ಬ್ರೇಕಿಂಗ್ ನ್ಯೂಸ್
15-12-20 02:43 pm Bangalore Correspondent ಕ್ರೈಂ
ಬೆಂಗಳೂರು, ಡಿ.15: ದೇವರಿಗೆ ಕೈಮುಗಿಯುವ ನೆಪದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಯುವಕನೊಬ್ಬ ದೇವರ ವಿಗ್ರಹವನ್ನೇ ಹೊತ್ತೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಚಿಕ್ಕಜಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕಜಾಲ ಠಾಣೆ ವ್ಯಾಪ್ತಿಯ ಹುಣಸೆಮಾರನಹಳ್ಳಿಯಲ್ಲಿ ಘಟನೆ ನಡೆದಿದ್ದು, ದೇವಸ್ಥಾನದಲ್ಲಿದ್ದ ಪ್ರಾಚೀನ ಪಂಚಲೋಹದ ವಿಗ್ರಹ ಕಳವಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಚೀನ ಪಂಚಲೋಹದ ವಿಗ್ರಹಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಇದ್ದು, ರೈಸ್ ಪುಲ್ಲಿಂಗ್ ಜಾಲದ ಖದೀಮರು ಇದನ್ನು ಕೋಟಿಗಟ್ಟಲೆ ದರಕ್ಕೆ ಮಾರುತ್ತಾರೆ. ಈ ಬಗ್ಗೆ ತಿಳಿದಿದ್ದ ರಘು ಎಂಬಾತ ಹುಣಸೆಮಾರನಹಳ್ಳಿಯ ಚಂದ್ರಮೌಳೇಶ್ವರನ ಮಠಕ್ಕೆ ಭಕ್ತನ ಸೋಗಿನಲ್ಲಿ ತೆರಳಿದ್ದ. ಮುಖ ಕಾಣದಂತೆ ಹೆಲ್ಮೆಟ್ ಧರಿಸಿಕೊಂಡೇ ಒಳಗೆ ನುಗ್ಗಿದ್ದ ಆರೋಪಿ, ಗರ್ಭಗುಡಿಗೆ ತೆರಳಿ ಅಲ್ಲಿಂದ ವಿಗ್ರಹವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಯಾರೂ ಇಲ್ಲದ ಸಂದರ್ಭ ಘಟನೆ ನಡೆದಿದ್ದು, ಸ್ಥಳೀಯರಿಗೆ ಗೊತ್ತಾಗದಂತೆ ಕೃತ್ಯ ನಡೆಸಿದ್ದ.

ನಾಲ್ಕು ಅಡಿ ಎತ್ತರದ ಚಂದ್ರಮೌಳೇಶ್ವರನ ವಿಗ್ರಹವಾಗಿದ್ದು, ಗರ್ಭಗುಡಿಯಿಂದ ಹೊರಗೊಯ್ದು ಬೈಕಿನಲ್ಲಿ ಪರಾರಿಯಾಗಿದ್ದ. ಹೀಗೆ ಎತ್ತಿಕೊಂಡು ಹೋಗುವುದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಳವು ಕೃತ್ಯದ ಬಗ್ಗೆ ತಿಳಿದ ಮಠದ ಗುರು ನಂಜೇಶ್ವರ ಸ್ವಾಮೀಜಿ ಚಿಕ್ಕಜಾಲ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಆಧರಿಸಿ, ಬೆನ್ನತ್ತಿದ ಪೊಲೀಸರು ಆರೋಪಿಯನ್ನು ವಿಗ್ರಹ ಸಹಿತ ಬಂಧಿಸಿದ್ದಾರೆ. ಆರೋಪಿ ರಘು ರೈಸ್ ಪುಲ್ಲಿಂಗ್ ಜಾಲದ ಖದೀಮರಿಗೆ ಮಾರಾಟ ಮಾಡಲು ಯೋಜನೆ ಹಾಕಿದ್ದ. ಹೀಗಿರುವಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪುರಾತನ ವಿಗ್ರಹಗಳಿಗೆ ನಿಗೂಢ ಶಕ್ತಿ ಇರುತ್ತದೆ. ಇದಕ್ಕೆ ವಿದೇಶದಲ್ಲಿ ಕೋಟ್ಯಂತರ ಬೆಲೆಬಾಳುತ್ತದೆ ಎಂದು ಶ್ರೀಮಂತರನ್ನು ನಂಬಿಸಿ, ಹಣ ಪಡೆಯುವ ಜಾಲ ಇದೆ. ಇದಕ್ಕಾಗೇ ಆರೋಪಿ ರಘು ವಿಗ್ರಹವನ್ನು ಕದ್ದು ಮಾರಾಟ ಮಾಡಲು ಯೋಜನೆ ರೂಪಿಸಿದ್ದ. ಆದರೆ, ಸಿಸಿಟಿವಿಯ ಜಾಲ ಆತನ ಕೃತ್ಯವನ್ನು ಬಯಲು ಮಾಡಿದೆ.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm