ಬ್ರೇಕಿಂಗ್ ನ್ಯೂಸ್
08-01-25 05:58 pm Mangaluru Correspondent ಕ್ರೈಂ
ಉಳ್ಳಾಲ, ಜ.8: ಕೆಲಸ ಮಾಡುತ್ತಿದ್ದ ಸಂಸ್ಥೆಯ ಗೋದಾಮಿನಲ್ಲಿ ನೆಲೆಸಿದ್ದ ಪಶ್ಚಿಮ ಬಂಗಾಳ ಮೂಲದ ಏಳು ಜನ ವಲಸೆ ಕಾರ್ಮಿಕರಿಗೆ ಐವರು ಯುವಕರ ತಂಡವೊಂದು ಏಕಾಏಕಿ ನುಗ್ಗಿ ಮರದ ಸೋಂಟೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಡ್ಯಾರು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕೋಟೆಕಾರು, ಬೀರಿಯ ಈವೆಂಟ್ ಸಂಸ್ಥೆಯೊಂದರಲ್ಲಿ ಡೆಕೊರೇಷನ್ ಕೆಲಸ ನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ದೀಪಂಕರ್ ದಾಸ್, ಬಿಪ್ಲವ್ ದಾಸ್, ಗಣೇಶ್ ಬೈದ್ಯ, ಆಕಾಶ್ ಗಯಾನ್, ಧನಂಜಯ ಮೋಂಡಲ್, ರಾಹುಲ್, ಪ್ರಶಾಂತ್ ಎಂಬವರ ಮೇಲೆ ದುಷ್ಕರ್ಮಿಗಳು ಮರದ ಸೋಂಟೆಗಳಿಂದ ಹಲ್ಲೆ ನಡೆಸಿದ್ದು, ಗಾಯಾಳುಗಳು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಗೊಳಗಾದ ಕಾರ್ಮಿಕರು ಮಂಗಳವಾರ ಮಂಗಳೂರಿನಲ್ಲಿ ಕೆಲಸ ಮುಗಿಸಿ ಮಡ್ಯಾರಿನ ಗೋದಾಮಿಗೆ ವಿಶ್ರಾಂತಿಗೆಂದು ತೆರಳಿದ್ದರು. ರಾತ್ರಿ ವೇಳೆ ಇನ್ನೋವಾ ಕಾರಲ್ಲಿ ಬಂದ ಐವರು ಅಪರಿಚಿತರು ಗೋದಾಮಿಗೆ ಏಕಾಏಕಿ ನುಗ್ಗಿ ವಲಸೆ ಕಾರ್ಮಿಕರನ್ನ ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀವು ಪಶ್ಚಿಮ ಬಂಗಾಳದಿಂದ ಬಂದವರು, ಇಲ್ಲಿ ಭಾರೀ ಹಾರಾಡುತ್ತೀರಾ, ನಿಮ್ಮ ಕೈ, ಕಾಲುಗಳನ್ನೇ ಮುರಿದು ಹಾಕುತ್ತೇವೆಂದು ಹೇಳಿ ಮರದ ಸೋಂಟೆಗಳಿಂದ ಮನಸೋ ಇಚ್ಚೆ ಏಳು ಮಂದಿ ಕಾರ್ಮಿಕರಿಗೆ ಥಳಿಸಿದ್ದಾರೆ.
ಗಂಭೀರ ಗಾಯಗೊಂಡ ವಲಸೆ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎಚ್.ಎನ್.ಬಾಲಕೃಷ್ಣ ಆಸ್ಪತ್ರೆಗೆ ತೆರಳಿ ಗಾಯಾಳುಗಳಿಂದ ಹಲ್ಲೆಕೋರರ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ನಡೆಸಿರುವ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡೆಕೋರೆಶನ್ ಕೆಲಸ ಮಾಡುವ ಎರಡು ತಂಡಗಳ ನಡುವಿನ ದ್ವೇಷದಲ್ಲಿ ಹಲ್ಲೆ ಘಟನೆ ನಡೆದಿದ್ದು ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ನಿವಾಸಿ ರಾಹುಲ್ (27), ಅಕ್ಷಯ್ (27), ಗುರುಮೂರ್ತಿ(25), ಸಿನ್ಚನ್ (19) ಬಂಧಿತರು ಎಂದು ತಿಳಿದುಬಂದಿದೆ.
Labour who was working at a event company was attacked by gang in ullal, Four arrested by police in Mangalore. Ullal inspector Balakrishan has taken action immediately and has arrested four connected to this case.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
17-01-25 11:10 pm
Mangalore Correspondent
Mangalore court, Rape, Crime: ಇನ್ಸ್ಟಾಗ್ರಾಮ್ ನ...
17-01-25 10:58 pm
Ullal News, Mangalore: ಸೋಮೇಶ್ವರ ; ಬಾಡಿಗೆ ಮನೆಯ...
17-01-25 10:50 pm
Mangalore Koteker Bank Robbery, MP Brijesh Ch...
17-01-25 10:36 pm
CM Siddaramaiah, RGUHS Mangalore; ರಾಜೀವ ಗಾಂಧಿ...
17-01-25 07:42 pm
17-01-25 07:58 pm
Mangaluru Correspondent
Kotekar Bank Robbery, Mangalore Crime; ಬೀದರ್...
17-01-25 03:02 pm
Bidar SBI Bank Robbery Update, Hyderabad Firi...
17-01-25 02:48 pm
Bidar SBI Bank Robbery; ಬೀದರ್; ATM ಹಣಹಾಕಲು ಬಂ...
16-01-25 03:10 pm
Fake Stock Market scam, Mangalore, Police: ನಕ...
15-01-25 11:06 pm