Bangalore cyber crime, Shilpa Shetty: ಹೆಚ್ಚು ಹಣವಿರುವ ಬ್ಯಾಂಕ್ ಅಕೌಂಟ್ ಗಳ ಮೇಲೆ ಸೈಬರ್ ಕಳ್ಳರ ಗಾಳ ; ನಟಿ ಶಿಲ್ಪಾ ಶೆಟ್ಟಿ ಗಂಡನ ಹೆಸ್ರಲ್ಲಿ ಪಂಗನಾಮ, ತಾತನ ಅಕೌಂಟ್ ನಿಂದ 2.95 ಕೋಟಿ ರೂ. ಮಾಯ, ಯಾವಾಗ ಸಿಗತ್ತೆ ಸ್ವಾಮಿ ನಮ್ಮ ಹಣ ? 

06-12-24 10:00 pm       Bangalore Correspondent   ಕ್ರೈಂ

ಸೈಬರ್‌ ವಂಚನೆ ಪ್ರಕರಣಗಳು ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಕೆಲವು ದಿನಗಳಿಂದ ಹಣ ಕಳೆದುಕೊಂಡವರು ಸೈಬರ್‌ ಅಪರಾಧ ಠಾಣೆಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಬೆಂಗಳೂರು, ಡಿ.06: ಸೈಬರ್‌ ವಂಚನೆ ಪ್ರಕರಣಗಳು ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಕೆಲವು ದಿನಗಳಿಂದ ಹಣ ಕಳೆದುಕೊಂಡವರು ಸೈಬರ್‌ ಅಪರಾಧ ಠಾಣೆಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಖದೀಮರು ಹೊಸ ಮಾರ್ಗಗಳ ಮೂಲಕ ಹಣ ದೋಚುತ್ತಿರುವ ಪರಿಣಾಮ, ಪ್ರಕರಣ ಪತ್ತೆ ಹಚ್ಚುವುದೂ ಸೈಬರ್‌ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಇದುವರೆಗೂ ಉದ್ಯಮಿಗಳು, ಮಹಿಳೆಯರನ್ನು ಹೆಚ್ಚಾಗಿ ಗುರಿಯಾಗಿಸಿ ಹಣ ದೋಚುತ್ತಿದ್ದ ವಂಚಕರು, ಇದೀಗ ಖಾತೆಯಲ್ಲಿ ಹೆಚ್ಚು ಹಣವಿದ್ದ ವೃದ್ಧರ ಮಾಹಿತಿ ಕಲೆಹಾಕಿ ಅವರಿಗೆ ಗಾಳ ಹಾಕುತ್ತಿದ್ದಾರೆ. ಅವರ ಖಾತೆಯಲ್ಲಿದ್ದ ಹಣ ಪಡೆದು ವಂಚಿಸುತ್ತಿದ್ದಾರೆ. 

New bank money transfer rules from November 1, 2024: All you should know -  The Economic Times

ಹಣ ವರ್ಗಾವಣೆ ಮಾಡುವಂತೆ ಬೆದರಿಸುತ್ತಿದ್ದಾರೆ ; 

ಸೈಬರ್‌ ವಂಚಕರ ಗಾಳಕ್ಕೆ ನಗರದ 84 ವರ್ಷದ ವೃದ್ಧರೊಬ್ಬರು ಸಿಲುಕಿ 2.95 ಕೋಟಿ ಕಳೆದುಕೊಂಡಿದ್ದಾರೆ. ದಕ್ಷಿಣ ವಿಭಾಗದ ಸೈಬರ್‌ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯ ಪಾಪಯ್ಯ ಗಾರ್ಡನ್‌ನ 3ನೇ ಹಂತದ ನಿವಾಸಿ ಪಿ.ಎ.ಅಶ್ವತ್‌ ನಾರಾಯಣ ಹಣ ಕಳೆದುಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

'ವಂಚಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2008 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 318 (ಮೋಸ) ಹಾಗೂ 319ರ (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ' ಎಂದು ಪೊಲೀಸರು ಹೇಳಿದರು.

'ಅಶ್ವತ್‌ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತನ್ನ ಹೆಸರು ಆಕಾಶ್‌ ಕುಲಾರಿ ಎಂದು ಪರಿಚಯಿಸಿಕೊಂಡಿದ್ದ. ತಾವು BSNL ಬಿಲ್‌ ಪಾವತಿ ಮಾಡಿಲ್ಲ ಎಂದು ಹೇಳಿದ್ದ. ಅದಕ್ಕೆ ಅಶ್ವತ್ ನಾರಾಯಣ ಪ್ರತಿಕ್ರಿಯಿಸಿ, 'ಎಲ್ಲ ಬಿಲ್‌ ಪಾವತಿ ಮಾಡಿರುವುದಾಗಿ ತಿಳಿಸಿದ್ದರು'. ಹಲವು ವರ್ಷಗಳಿಂದ ಬಿಲ್‌ನ ಬಾಕಿ ಹಣ ಉಳಿಸಿಕೊಂಡಿದ್ದೀರಿ. ನಿಮ್ಮ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುವುದಾಗಿ ಹೇಳಿದ್ದ. ಬಳಿಕ, ವಿಡಿಯೊ ಕರೆ ಮಾಡಿದ್ದ ಸೈಬರ್‌ ಕಳ್ಳ, ನಿಮ್ಮ ಕೆನರಾ ಬ್ಯಾಂಕ್‌ ಖಾತೆಯು ಪುಣೆಯಲ್ಲಿದ್ದು, ಶಿಲ್ಪಾ ಶೆಟ್ಟಿ ಅವರ ಪತಿ ತಮ್ಮ ಖಾತೆಗೆ 60 ಲಕ್ಷ ವರ್ಗಾವಣೆ ಮಾಡಿದ್ದಾರೆ. ನಿಮ್ಮ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಆಗುತ್ತಿರುವ ಮಾಹಿತಿ ಲಭಿಸಿದೆ. ಖಾತೆಯಲ್ಲಿರುವ ಹಣದ ಮಾಹಿತಿ ನೀಡುವಂತೆ ಬೆದರಿಸಿದ್ದ. ಅಶ್ವತ್‌ ಅವರು ನಿಶ್ಚಿತ ಠೇವಣಿ(ಎಫ್‌.ಡಿ) ಸೇರಿದಂತೆ ಉಳಿತಾಯ ಖಾತೆಯಲ್ಲಿದ್ದ ಹಣದ ವಿವರವನ್ನು ವಂಚಕರಿಗೆ ನೀಡಿದ್ದರು' ಎಂದು ಪೊಲೀಸರು ಹೇಳಿದರು.

Supreme Court raps Karnataka HC judge over controversial comments, supreme  court, karnataka high court judge controversial remarks, justice v  srishananda, karnataka hc

ಹಣ ವರ್ಗಾವಣೆ:

ಹಣ ಪಾವತಿ ಮಾಡದಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗಬಹುದು ಎಂದು ವಂಚಕ ಬೆದರಿಸಿದ್ದ. ವಯಸ್ಸಾಗಿದೆ ಎಂದು ಹೇಳಿದಾಗ ಸಹಾಯ ಮಾಡುವ ನಾಟಕವಾಡಿ, ಹಣ ವರ್ಗಾವಣೆ ಮಾಡುವಂತೆ ವಂಚಕ ಹೇಳಿದ್ದ. ಆತನ ಮಾತು ನಂಬಿದ್ದ ದೂರುದಾರರು, ಐಡಿಬಿಐ ಖಾತೆಯಲ್ಲಿ ಎಫ್‌.ಡಿ ಇಟ್ಟಿದ್ದ 2.33 ಕೋಟಿ, ಐಸಿಐಸಿಐ ಬ್ಯಾಂಕ್‌ನಲ್ಲಿನ ಎಫ್‌.ಡಿ 49 ಲಕ್ಷ, ಎಸ್‌ಬಿಐನಲ್ಲಿ ಎಫ್‌.ಡಿಯಿಂದ 13 ಲಕ್ಷವನ್ನು ಬಿಡಿಸಿ ಒಟ್ಟು 2.95 ಕೋಟಿಯನ್ನು ಆರ್‌ಟಿಜಿಎಸ್‌ ಮೂಲಕ ಹಂತ ಹಂತವಾಗಿ ವಂಚಕನ ಖಾತೆಗೆ ವರ್ಗಾಯಿಸಿದ್ದರು ಎಂಬುದು ಗೊತ್ತಾಗಿದೆ.

Fraudsters threat, old man of illegal money transfer loses 2.95 crores in Bangalore. Fraudsters use name of actress Shilpa Shetty husband Raj Kundra alleging that he has transferred money to your account.