ಬ್ರೇಕಿಂಗ್ ನ್ಯೂಸ್
03-12-24 08:50 pm Bangalore Correspondent ಕ್ರೈಂ
ಬೆಂಗಳೂರು, ಡಿ 03: ನಕಲಿ ಮಾರಾಟಗಾರರು ಹಾಗು ನಕಲಿ ಗ್ರಾಹಕರನ್ನು ಸೃಷ್ಟಿಸಿ ಆನ್‌ಲೈನ್ ಇ-ಕಾಮರ್ಸ್ ವೇದಿಕೆ ಮೀಶೋ ಕಂಪನಿಗೆ ವಂಚಿಸಿದ್ದ ಗುಜರಾತ್ ರಾಜ್ಯದ ಮೂವರು ಆರೋಪಿಗಳನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉತ್ತಮ್ ಕುಮಾರ್, ಪಾರ್ಥ್ ಭಾಯ್ ಹಾಗೂ ಮೌಲಿಕ್ ಬಂಧಿತರು.
ಕಳೆದ ಏಳು ತಿಂಗಳ ಅವಧಿಯಲ್ಲಿ ಒಟ್ಟು 5.50 ಕೋಟಿ ರೂ ವಂಚನೆಯಾಗಿರುವ ಕುರಿತು ಕಂಪನಿಯ ನೋಡಲ್ ಅಧಿಕಾರಿ ನೀಡಿದ್ದ ದೂರಿನನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೀಶೋ ಆ್ಯಪ್‌ನ ಮೂಲಕ ಗ್ರಾಹಕರು ವಿವಿಧ ವಸ್ತುಗಳನ್ನು ಖರೀದಿಸಬಹುದು. ಈ ರೀತಿ ಖರೀದಿಸಿದ ವಸ್ತುಗಳಿಗೆ ಗ್ರಾಹಕರು ಆನ್‌ಲೈನ್ ಅಥವಾ ನಗದು ಮೂಲಕ ಪಾವತಿಸಬಹುದು. ಸೂರತ್‌ನಲ್ಲಿ ಓಂ ಸಾಯಿ ಫ್ಯಾಷನ್ ಎಂಬ ಹೆಸರಿನಲ್ಲಿ ನಕಲಿ ಕಂಪನಿ ತೆರೆದಿದ್ದ ಆರೋಪಿಗಳು, ಅದನ್ನು ಮಾರಾಟಗಾರ ಕಂಪನಿಯೆಂದು ಮೀಶೋದಲ್ಲಿ ರಿಜಿಸ್ಟರ್ ಮಾಡಿಸಿದ್ದರು. ನಂತರ ಮೀಶೋ ಆ್ಯಪ್ ಬಳಸಿ ತಾವೇ ಗ್ರಾಹಕರ ಸೋಗಿನಲ್ಲಿ ನಕಲಿ ಹೆಸರು ಮತ್ತು ವಿಳಾಸ ನೀಡಿ ಪ್ರತೀ ದಿನ ಸರಾಸರಿ 2000ರಿಂದ 2500 ವಿವಿಧ ಉತ್ಪನ್ನಗಳನ್ನು ಬುಕ್ ಮಾಡುತ್ತಿದ್ದರು.
ಆ ರೀತಿ ತಪ್ಪಾಗಿ ನೀಡಿದ ಗ್ರಾಹಕರ ವಿಳಾಸದಿಂದ ಉತ್ಪನ್ನಗಳು ವಾಪಸ್ ಮಾರಾಟಗಾರ ಕಂಪನಿಯಾಗಿರುವ ಓಂ ಸಾಯಿ ಫ್ಯಾಷನ್‌ಗೆ ಹಿಂತಿರುಗುತ್ತಿದ್ದವು. ಹಾಗೆ ಹಿಂತಿರುಗಿದ ಉತ್ಪನ್ನವಿರುವ ಪಾರ್ಸಲ್‌ನಲ್ಲಿರುವ ವಸ್ತುವನ್ನು ಬದಲಾಯಿಸುತ್ತಿದ್ದ ಆರೋಪಿಗಳು, 'ಪಾರ್ಸಲ್‌ನಲ್ಲಿದ್ದ ವಸ್ತು ಬದಲಾಗಿದೆ' ಎಂದು ವೀಡಿಯೋ ಮಾಡಿ ಆ ವೀಡಿಯೊವನ್ನು ಮೀಶೋ ಕಂಪನಿಯವರಿಗೆ ಕಳಿಸುತ್ತಿದ್ದರು. ಉತ್ಪನ್ನಗಳ ಮೌಲ್ಯದಷ್ಟು ಹಣವನ್ನು ಮೀಶೋ ಕಂಪನಿಯಿಂದ ಪಡೆದುಕೊಳ್ಳುತ್ತಿದ್ದರು.
ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ಮೀಶೋ ಕಂಪನಿಯಿಂದ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಲವು ಮೊಬೈಲ್ ಫೋನ್ ನಂಬರ್‌ಗಳ ಮಾಹಿತಿ ಸಂಗ್ರಹಿಸಿ ಗುಜರಾತ್‌ಗೆ ತೆರಳಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ರೀತಿ ಒಟ್ಟು 5.50 ಕೋಟಿ ರೂ.ಗಳನ್ನು ಇದುವರೆಗೂ ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. 2023ರಲ್ಲಿ ವೈಟ್ ಫೀಲ್ಡ್ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಯೂ ಸಹ ಇದೇ ಆರೋಪಿಗಳು ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
In a major cybercrime bust, Bengaluru police have arrested three individuals from Gujarat for allegedly defrauding Meesho, an online marketplace, of Rs 5.5 crore over seven months. The fraudsters, operating under the name "Om Sai Passion" in Surat, conspired to exploit Meesho's platform using fake customer profiles and false claims.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm