ಬ್ರೇಕಿಂಗ್ ನ್ಯೂಸ್
20-12-24 08:20 pm HK News Desk ಕ್ರೈಂ
ಮಡಿಕೇರಿ, ಡಿ.20: ನಕಲಿ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿರಿಸಿ ಸಾಲ ಪಡೆದು ವಂಚಿಸುವ ವ್ಯವಸ್ಥಿತ ಜಾಲವನ್ನು ಭೇದಿಸಿರುವ ಕೊಡಗು ಪೊಲೀಸರು ಒಟ್ಟು 12 ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳು ಜಿಲ್ಲೆಯ ವಿವಿಧ ಬ್ಯಾಂಕ್ ಶಾಖೆಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಒಟ್ಟು 625 ಗ್ರಾಂ ತೂಕದ ನಕಲಿ ಚಿನ್ನವನ್ನು ಅಡಮಾನ ಇರಿಸಿ ₹ 34.95 ಲಕ್ಷ ರೂ. ಸಾಲ ಪಡೆದಿದ್ದು ಪತ್ತೆಯಾಗಿದೆ.
ಮಡಿಕೇರಿ ನಗರ, ವಿರಾಜಪೇಟೆ ನಗರ, ಗ್ರಾಮಾಂತರ ಮತ್ತು ಭಾಗಮಂಡಲ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ‍್ರಕರಣಗಳು ದಾಖಲಾಗಿದ್ದವು. ಪ್ರಮುಖ ಆರೋಪಿ ಪ್ರದೀಪ್ ವಿರುದ್ಧ ಇದೇ ವರ್ಷ 3 ಪ್ರಕರಣ ಸೇರಿ ಕೊಡಗು, ಕೇರಳದಲ್ಲಿ ಒಟ್ಟು 15 ಪ್ರಕರಣ ದಾಖಲಾಗಿವೆ. ನಿಶಾದ್ ಎಂಬಾತನ ಮೇಲೆ 1 ದರೋಡೆ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳಿವೆ. ಇವರು ಜಾಮೀನಿನ ಮೇಲೆ ಹೊರ ಬಂದು ಮತ್ತೆ ಮತ್ತೆ ಇದೇ ರೀತಿಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ರೂವಾರಿ ಕೇರಳದ ಮೊಹಮ್ಮದ್ ಕುಂಞ (48) ಎಂಬಾತನಾಗಿದ್ದು ಈತ ಕೇರಳದಲ್ಲಿ ಆಭರಣ ತಯಾರಕನಾಗಿ ಕೆಲಸ ಮಾಡುತ್ತಿದ್ದ. ಪ್ರದೀಪ್ (60) ಎಂಬಾತನಿಗೆ ಹಣ ನೀಡಿ ಚಿನ್ನ ಪರೀಕ್ಷಕರಿಗೆ ತಿಳಿಯದಂತೆ ಒಂದೂವರೆ ಗ್ರಾಂನಷ್ಟು ಚಿನ್ನದ ಕೋಟಿಂಗ್ ಹಾಕಿ ನಕಲಿ ಬಳೆಗಳನ್ನು ತಯಾರಿಸಿದ್ದ. ಮಧ್ಯವರ್ತಿ ನಿಶಾದ್ ಎಂಬಾತ ನಕಲಿ ಚಿನ್ನ ಪಡೆದು ನವಾಜ್ ಎಂಬಾತನಿಗೆ ನೀಡಿದ್ದ. ಕೊಡಗಿನಲ್ಲೂ ಇದೇ ಚಿನ್ನವನ್ನು ಅಡವಿಟ್ಟು ಸಾಲ ಪಡೆಯಲು ಆರಂಭಿಸಿದ್ದರು.
ಕೇರಳ ಗಡಿಭಾಗದ ಕುಂಜಿಲ ಗ್ರಾಮದ ಕೆ.ಎ.ಮೊಹಮ್ಮದ್ ರಿಜ್ವಾನ್ (35), ಅಬ್ದುಲ್ ನಾಸೀರ್ (50), ಪಡಿಯಾನಿ ಎಮ್ಮೆಮಾಡು ಗ್ರಾಮದ ಪಿ.ಎಚ್.ರಿಯಾಜ್ (39), ಬಿ.ಎ.ಮೂಸಾ (37), ಎಂ.ಎಂ.ಮಹಮ್ಮದ್ ಹನೀಫ್ (42), ಖತೀಜಾ (32), ಭಾಗಮಂಡಲದ ಅಯ್ಯಂಗೇರಿಯ ರಫೀಕ್ (38), ಫಾರಾನ್ (33), ಕೇರಳದ ಮಲಪ್ಪುರಂ ಜಿಲ್ಲೆಯ ಕೆ.ಪಿ.ನವಾಸ್ (47), ಎರ್ನಾಕುಲಂ ಜಿಲ್ಲೆಯ ಕೆ.ಎ.ನಿಶಾದ್ (43), ಸಿ.ಎಂ.ಮೊಹಮ್ಮದ್ ಕುಂಞ (48), ಪಿ.ಜೆ.ಪ್ರದೀಪ್ (60) ಬಂಧಿತರು.
ಆರೋಪಿಗಳಿಂದ 223 ಗ್ರಾಂ ತೂಕದ ಚಿನ್ನ ಲೇಪಿತ 28 ಬಳೆಗಳು, ನಗದು ₹ 2 ಲಕ್ಷ, ಬ್ಯಾಂಕ್ ಖಾತೆಗಳಲ್ಲಿ ₹ 2.08 ಲಕ್ಷ, ವಿಮೆ ಮೇಲೆ ಹೂಡಿಕೆ ₹ 1.08 ಲಕ್ಷ, ₹ 1.40 ಲಕ್ಷ ಮೌಲ್ಯದ ಒಂದು ಐಫೋನ್ ವಶಪಡಿಸಲಾಗಿದೆ.
ಆರೋಪಿ ಕೆ.ಎ.ಮೊಹಮ್ಮದ್ ರಿಜ್ವಾನ್ (35) ಎಂಬಾತ ಒಂದು ವಾರದ ಹಿಂದೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಡಿಕೇರಿ ಮುಖ್ಯ ಶಾಖೆಯಲ್ಲಿ ಎಂಟು ಚಿನ್ನದ ಬಳೆಗಳನ್ನು ಅಡವಿಟ್ಟು ಸಾಲ ಪಡೆದುಕೊಳ್ಳಲು ಮುಂದಾಗಿದ್ದ. ಪರಿಶೀಲನೆ ಸಂದರ್ಭದಲ್ಲಿ ಚಿನ್ನದ ಬಳೆಗಳು ನಕಲಿ ಎಂಬುದು ಗೊತ್ತಾಗಿತ್ತು. ಪರಿಶೀಲನೆ ವೇಳೆ ರಿಜ್ವಾನ್ ಈ ಹಿಂದೆ ಅಡಮಾನವಿಟ್ಟಿರುವ ಆಭರಣಗಳೂ ನಕಲಿ ಎಂಬುದು ತಿಳಿದುಬಂದಿತ್ತು. 265 ಗ್ರಾಮ್ ನಕಲಿ ಚಿನ್ನವನ್ನು ಅಡವಿಟ್ಟು ರಿಜ್ವಾನ್ ಒಬ್ಬನೇ 15 ಲಕ್ಷ ಸಾಲ ಪಡೆದಿದ್ದ. ಪೊಲೀಸರಿಗೆ ದೂರು ನೀಡುತ್ತಲೇ ಆರೋಪಿಯನ್ನು ಬಂಧಿಸಿ ಇಡೀ ಜಾಲದ ಪತ್ತೆಗಾಗಿ ವಿಶೇಷ ತನಿಖಾ ತಂಡ ನೇಮಿಸಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಈ ನಕಲಿ ಚಿನ್ನದ ಜಾಲ ಸಕ್ರಿಯವಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೇ ರೀತಿ ಆರೋಪಿಗಳು ಕಾಸರಗೋಡು, ಮಂಗಳೂರು ಭಾಗದಲ್ಲಿಯೂ ನಕಲಿ ಚಿನ್ನ ಇಟ್ಟು ಸಾಲ ಪಡೆದಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಡಿವೈಎಸ್‌ಪಿಗಳಾದ ಮಹೇಶ್ ರವಿ, ಸಿಪಿಐಗಳಾದ ಪಿ.ಕೆ.ರಾಜು ಪಿ.ಅನೂಪ್ ಮಾದಪ್ಪ, ಇನ್‌ಸ್ಪೆಕ್ಟರ್‌ಗಳಾದ ಮೇದಪ್ಪ, ಪಿಎಸ್‌ಐಗಳಾದ ಲೋಕೇಶ್ ಶೋಭಾ ಲಾಮಣಿ ಮತ್ತು ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.
A total of 10 accused have been arrested by Kodagu police in a fake gold jewellery loan scam reported across the banks in Kodagu. The police are yet to arrest two more accused in the case. Investigations are ongoing and the accused have been booked under BNS 111 under the organized crime section.
04-02-25 11:32 pm
HK News Desk
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
Mandya Car Canal Accident, Hassan Drowning: ಮ...
03-02-25 10:38 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am