ಬ್ರೇಕಿಂಗ್ ನ್ಯೂಸ್
06-12-24 09:25 pm Mangalore Correspondent ಕ್ರೈಂ
ಮಂಗಳೂರು, ಡಿ.6: ವ್ಯಕ್ತಿಯೊಬ್ಬರು ತನ್ನ ಮೊಬೈಲಿಗೆ ಬಂದಿದ್ದ VAHAN PARIVAHAN.apk ಫೈಲ್ ಅನ್ನು ಡೌನ್‌ಲೋಡ್ ಮಾಡಿದ್ದು, ಇದರ ಬೆನ್ನಲ್ಲೇ ಫ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಆಗಿದ್ದಲ್ಲದೆ ಸದ್ರಿ ಫ್ಲಿಪ್ ಕಾರ್ಟ್ ಖಾತೆಯ ಮೂಲಕ 1.31 ಲಕ್ಷ ಮೌಲ್ಯದ ವಸ್ತುಗಳನ್ನು ಖರೀದಿಸಿ ಮೋಸ ಎಸಗಿದ ಪ್ರಕರಣ ಮಂಗಳೂರಿನಲ್ಲಿ ನಡೆದಿತ್ತು. ಪ್ರಕರಣದ ಬೆನ್ನು ಹತ್ತಿದ ಸೈಬರ್ ಪೊಲೀಸರು ದೆಹಲಿ ಮೂಲದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಯದುನಂದನ್ (27) ಎಂಬವರು ಹಣ ಕಳಕೊಂಡವರಾಗಿದ್ದು ತನ್ನ ವಾಟ್ಸಾಪ್ ನಂಬರಿಗೆ ಎಪಿಕೆ ಫೈಲ್ ಬಂದಿದ್ದನ್ನು ಡೌನ್‌ಲೋಡ್ ಮಾಡುತ್ತಿದ್ದಂತೆ ಹಣ ಕಡಿತವಾಗಿತ್ತು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅ.ಕ್ರ 132/2024 ಕಲಂ : 66ಸಿ, 66ಡಿ, ಐಟಿ ಆಕ್ಟ್ & 318(4) ಬಿಎನ್ಎಸ್ ರಲ್ಲಿ ಪ್ರಕರಣ ದಾಖಲಾಗಿತ್ತು. ಯದುನಂದನ್ ಅವರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳಿಂದ 1,31,000/- ಮೌಲ್ಯದ ಎರಡು ಮೊಬೈಲ್ ಫೋನ್, 01-ಏರ್ ಪಾಡ್ ಹಾಗೂ ಗಿಫ್ಟ್ ವೋಚರ್ ಗಳನ್ನು ಖರೀದಿ ಮಾಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಫ್ಲಿಪ್ ಕಾರ್ಟ್ ಕಂಪನಿಯಿಂದ ಮಾಹಿತಿಯನ್ನು ಪಡೆದು ಪ್ರಕರಣ ದಾಖಲಾದ 48 ಗಂಟೆಯೊಳಗೆ ಸೆನ್ ಕ್ರೈಂ ಪೊಲೀಸ್ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಹಾಗೂ ಪಿಸಿ 2405 ತಿಪ್ಪಾರೆಡ್ಡಿ ದೆಹಲಿಗೆ ವಿಶೇಷ ಕರ್ತವ್ಯದಲ್ಲಿ ತೆರಳಿ ಪ್ರಕರಣದಲ್ಲಿ ಆರೋಪಿತನಾದ ದೆಹಲಿ ಮಾಳ್ವವಿಯಾ ನಗರ ನಿವಾಸಿ ಗೌರವ್ ಮಕ್ವಾನ್ (25) ಎಂಬಾತನನ್ನು ವಶಕ್ಕೆ ಪಡೆದು ಆರೋಪಿಯಿಂದ ಸದ್ರಿ ಪ್ರಕರಣಕ್ಕೆ ಸಂಬಂಧಿಸಿದ 2- ಅಂಡ್ರಾಯ್ಡ್ ಫೋನ್ ಸೇರಿದಂತೆ 5-ಐಪೋನ್ 15, 02-ಏರ್ ಪ್ಯಾಡ್, ಆರೋಪಿ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಸೇರಿದಂತೆ ಒಟ್ಟು 4,00,000/- ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಸೆನ್ ಠಾಣಾಧಿಕಾರಿಯೂ ಆದ ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ ಸದ್ರಿ ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ತನಿಖೆ ಮುಂದುವರೆದಿರುತ್ತದೆ.
The Mangaluru city police have arrested a youth from Delhi allegedly associated with a gang involved in defrauding people by gaining access to their bank accounts by sending android package kit (APK) file to their mobile phones using WhatsApp.
05-02-25 04:44 pm
HK News Desk
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am