Udupi, Manipal, Fraud News: ಸ್ಟಾರ್ ಹೊಟೇಲುಗಳಲ್ಲಿ ಉಳಿದುಕೊಂಡು ಬಿಲ್ ಕೊಡದೆ ವಂಚನೆ ; ಮಣಿಪಾಲದಲ್ಲಿ ಸಿಕ್ಕಿಬಿದ್ದ ತಮಿಳುನಾಡಿನ ಅಜ್ಜ ! ದೇಶದ 49 ಕಡೆ ಕೇಸು ದಾಖಲು 

11-12-24 10:39 pm       Udupi Correspondent   ಕ್ರೈಂ

ದೇಶದ ವಿವಿಧೆಡೆ ಸ್ಟಾರ್ ಹೊಟೇಲ್ ಗಳಲ್ಲಿ ಕೊಠಡಿ ಪಡೆದು ಊಟ ತಿಂಡಿ ತಿಂದು ಸಾವಿರಾರು ರೂ. ಬಿಲ್ ಮಾಡಿ ಬಳಿಕ ಎಸ್ಕೇಪ್ ಆಗುತ್ತಿದ್ದ 67 ವರ್ಷದ ಅಜ್ಜನನ್ನು ಮಣಿಪಾಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಉಡುಪಿ, ಡಿ.11: ದೇಶದ ವಿವಿಧೆಡೆ ಸ್ಟಾರ್ ಹೊಟೇಲ್ ಗಳಲ್ಲಿ ಕೊಠಡಿ ಪಡೆದು ಊಟ ತಿಂಡಿ ತಿಂದು ಸಾವಿರಾರು ರೂ. ಬಿಲ್ ಮಾಡಿ ಬಳಿಕ ಎಸ್ಕೇಪ್ ಆಗುತ್ತಿದ್ದ 67 ವರ್ಷದ ಅಜ್ಜನನ್ನು ಮಣಿಪಾಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ತಮಿಳುನಾಡು ರಾಜ್ಯದ ತೂತುಕುಡಿಯ ಬಿಮ್ಸೆಂಟ್ ಜಾನ್(67) ಬಂಧಿತ ವ್ಯಕ್ತಿ. ಆರೋಪಿ ಡಿಸೆಂಬರ್ 7 ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್‌ನಲ್ಲಿ ರೂಮ್ ಪಡೆದುಕೊಂಡಿದ್ದ. ಮುಂಗಡ ಹಣವನ್ನು ಡಿಸೆಂಬರ್ 9ರಂದು ಕೊಡುವುದಾಗಿ ಹೇಳಿದ್ದ. ಬಳಿಕ ಡಿಸೆಂಬರ್ 12ರಂದು ರೂಮ್ ಚೆಕ್‌ಔಟ್ ಮಾಡುತ್ತೇನೆ, ಅಂದೇ ಒಟ್ಟು ಹಣವನ್ನೂ ಕೊಡುತ್ತೇನೆ ಎಂದು ಹೊಟೇಲ್ ಮ್ಯಾನೇಜರ್‌ನ್ನು ನಂಬಿಸಿದ್ದ. ಹೊಟೆಲ್‌ನಲ್ಲಿಯೇ ಊಟ ತಿಂಡಿ ಮಾಡಿ ಒಟ್ಟು 39,298 ರೂ. ಬಿಲ್ ಮಾಡಿದ್ದು, ಕೊನೆಗೆ ಹಣ ಕೊಡದೇ ಪರಾರಿಯಾಗಿದ್ದ. 

ಈ ಬಗ್ಗೆ ಹೊಟೇಲ್ ಸಿಬಂದಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್, ಆರೋಪಿ ಜೋನ್‌ ನನ್ನು ಮಣಿಪಾಲದಲ್ಲೇ ಬಂಧಿಸಿದ್ದಾರೆ. ಆರೋಪಿ ದೆಹಲಿ, ಮಹಾರಾಷ್ಟ್ರದ ಥಾಣೆ, ಕೇರಳದ ಕೊಲ್ಲಂ ಸೇರಿದಂತೆ ಹಲವು ರಾಜ್ಯಗಳಲ್ಲಿ ವಂಚನೆ ಮಾಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಸ್ಟಾರ್ ಹೊಟೇಲ್‌ಗಳಲ್ಲಿ ರೂಮ್ ಪಡೆದು ಸಾವಿರಾರು ರೂಪಾಯಿ ಬಿಲ್ ಮಾಡಿ, ಬಳಿಕ ಹಣ ಪಾವತಿಸದೆ ಪರಾರಿಯಾಗಿ ವಂಚಿಸುತ್ತಿದ್ದ. ಜಾನ್ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 49 ಪ್ರಕರಣಗಳು ದಾಖಲಾಗಿವೆ. ಆರೋಪಿಗೆ ಉಡುಪಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

A fraudster from Tamil Nadu has been arrested for deceiving a private five-star hotel in Manipal with a fake conference meeting. The Manipal police successfully arrested the accused, who has been targeting prestigious five-star hotels across the country and defrauding them.