ಬ್ರೇಕಿಂಗ್ ನ್ಯೂಸ್
06-12-24 02:26 pm Mangalore Correspondent ಕ್ರೈಂ
ಮಂಗಳೂರು, ಡಿ.6: ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದಿದ್ದ ಯುವಕನೊಬ್ಬ ಜ್ಯೂಸ್‌ನಲ್ಲಿ ಅಮಲಿನ ಔಷಧಿ ಬೆರೆಸಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಯುವತಿಯೊಬ್ಬಳು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಜುಲೈ 21ರಂದು ಸಂತ್ರಸ್ತ ಯುವತಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕದ್ರಿ ರಸ್ತೆಯ ಬಳಿ ಕಾರು ಕೆಟ್ಟು ಹೋಗಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬಂದಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಎಂಬಾತ ಕಾರನ್ನು ಸರಿಪಡಿಸಿ, ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ ಬೈಲಿನ ಅಪಾರ್ಟ್‌ಮೆಂಟ್ ಒಂದಕ್ಕೆ ಬಿಟ್ಟು ಬಂದಿದ್ದ. ಈ ವೇಳೆ ಆಕೆಯ ಮೊಬೈಲ್ ನಂಬರ್ ಪಡೆದಿದ್ದು ಸಂಪರ್ಕದಲ್ಲಿದ್ದ. ಆ.8ರಂದು ಯುವತಿಯ ಮನೆ ಫ್ರಿಡ್ಜ್ ಕೆಟ್ಟು ಹೋಗಿದ್ದು, ಮನೆಯಲ್ಲಿ ಒಬ್ಬಳೇ ವಾಸವಿದ್ದುದರಿಂದ ಯುವತಿ ಸಹಾಯಕ್ಕಾಗಿ ಶಫಿನ್‌ಗೆ ಕರೆ ಮಾಡಿದ್ದಾಳೆ. ಆತ ತನ್ನ ಪರಿಚಿತ ರಿಪೇರಿಯವನನ್ನು ಯುವತಿಯ ಮನೆಗೆ ಕರೆದೊಯ್ದು ರಿಪೇರಿ ಮಾಡಿಸಿ ಬಳಿಕ ಮೆಕ್ಯಾನಿಕನ್ನು ಬಿಟ್ಟು ಬರುತ್ತೇನೆ ಎಂದು ಹೇಳಿದ್ದ. ಅಲ್ಲಿ ವರೆಗೆ ಫ್ರಿಡ್ಜ್ ಆನ್ ಮಾಡಬೇಡಿ ಎಂದು ಸೂಚಿಸಿದ್ದ. ಕೆಲವು ಹೊತ್ತಿನ ಬಳಿಕ ಶಫಿನ್ ವಾಪಸು ಬಂದಿದ್ದು, ಈ ವೇಳೆ ಹಣ್ಣು ಹಾಗೂ ಜ್ಯೂಸ್ ತಂದಿದ್ದ. ಜ್ಯೂಸ್ ಕುಡಿದ ಯುವತಿ ನಿದ್ದೆಗೆ ಜಾರಿದ್ದಳು. ಎಚ್ಚರಗೊಂಡಾಗ ಅನುಮಾನದಲ್ಲಿ ವಿಚಾರಿಸಿದಾಗ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದ. ಜತೆಗೆ ಮುಂದೆಯೂ ಸಹಕರಿಸಬೇಕು. ಇಲ್ಲದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಮಾಡಿರುವ ವೀಡಿಯೋವನ್ನು ಹಾಕುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಮತ್ತು ಜತೆಗೆ ತನ್ನ ಕಾರನ್ನು ಕೂಡ ಆತ ಕೊಂಡೊಯ್ದಿದ್ದ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.
ಈ ನಡುವೆ ಯುವತಿ ಮನೆಯವರು ಕಾರನ್ನು ಕೇಳಿದ್ದು ಆತನಿಂದ ಕಾರನ್ನು ಪಡೆದುಕೊಳ್ಳಲು ಯುವತಿ ಅ.25ರಂದು ಆತನ ವಿಳಾಸವನ್ನು ಹುಡುಕಿ ಉಳ್ಳಾಲ ದೇರಳಕಟ್ಟೆಯ ಆತ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾಗ ಕಾರು ಪಾರ್ಕಿಂಗ್ ಸ್ಥಳದಲ್ಲಿರುವುದು ಕಂಡುಬಂದಿದೆ. ವಾಚ್‌ಮನ್ ಬಳಿ ಮನೆಯ ವಿಳಾಸ ಪಡೆದು ಹೋಗಿ ಆತನ ತಾಯಿಯಲ್ಲಿ ಕಾರಿನ ಬಗ್ಗೆ ವಿನಂತಿಸಿದಾಗ ಅಲ್ಲಿದ್ದ ಶಫಿನ್‌ನ ಅಣ್ಣ ಮೊಹಮ್ಮದ್ ಶಿಯಾಬ್ ಕೂಡ ತನ್ನ ಮೇಲೆ ಕೈಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಜೊತೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಅ. 27ರಂದು ರಾತ್ರಿ 9 ಗಂಟೆ ವೇಳೆ ಮೊಹಮ್ಮದ್ ಶಫೀನ್ ಅಕ್ರಮವಾಗಿ ಯುವತಿಯ ಮನೆಗೆ ಪ್ರವೇಶಿಸಿ, ಆಕೆಯ ಬ್ಯಾಗ್‌ನಲ್ಲಿದ್ದ 62 ಸಾವಿರ ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿದ್ದ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
A fridge repair technician in Mangalore has been accused of raping a girl at her home in Kadri. The victim filed a complaint after the incident, which occurred following the repair of her car in Kadri. It is alleged that the accused assisted her during the repair and subsequently went to her home, where the assault took place.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm