ಬ್ರೇಕಿಂಗ್ ನ್ಯೂಸ್
17-12-24 07:34 pm Mangaluru Correspondent ಕ್ರೈಂ
ಕಾರ್ಕಳ, ಡಿ.17: ಹೋಂ ನರ್ಸ್ ಆಗಿ ಮನೆ ಕೆಲಸಕ್ಕೆ ಬಂದಿದ್ದ ಯುವಕನೊಬ್ಬ ಮನೆ ಯಜಮಾನರ ಗೂಗಲ್ ಪೇ ಪಿನ್ ಕದ್ದು ನೋಡಿ 9 ಲಕ್ಷ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಮುಂಬೈ ದಹಿಸರ್‌ನಲ್ಲಿ ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಕುಪ್ಪಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (28) ಮತ್ತು ತೆಳ್ಳಾರು ನಿವಾಸಿ ರತ್ನಾಕರ್ (50) ಬಂಧಿತರು. ಕಾರ್ಕಳ ಕಸಬಾ ಗ್ರಾಮದ ಶಶಿಧರ್ (75) ಅವರ ಕೋರಿಕೆಯಂತೆ 2ನೇ ಆರೋಪಿ ಅಲೈಟ್‌ಕೇರ್ ಎಂಬ ಸಂಸ್ಥೆಯ ರತ್ನಾಕರ್, ಕಾರ್ತಿಕ್ ಶೆಟ್ಟಿಯನ್ನು ಹೋಂ ನರ್ಸ್ ಆಗಿ ಮನೆಗೆ ಕೆಲಸಕ್ಕೆ ಸೇರಿಸಿದ್ದ. ಈ ವೇಳೆ ಶಶಿಧರ್ ಅವರಿಗೆ ವಯಸ್ಸಾಗಿರುವುದು ಮತ್ತು ಮುಗ್ಧರಾಗಿರುವುದನ್ನು ದುರುಪಯೋಗಪಡಿಸಿ ಅವರು ಬೇರೆಯವರಿಗೆ ಹಣ ವರ್ಗಾವಣೆ ಮಾಡುತ್ತಿದ್ದಾಗ ಗೂಗಲ್ ಪೇ ಪಿನ್ ನಂಬರ್ ಗಮನಿಸಿದ್ದ. ಅನಂತರ ಹಂತ ಹಂತವಾಗಿ ಇವರ ಮೊಬೈಲಿನಿಂದ 9.80 ಲಕ್ಷ ರೂಪಾಯಿ ಹಣವನ್ನು ಭಾರತ್ ಬ್ಯಾಂಕ್ ಕೋ ಆಪರೇಟಿವ್ ಸೊಸೈಟಿ ಖಾತೆಗೆ ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿದ್ದು ನಂಬಿಕೆ ದ್ರೋಹ ಮಾಡಿದ್ದಾಗಿ ದೂರಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಕಾರ್ಕಳ ನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆರೋಪಿಗಳು ಮುಂಬೈಯಲ್ಲಿ ತಲೆಮರೆಸಿಕೊಂಡ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಇಬ್ಬರು ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Karkala Police have arrested two men on the charges of illegally transferring money from the account of a person after getting to know his Google Pay pin. The two had joined work as home nurses at the residence of the victim and had fraudulently transferred nearly Rs 9 lakh after managing to find the Google Pay Pin of their employer.
11-03-25 06:19 pm
Bangalore Correspondent
ರಾಜ್ಯದ ಕಿರು ಫೈನಾನ್ಸ್ ಸಂಸ್ಥೆಗಳಲ್ಲಿ 40 ಸಾವಿರ ಕೋ...
11-03-25 03:41 pm
Ranya Rao gold smuggling case: ರನ್ಯಾ ರಾವ್ ಚಿನ...
11-03-25 02:27 pm
Ranya Rao Latest News: ವಿಧಾನಸಭೆಯಲ್ಲಿ ರನ್ಯಾ ಪ್...
10-03-25 09:51 pm
Yathindra, Muda Site: ಮುಡಾಕ್ಕೆ ಹಿಂತಿರುಗಿಸಿದ್ದ...
10-03-25 02:07 pm
10-03-25 10:17 pm
HK News Desk
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
Cricket Win India, Trophy 2025: ರೋಚಕ ಹಣಾಹಣಿಯಲ...
09-03-25 10:49 pm
Dubai, Kerala, Death Sentence: ದುಬೈನಲ್ಲಿ ಇಬ್ಬ...
08-03-25 04:03 pm
James Harrison, Golden Arm, Death: ಲಕ್ಷಾಂತರ ಮ...
05-03-25 05:38 pm
11-03-25 10:33 pm
Mangalore Correspondent
Mangalore Railway Station News: ರೈಲ್ವೇ ನಿಲ್ದಾ...
11-03-25 10:10 pm
Mangalore MP Brijesh Chowta, ISPRL: ಎಂಟು ವರ್ಷ...
11-03-25 08:42 pm
Katrina Kaif, Kukke Subrahmanya Temple, Mang...
11-03-25 03:19 pm
Mangalore Bakrabailu Subbaiah Shetty Death: ದ...
10-03-25 09:16 pm
11-03-25 07:34 pm
Bangalore Correspondent
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm
Koppal Rape, Crime, Arrest: ಪೆಟ್ರೋಲ್ ದುಡ್ಡು ಕ...
08-03-25 10:44 pm