Share Market Scam, Mangalore: ಷೇರು ಮಾರುಕಟ್ಟೆ ಹೆಸರಲ್ಲಿ 10.32 ಲಕ್ಷ ವಂಚನೆ ; ಕಮಿಷನ್ ಆಸೆಗೆ ಹಣ ವರ್ಗಾಯಿಸಲು ಬ್ಯಾಂಕ್ ಖಾತೆ ನೀಡಿದ್ದ ತ್ರಿಶೂರ್ ನಿವಾಸಿ ಬಂಧನ

09-01-25 10:43 pm       Mangalore Correspondent   ಕ್ರೈಂ

ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚು ಲಾಭ ಸಿಗಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 10.32 ಲಕ್ಷ ಹೂಡಿಕೆ ಮಾಡಿಸಿ ಮೋಸ ಮಾಡಿದ ಪ್ರಕರಣದಲ್ಲಿ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯನ್ನು ಬೆನ್ನತ್ತಿದ ಮಂಗಳೂರು ಪೊಲೀಸರು ಕೇರಳದ ತ್ರಿಶ್ಶೂರ್ ಜಿಲ್ಲೆಯ ಯುವಕನನ್ನು ಬಂಧಿಸಿದ್ದಾರೆ.

ಮಂಗಳೂರು, ಜ.9: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚು ಲಾಭ ಸಿಗಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 10.32 ಲಕ್ಷ ಹೂಡಿಕೆ ಮಾಡಿಸಿ ಮೋಸ ಮಾಡಿದ ಪ್ರಕರಣದಲ್ಲಿ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯನ್ನು ಬೆನ್ನತ್ತಿದ ಮಂಗಳೂರು ಪೊಲೀಸರು ಕೇರಳದ ತ್ರಿಶ್ಶೂರ್ ಜಿಲ್ಲೆಯ ಯುವಕನನ್ನು ಬಂಧಿಸಿದ್ದಾರೆ.

ಮಂಗಳೂರಿನ ವ್ಯಕ್ತಿಗೆ ವಾಟ್ಸಪ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವಂತೆ ಹೇಳಿ ಮೆಸೇಜ್ ಬಂದಿತ್ತು. ಅದನ್ನು ನಂಬಿ ಅಪರಿಚಿತರು ಸೂಚಿಸಿದ ಮಾದರಿಯಲ್ಲಿ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದರು. ಒಟ್ಟು 10.32 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದು, ಆನಂತರ ಅದನ್ನು ಹಿಂದೆ ಪಡೆಯಲಾಗದೆ ಮೋಸ ಹೋಗಿದ್ದರು. ಕೃತ್ಯದ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ತಾನು ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಖಾತೆಗಳ ಮಾಹಿತಿಯನ್ನೂ ನೀಡಿದ್ದರು.

ಪೊಲೀಸರು ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿ, ಅದರಿಂದ ಯಾವೆಲ್ಲ ಖಾತೆಗಳಿಗೆ ಹಣ ರವಾನೆಯಾಗಿದೆ ಎಂದು ತನಿಖೆ ನಡೆಸಿದ್ದಾರೆ. ಈ ವೇಳೆ ತ್ರಿಶ್ಶೂರು ಜಿಲ್ಲೆಯ ಮಟ್ಟೂರು ಚೆಂಬುಚೀರ ನಿವಾಸಿ ನಿಧಿಶ್ ಕುಮಾರ್ ಎಂಬಾತನ ಖಾತೆಗೆ ಒಂದು ಲಕ್ಷ ಹಣ ರವಾನೆಯಾಗಿರುವುದು ಪತ್ತೆಯಾಗಿತ್ತು. ಸ್ನೇಹಿತನೊಬ್ಬ ತಿಳಿಸಿದಂತೆ ಬಂದಿದ್ದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು, ಇದಕ್ಕಾಗಿ ಕಮಿಷನ್ ಹಣವನ್ನೂ ಪಡೆದಿದ್ದ. ಈ ಬಗ್ಗೆ ವಿಚಾರಣೆ ಸಲುವಾಗಿ ಮಂಗಳೂರು ಪೊಲೀಸರು ನಿಧಿಶ್ ನನ್ನು ವಶಕ್ಕೆ ಪಡೆದಿದ್ದಾರೆ. ಸೆನ್ ಠಾಣೆಯ ಎಸಿಪಿ ರವೀಶ್ ನಾಯ್ಕ್, ಪೊಲೀಸ್ ನಿರೀಕ್ಷಕ ಸತೀಶ್ ಎಂ. ಮತ್ತು ಪಿಎಸ್ಐ ಗುರಪ್ಪ ಕಾಂತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

Share marker scam 10.32 lakhs fraud, accused from thrissur arrested by Mangalore police.