರಸ್ಪರರು ಆರು ತಿಂಗಳಿಂದ ಪ್ರೀತಿ ಮಾಡುತ್ತಿದ್ದರು. ಮಾಯಾ, ಈ ಹಿಂದೆ ಕೆಲಸ ಮಾಡುತ್ತಿದ್ದ ಕೋಡಿಹಳ್ಳಿಯ ಖಾಸಗಿ ಕಂಪನಿಯಲ್ಲಿಆರವ್‌ನನ್ನು ಇಂಟರ್ನ್‌ಶಿಪ್‌ಗೆ ಸೇರಿಸಿದ್ದರು.
ಅಸ್ಸಾಂ ಮೂಲದ ಮಾಯಾ ತನ್ನ ಅಕ್ಕನ ಜತೆ ಹೂಡಿಯ ಬಾಡಿಗೆ ಮನೆಯಲ್ಲಿವಾಸವಾಗಿದ್ದರು. ಅವರು ಎಚ್‌ಎಸ್‌ಆರ್ ಲೇಔಟ್‌ನ ಶಿಕ್ಷಣ ಸಂಸ್ಥೆಯಲ್ಲಿಕೆಲಸ ಮಾಡುತ್ತಿದ್ದರು. ಜೆ.ಬಿ.ನಗರದ ಪೇಯಿಂಗ್ ಗೆಸ್ಟ್‌ನಲ್ಲಿನೆಲೆಸಿದ್ದ ಆರವ್, ಆಗಾಗ್ಗೆ ಮಾಯಾ ಅವರನ್ನು ಭೇಟಿಯಾಗುತ್ತಿದ್ದ. ಮಾಯಾ ಬೇರೆ ಯುವಕನನ್ನು ಪ್ರೀತಿಸುತ್ತಿರಬಹುದೆಂದು ಅನುಮಾನಗೊಂಡಿದ್ದ ಆರೋಪಿ, ಪ್ರೇಯಸಿಯ ಕೊಲೆಗೆ ಸಂಚು ರೂಪಿಸಿದ್ದ. ಪೂರ್ವಯೋಜಿತ ಸಂಚಿನಂತೆ ಮಾಯಾ ಅವರನ್ನು ಅಪಾರ್ಟ್‌ಮೆಂಟ್‌ಗೆ ಕರೆದೊಯ್ದಿದ್ದ. ಮೊದಲೇ ಆನ್‌ಲೈನ್‌ನಲ್ಲಿಚಾಕು ಹಾಗೂ ನೈಲಾನ್ ಹಗ್ಗ ಖರೀದಿಸಿ ಅಪಾರ್ಟ್‌ಮೆಂಟ್‌ಗೆ ತೆಗೆದುಕೊಂಡು ಹೋಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿಯು ಅಪಾರ್ಟ್‌ಮೆಂಟ್‌ನ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾನೆ. ಆದರೆ, ಅಂತಿಮ ಕ್ಷಣದಲ್ಲಿಆತ್ಮಹತ್ಯೆಯ ನಿರ್ಧಾರ ಕೈಬಿಟ್ಟು ವಾರಣಾಸಿಗೆ ಹೋಗಿದ್ದ. ಕೇರಳದಲ್ಲಿರುವ ಆತನ ತಾಯಿ, ಮೊದಲ ಪತಿಯಿಂದ ವಿಚ್ಛೇದನ ಪಡೆದು ಎರಡನೇ ಮದುವೆಯಾಗಿದ್ದರು. ನಂತರ ಎರಡನೇ ಪತಿಯಿಂದಲೂ ವಿಚ್ಛೇದನ ಪಡೆದು ಮೂರನೇ ಮದುವೆಯಾಗಿದ್ದರು. ತಾಯಿಯಿಂದ ದೂರವಾಗಿದ್ದ ಆರವ್‌ನನ್ನು ಆತನ ಅಜ್ಜ ಸಾಕಿ ಬೆಳೆಸಿದ್ದರು. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಯಾ ಗೊಗೋಯಿ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಜತೆಗೆ ಯೂಟ್ಯೂಬ್ ವ್ಲಾಗರ್ ಕೂಡ ಆಗಿದ್ದರು. ಇತ್ತೀಚೆಗೆ ತನ್ನ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು, ಕೆಲ ವಿಡಿಯೊಗಳನ್ನು ಮಾಡಿ ಅಪ್‌ಲೋಡ್ ಮಾಡಿದ್ದರು.
Bengaluru police have apprehended a 21-year-old Kerala man for fatally stabbing a teenage girl from Assam in Indiranagar last weekend. The suspect, Aarav Hanoy, was arrested from Devanahalli, North Bengaluru, around 4 pm on Friday at the end of his four-day circuitous escape, police said.
10-12-24 10:47 pm
HK News Desk
Panchamasali Protest, Belagavi: ಬೆಳಗಾವಿ ಸುವರ್...
10-12-24 10:32 pm
Murudeshwara beach drowning bhatkal: ಮುರ್ಡೇಶ್...
10-12-24 10:03 pm
SM krishna school holiday: ಎಸ್ಸೆಂ ಕೃಷ್ಣ ನಿಧನ...
10-12-24 11:48 am
SM Krishna Death, Wikipedia; ಬೆಂಗಳೂರಿಗೆ 'ಸಿಲಿ...
10-12-24 11:34 am
10-12-24 10:57 pm
HK News Desk
Idli Guru, Franchise Fraud, Owner Karthik She...
09-12-24 10:12 pm
Assad dynasty; ಸಿರಿಯಾದಲ್ಲಿ 54 ವರ್ಷಗಳ ವಂಶಾಡಳಿತ...
09-12-24 12:17 pm
ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆ ; ಭಾ...
05-12-24 11:00 pm
Devendra Fadnavis, Maharashtra New CM; 'ಮಹಾ'...
04-12-24 01:29 pm
10-12-24 09:37 pm
Mangalore Correspondent
Ranjith Ballal Bike Accident, Kundapur, Manga...
09-12-24 11:05 pm
Swamiji, Mangalore, Waqf: ಬಾಂಗ್ಲಾ ವಿರುದ್ಧ ಇಸ್...
09-12-24 07:40 pm
Ullal, Mangalore, Accident, Netravathi bridge...
09-12-24 06:03 pm
ಜೋಕಾಲಿಗೆ ಸಿಲುಕಿ 3ನೇ ತರಗತಿ ಬಾಲಕಿ ಸಾವಿನ ಸುದ್ದಿಗ...
09-12-24 03:26 pm
10-12-24 11:18 pm
Mangalore Correspondent
Mangalore crime, Kadri police, robbery: ಕಂಕನಾ...
10-12-24 06:46 pm
ಕೇವಲ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರಿಗೆ ವ...
10-12-24 03:59 pm
Chikkamagaluru murder: ಸೋಶಿಯಲ್ ಮೀಡಿಯಾದಲ್ಲಿ ಪರ...
08-12-24 05:02 pm
ಷೇರು ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರ ಮೋಸ ; ನಕಲಿ ಟ...
07-12-24 09:48 pm